ಗ್ಯಾನೇಶ್ ಕುಮಾರ್ ವಿರುದ್ದ, ಚುನಾವಣಾ ಆಯೋಗ ವಿರುದ್ದ ಹೋರಾಟದ ಅಸಲಿಯತ್ತ ಆಕ್ರೋಶದಲ್ಲಿ ಹೊರಬಂದಿದೆ. ಹಿರಯ ವಕೀಲ ಪ್ರಶಾಂತ್ ಭೂಷಣ್ ಸುದ್ದಿಗೋಷ್ಠಿ ವೇಳೆ ಆಡಳಿತ ಬದಲಾವಣೆ ಬಯಸುತ್ತಿದ್ದೇವೆ,ಅದನ್ನು ಮಾಡುತ್ತೇವೆ , ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ (ಅ.15) ಚುನಾವಣಾ ಆಯೋಗ, ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆ, ಹೋರಾಟಗಳ ಅಸಲಿಯತ್ತು ಬಹಿರಂಗವಾಗಿದೆ. ನೇಪಾಳ, ಬಾಂಗ್ಲಾದೇಶ ರೀತಿ ಭಾರತದಲ್ಲಿ ಆಡಳಿತ ಬದಲಾವಣೆಗೆ ಸಿಜೆಪಿ ಸೇರಿದಂತೆ ಹೋರಾಟಗಾರರು ಪ್ಲಾನ್ ಮಾಡಿದ್ದಾರೆ ಅನ್ನೋದು ಬಯಲಾಗಿದೆ. ಇಂದು ಸುದ್ದಿಗೋಷ್ಠಿ ವೇಳೆ ಹಿರಿಯ ವಕೀಲ ಪ್ರಶಾಂತ್ ಭೂಷನ್ ಬಹಿರಂಗವಾಗಿ ಹೇಳಿದ್ದಾರೆ. ಹೌದು ನಾವು ಆಡಳಿತ ಬದಲಾವಣೆಯನ್ನು ಬಯಸಿದ್ದೇವೆ. ನಾವು ಬದಲಾವಣೆ ಮಾಡುತ್ತೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಸ್ಫೋಟಕ ಸುದ್ದಿಗೋಷ್ಠಿ

ಪ್ರಕಾಶ್ ರಾಜ್, ನೇಹಾ ಬೋರಾ ಸೇರಿದಂತೆ ಹಲವು ಹೋರಾಟಗಾರರ ಜೊತೆ ಸುದ್ದಿಗೋಷ್ಠಿ ನಡೆಸಿದ ಪ್ರಶಾಂತ್ ಭೂಷಣ್ ಆಕ್ರೋಶದಲ್ಲೇ ಮಾತುಗಳನ್ನಾಡಿದ್ದಾರೆ. ರಿಜಿಮ್ ಚೇಂಜ್ ಪ್ರಶ್ನೆಗೆ ಕೆಂಡಾಮಂಡಲವಾದ ಪ್ರಶಾಂತ್ ಭೂಷಣ್, ಹೌದು ನಾವು ರಿಜಿಮ್ ಚೇಂಜ್ (ಆಡಳಿತ ಬದಲಾವಣೆ) ಬಯಸುತ್ತಿದ್ದೇವೆ. ನಾವು ಬದಲವಣೆ ಮಾಡುತ್ತೇವೆ ಎಂದಿದ್ದಾರೆ. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ನೆರೆದಿದ್ದ ಇತರ ನಾಯಕರು ಚಪ್ಪಾಳೆ ಮೂಲಕ ಪ್ರಶಾಂತ್ ಭೂಷಣ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳ ನಾಯಕತ್ವದಲ್ಲಿ ನಾವು ಹೋರಾಟ ಮಾಡುತ್ತೇವೆ. ಅವರು ನಮ್ಮ ನಾಯಕರು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ನಾವು ವಿದ್ಯಾರ್ಥಿಗಳ ಜೊತೆ ಸೇರಿ, ರಾಜಕೀಯ ನಾಯಕರ ಬೆಂಬಲ ಸೇರಿದಂತೆ ಹಲವು ಸಂಘಟನೆಗಳ ಬೆಂಬಲ ಜೊತೆ ಹೋರಾಟ ಮಾಡುತ್ತೇವೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇಂದು ಘಂಟಾಘೋಷವಾಗಿ ಹೇಳುತ್ತಿದ್ದೇನೆ, ಇದು ಆಡಳಿತ ಬದಲಾವಣೆಯ ಹೋರಾಟ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಈ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಮೋದಿ ಸರ್ಕಾರ ಉರುಳಿಸುವ ಪ್ರಯತ್ನ ಎಂದು ಬಹಿರಂಗವಾಗಿದೆ. ಚುನಾವಣೆ ಮೂಲಕ, ಸಂವಿಧಾನಾತ್ಮಕ ವಿಧಾನದ ಮೂಲಕ ಆಡಳಿತ ಬದಲಾವಣೆ ಅಲ್ಲ. ಇದು ನೇಪಾಳ, ಬಾಂಗ್ಲಾದೇಶ,ಶ್ರೀಲಂಕಾದಲ್ಲಿ ವಿದ್ಯಾರ್ಥಿಗಳು ನಡೆಸಿದ ಬೀದಿ ದಂಗೆ ಮೂಲಕ ಸರ್ಕಾರ ಉರುಳಿಸುವ ಪ್ರಯತ್ನ ಅನ್ನೋ ಮಾತುಗಳು ಕೇಳಿ ಬರುತ್ತಿದೆ.