ವುಹಾನ್ಕೊ(ಮೇ.30): ರೋನಾ ವೈರಸ್ ಹುಟ್ಟಿಕೊಂಡಿದ್ದು ಹೇಗೆ ಎಂಬ ವಿಚಾರವಾಗಿ ಅಮೆರಿಕಾ ಹಾಗೂ ಚೀನಾ ನಡುವೆ ಭುಗಿಲೆದ್ದ ವಿವಾದಗಳ ಮಧ್ಯೆ ಇಬ್ಬರು ವಿಜ್ಞಾನಿಗಳು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಚೀನಾದ ವಿಜ್ಞಾನಿಗಳೇ ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ವೈರಸ್‌ ನಿರ್ಮಿಸಿದ್ದಾರೆ. ಇದು ನೈಸರ್ಗಿಕವಾಗೇ ಹುಟ್ಟಿಕೊಂಡಿದೆ ಹುಟ್ಟಿದೆ ಎಂಬ ಸಂದೇಶ ಕೊಡಲು, ಯಾರಿಗೂ ಅನುಮಾನ ಬರಬಾರದೆಂದು ರಿವರ್ಸ್‌ ಇಂಜಿನಿಯರಿಂಗ್ ವರ್ಷನ್‌ನಿಂದ ಟ್ರ್ಯಾಕ್‌ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚೀನಾದ ರೆಟ್ರೋ ಇಂಜಿನಿಯರಿಂಗ್‌ನ ಸಾಕ್ಷಿ ತಮ್ಮ ಬಳಿ ಇದೆ ಎಂದು ಇವರು ವಾದಿಸಿದ್ದಾರೆ.

ಲಸಿಕೆಗಾಗಿ ನಡೆದ ಸಂಶೋಧನೆ ವೇಳೆ ಹಲವಾರು ಸಾಕ್ಷಿ 

ಇಂತಹುದ್ದೊಂದು ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಇಬ್ಬರು ವಿಜ್ಞಾನಿಗಳಾದ ಡಲ್ಗಲಿಶ್ ಹಾಗೂ ಸೊರೇನ್‌ಸೆನ್‌, ಈ ವೈರಸ್‌ನಲ್ಲಿ ತಮಗೆ ವಿಭಿನ್ನ ಫಿಂಗರ್‌ಪ್ರಿಂಟ್ಸ್‌ ಲಭ್ಯವಾಗಿದೆ. ಇದರಿಂದ ಈ ವೈರಸ್‌ ಲ್ಯಾಬ್‌ನಲ್ಲೇ ತಯಾರಿಸಲಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ. ತಾವು ಈ ಸಂಶೋಧನೆಯನ್ನು ಜಗತ್ತಿನೆದುರು ತೆರೆದಿಡಲು ಯತ್ನಿಸಿದೆವು. ಆದರೆ ಎಲ್ಲರೂ ಇದು ಬಾವಲಿಯಿಂದ ಹರಡಿದೆ ಎಂಬುವುದನ್ನೇ ಹೇಳಿ ತಮ್ಮ ಸಂಶೋಧನೆಯನ್ನು ಕಡೆಗಣಿಸಿದರು. ಆದರೆ ವಾಸ್ತವವಾಗಿ ಸಾರ್ಸ್‌ ಕೊರೋನಾ ವೈರಸ್ 2 ಪ್ರಾಕೃತಿಕವಾಗಿ ಆಗಿದ್ದಲ್ಲ, ಪ್ರಯೋಗ ಶಾಲೆಯಲ್ಲೇ ಅಭಿವೃದ್ಧಪಡಿಸಲಾಗಿದೆ. ಈ ವಿಚಾರವಾಘಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.

ಇನ್ನು ವೈರಸ್‌ನ ಡೇಟಾ ಬಚ್ಚಿಟ್ಟು, ಮ್ಯನುಪುಲೇಟ್‌ ಮಾಡಿದರು. ಅಲ್ಲದೇ ಯಾವೆಲ್ಲಾ ಈ ವಿಜ್ಞಾನಿಗಳು ವೈರಸ್‌ ಹುಟ್ಟಿನ ಬಗ್ಗೆ ಬಾಯ್ಬಿಚ್ಚಲು ಯತ್ನಿಸಿದರೋ ಅವರೆಲ್ಲರೂ ನಿಗೂಢವಾಗಿ ನಾಪತ್ತೆಯಾದರು ಎಂದಿದ್ದಾರೆ. 

ಈ ವಿಜ್ಞಾನಿಗಳು ಯಾರು? 

ಇನ್ನು ಕೊರೋನಾ ವೈರಸ್‌ ಪ್ರಾಕೃತಿಕವಲ್ಲ, ಚೀನಾ ನಿರ್ಮಿತ ವೈರಸ್ ಎಂದಿರುವ ವಿಜ್ಞಾನಿಗಳಲ್ಲಿ ಒಬ್ಬರು ಬ್ರಿಟಿಷ್ ಪ್ರೊಫೆಸರ್ ಎಂಗುಸ್ ಡಲ್ಗಲಿಶ್. ಪ್ರೊ| ಡಲ್ಗಲಿಶ್ ಸೇಂಟ್‌ ಜಾರ್ಜ್ ಯೂನಿವರ್ಸಿಟಿ ಲಂಡನ್‌ನಲ್ಲಿ ಆಂಕಾಲಜಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಚ್‌ಐವಿ ಲಸಿಕೆ ಕಂಡು ಹುಡುಕುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. 

ಇನ್ನು ನಾರ್ವೆಜಿಯನ್ ವಿಜ್ಞಾನಿ ಡಾ. ಬಿರ್ಗರ್ ಸೊರೇನ್‌ಸೆನ್‌ ಫಾರ್ಮಾ ಕಂಪನಿಯಲ್ಲಿ ವೈರಾಲಜಿಸ್ಟ್ ಆಗಿದ್ದು, ಇವರು ಕೂಡಾ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ.

ವೈಜ್ಞಾನಿಕ ವೈರಸ್ ಮೂಲದ ಬಗ್ಗೆ ಇನ್ನೂ ಅನುಮಾನ

ಇಲ್ಲಿಯವರೆಗೆ, ವಿಜ್ಞಾನಿಗಳು ವೈರಸ್ ಮೂಲದ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ನೈಸರ್ಗಿಕ ಸೋಂಕಿನಿಂದ ವೈರಸ್ ಪ್ರಾಣಿಗಳಿಂದ ಮನುಷ್ಯಗೆ ಹರಡುತ್ತದೆ ಎಂಬ ಮಾಹಿತಿಯಿದೆ.

ಅಮೆರಿಕ ಏಕೆ ವಿವಾದದಲ್ಲಿದೆ?

ವಾಸ್ತವವಾಗಿ, ಮಾನವರಲ್ಲಿ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿ ಹರಡುತ್ತಿರುವ ಪರಿಣಾಮವನ್ನು ಅಧ್ಯಯನ ಮಾಡಲು ಸಂಶೋಧನೆ ನಡೆಸಲಾಗುತ್ತದೆ.‘Gain of Function’ ಸಂಶೋಧನೆಯಲ್ಲಿ ವೈರಸ್ ಅನ್ನು ಹೆಚ್ಚು ಸಾಂಕ್ರಾಮಿಕವಾಗಿಸಲು ತಿರುಚಲಾಗುತ್ತದೆ. ಈ ಮೂಲಕ ಅದು ಪ್ರಯೋಗಾಲಯದಲ್ಲಿ ಇದು ಮಾನವ ಜೀವಕೋಶಗಳಲ್ಲಿ ಪುನರಾವರ್ತಿಸುವಂತೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಇದನ್ನು ಉತ್ತಮವಾಗಿ ಅಧ್ಯಯನ ಮಾಡಲು ಮತ್ತು ವೈರಸ್ ಬಗ್ಗೆ ಹೆಚ್ಚಿನ ಮಾಹಿ ಕಲೆ ಹಾಕಲು ಸಹಾಯಕವಾಗುತ್ತದೆ. ಇದೇ ಪ್ರಾಜೆಕ್ಟ್‌ನಡಿ ಚೀನಾದ ಗುಹೆಗಳಲ್ಲಿ ಸಿಗುವ ಬಾವಲಿಗಳಿಂದ ಕೊರೋನಾ ವೈರಸ್ ಸಂಗ್ರಹಿಸಲಾಗಿದೆ. ಬಳಿಕ ಇದನ್ನು ಲ್ಯಾಬ್‌ಗಳಲ್ಲಿ ಮತ್ತಷ್ಟು ಅಪಾಯಕಾರಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುವುದು ಡಲ್ಗಲಿಶ್ ಹಾಗೂ ಸೊರೇನ್‌ಸೆನ್‌ ವಾದವಾಗಿದೆ.

ವಿಜ್ಞಾನಿಗಳ ವಾದದ ಹಿಂದಿನ ಆಧಾರವೇನು?

ಇಂತಹುದ್ದೊಂದು ವಾದ ಮುಂದಿಡಲು ತಮ್ಮ ಬಳಿ ಸೂಕ್ತ ಸಾಕ್ಷಿ ಇದೆ ಎಂಬುವುದು ವಿಜ್ಞಾನಿಗಳ ವಾದವಾಗಿದೆ.  ವೈರಸ್‌ನಲ್ಲಿ ನಾಲ್ಕು ಅಮೈನೋ ಆಮ್ಲಗಳಿವೆ ಎಂಬುವುದನ್ನು ಕಂಡುಕೊಂಡಾಗ ಈ ಬಗ್ಗೆ ಅನುಮಾನ ಮೂಡಿತ್ತು. ಯಾಕೆಂದರೆ ಭೌತಶಾಸ್ತ್ರದ ನಿಯಮಗಳ ಪ್ರಕಾರ, ಧನಾತ್ಮಕ ಆವೇಶದ ನಾಲ್ಕು ಅಮೈನೋ ಆಮ್ಲಗಳು ಒಂದಾಗಿ ಇರಲು ಸಾಧ್ಯವಿಲ್ಲ. ಕೃತಕವಾಗಿ ನಿರ್ಮಿಸಿದಾಗಷ್ಟೇ ಹೀಗಾಗಲು ಸಾಧ್ಯ. ಮಾನವ ಜೀವಕೋಶಗಳಿಗೆ ಅಂಟಿಕೊಂಡತರೆ ಇದು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಾಡಾಗುತ್ತದೆ ಎಂದಿದ್ದಾರೆ.

ವಿವಾದದ ಸುಳಿಯಲ್ಲಿ ಅಮೆರಿಕದ ಆರೋಗ್ಯ ಸಚಿವ

ಅಮೆರಿಕದ ಕೆಲ ಸಚಿವರು ಕೂಡಾ ಚೀನಾ ಲ್ಯಾಬ್‌ನಲ್ಲಿ ತಯಾರಾದ ಈ ವೈರಸ್‌ ಸುಳಿಯಲ್ಲಿ ಸಿಕ್ಕಾಕೊಂಡಿದ್ದಾರೆ. ಅಮೆರಿಕದ ಆರೋಗ್ಯ ಅಧಿಕಾರಿಗಳು ಈ ಅಪಾಯಕಾರಿ ಹಾಗೂ ವಿವಾದಾತ್ಮಕ ಸಂಶೋಧನೆ ನಡೆಸಲು ವುಹಾನ್‌ ಲ್ಯಾಬ್‌ಗೆ ಬೇಕಾದ ಅನುದಾನ ಬಿಡುಗಡೆಗೊಳಿಸಿದ್ದರೆಂಬ ಆರೋಪವಿದೆ. ಅಂದಿನ ಒಬಾಮಾ ಸರ್ಕಾರ ಯಾವ ಗೇನ್‌ ಆಫ್ ಫಂಕ್ಷನ್‌ನ್ನು ಕಾನೂನುಬಾಹಿರವೆಂದು ಘೋಷಿಸಿದ್ದರೋ ಅಮೆರಿಕದ ಕೆಲ ಅಧಿಕಾರಿಗಳು ಅದೇ ಪ್ರಾಜೆಕ್ಟ್‌ಗೆ ಚೀನಾದ ವುಹಾನ್‌ ಲ್ಯಾಬ್‌ಗೆ ಹಣ ಬಿಡುಗಡೆಗೊಳಿಸಿದ್ದರು.

ತನಿಖೆಗೆ ಆದೇಶಿಸಿದ ಬೈಡೆನ್

ಕೊರೋನಾ ವೈರಸ್‌ ತಯಾರಿಸಿದ್ದೆಂಬ ವಿಚಾರವಾಗಿ ಶ್ವೇತ ಭವನಕ್ಕೆ ಸೀಕ್ರೆಟ್‌ ವರದಿಯೊಂದು ಲಭ್ಯವಾಗಿದೆ. ಇದರಲ್ಲಿ ಕೊರೋನಾ ವೈರಸ್‌ ಲ್ಯಾಬ್‌ನಲ್ಲಿ ತಯಾರಿಸಿದ ಹಾಗೂ ಅಲ್ಲಿ ಸಂಶೋಧನೆ ನಡೆಸುತ್ತಿದ್ದವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ವಿಚಾರ ಉಲ್ಲೇಖಿಸಲಾಗಿದೆ. ಸದ್ಯ ಈ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಬೈಡೆನ್ ಆದೇಶಿಸಿದ್ದಾರೆ.