ಉದ್ದಿಮೆಗಳಿಗೆ ಆಕ್ಸಿಜನ್ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!
* ದೇಶದಲ್ಲಿ ಹೊಸ ಕೊರೋನಾ ಕೇಸ್ಗಳ ಇಳಿಕೆ ಹಾಗೂ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಬೇಡಿಕೆ ಇಳಿಕೆ
* ಉದ್ದಿಮೆಗಳಿಗೆ ಆಕ್ಸಿಜನ್ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ
* ಆದ್ಯತೆಯ ಮೇರೆಗೆ ಕೆಲ ಕೈಗಾರಿಕೋದ್ಯಮಗಳಿಗೆ ಆಮ್ಲಜನಕ ಬಳಸಲು 2-3 ದಿನಗಳಲ್ಲಿ ಅವಕಾಶ
ನವದೆಹಲಿ(ಮೇ.31): ದೇಶದಲ್ಲಿ ಹೊಸ ಕೊರೋನಾ ಕೇಸ್ಗಳ ಇಳಿಕೆ ಹಾಗೂ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಬೇಡಿಕೆ ಇಳಿಕೆಯಾಗಿರುವ ಬೆನ್ನಲ್ಲೇ, ದ್ರವರೂಪದ ಆಮ್ಲಜನಕ ಬಳಕೆ ಮಾಡಲು ಉದ್ಯಮಗಳಿಗೆ ಹೇರಲಾಗಿರುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಇನ್ನೂ 2-3 ದಿನಗಳಲ್ಲಿ ತೆರವುಗೊಳಿಸುವ ಸಾಧ್ಯತೆಯಿದೆ.
ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, ‘ಇದೀಗ ವೈದ್ಯಕೀಯ ಆಮ್ಲಜನಕದ ಬೇಡಿಕೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಕೆಲ ಕೈಗಾರಿಕೋದ್ಯಮಗಳಿಗೆ ಆಮ್ಲಜನಕ ಬಳಸಲು 2-3 ದಿನಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ’ ಎಂದಿದ್ದಾರೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
ದೇಶಾದ್ಯಂತ ಕೊರೋನಾ ವೈರಸ್ನ 2ನೇ ಅಲೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಉಸಿರಾಟ ಸಮಸ್ಯೆಗೆ ಸಿಲುಕುತ್ತಿದ್ದವರಿಗೆ ತ್ವರಿತ ಮತ್ತು ಹೆಚ್ಚು ಮಂದಿಗೆ ಆಮ್ಲಜನಕ ಪೂರೈಸಲು ಕೇಂದ್ರ ಸರ್ಕಾರ, ವೈದ್ಯಕೀಯೇತರ ಕಾರಣಕ್ಕಾಗಿ ದ್ರವರೂಪದ ಆಮ್ಲಜನಕ ಬಳಸದಂತೆ ನಿರ್ಬಂಧ ಹೇರಿತ್ತು. ಅಲ್ಲದೆ ಆಮ್ಲಜನಕ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಖಾಸಗಿ ಕಂಪನಿಗಳಿಗೆ ಸೂಚಿಸಿದ್ದ ಕೇಂದ್ರ ಸರ್ಕಾರವು, ಅದನ್ನು ತನ್ನ ಬಳಕೆಗೆ ನೀಡಬೇಕು ಎಂದು ಹೇಳಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona