Asianet Suvarna News Asianet Suvarna News

YearEnder 2023 ಸುಂದರಿಯರ ಟಾಪ್‌ಲೆಸ್ ತಪಾಸಣೆ ವಿವಾದ, ಜೈಲು ಸೇರಿಸಿತು ಇಮ್ರಾನ್ ಪ್ರಮಾದ!

ಈ ವರ್ಷದ ಆಗಸ್ಟ್ ತಿಂಗಳು ಜಾಗತಿಕ ಮಟ್ಟದಲ್ಲಿ ಹಲವು ಸವಾಲಿನ ಜೊತೆಗೆ ಸಂಭ್ರವನ್ನು ಎದುರಿಸಿತ್ತು. ಭಾರತಕ್ಕೆ ಆಗಸ್ಟ್ ತಿಂಗಳು ವರವಾಗಿದ್ದರೆ, ಪಾಕಿಸ್ತಾನಕ್ಕೆ ಸಮಸ್ಯೆಗಳ ಆಗರವಾಗಿತ್ತು. ಇಂಡೋನೇಷಿಯಾಗೆ ಅಚ್ಚರಿ ಹಾಗೂ ಆಗಾತ ಕಾದಿತ್ತು. ಆಗಸ್ಟ್ 2023ರಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ ವಿವರ ಇಲ್ಲಿದೆ.

YearEnder 2023 Indonesia Miss universe Organizers expel to Imran Khan Suspend by Election Commission ckm
Author
First Published Dec 14, 2023, 6:03 PM IST

ಬೆಂಗಳೂರು(ಡಿ.14) ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇದರ ಜೊತೆಗೆ ಈ ವರ್ಷದಲ್ಲಿನ ಏಳು ಬೀಳುಗಳ ಮೆಲುಕು ಹಾಕಲಾಗುತ್ತದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಹಲವು ವಿದ್ಯಮಾನಗಳು ನಡೆದಿದೆ. ಪ್ರಮುಖವಾಗಿ ಮಿಸ್ ಯೂನಿವರ್ಸ್ ಸುಂದರಿಯರನ್ನು ವಿವಸ್ತ್ರಗೊಳಿಸಿ 12ಕ್ಕೂ ಹೆಚ್ಚು ಪುರುಷ ಅಧಿಕಾರಿಗಳು ತಪಾಸಣೆ ನಡೆಸಿದ ವಿವಾದ ಭಾರಿ ಸದ್ದು ಮಾಡಿತ್ತು. ಇದರ ಜೊತೆಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ ಬೆನ್ನಲ್ಲೇ ಚುನಾವಣಾ ಆಯೋಗದ ಶಾಕ್, ಭಾರತದಲ್ಲಿ ಚಂದ್ರಯಾನ ಸಂಭ್ರಮ ಸೇರಿದಂತೆ ಹಲವು ಘಟನೆಗಳು ಸ್ಮರಣೀಯವಾಗಿದೆ.

ಆಗಸ್ಟ್ 6 ರಂದು  ಪಾಕಿಸ್ತಾನದಲ್ಲಿ ಭೀಕರ ರೈಲು ಅವಘಡ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿ 50 ಕ್ಕೂ ಹೆಚ್ಚುಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಆಗಸ್ಟ್ 8 ರಂದು ತೋಶಾಖಾನಾ ಹಗರಣದಲ್ಲಿ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ‘ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌’ (Pakistan Tehreek-e-Insaf ) ಪಕ್ಷದ ಅಧ್ಯಕ್ಷ ಹುದ್ದೆಯಿಂದ ಚುನಾವಣಾ ಆಯೋಗ ವಜಾ ಮಾಡಿತ್ತು. ಇದರ ಪರಿಣಾಮ ಇಮ್ರಾನ್ ಖಾನ್  5 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.

ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!

ಆಗಸ್ಟ್ 6 ರಂದು ಚಂದ್ರನ ಕಕ್ಷೇ ಸೇರಿದ್ದ ಚಂದ್ರಯಾನ3 ಮೊದಲ  ಚಂದ್ರನ ಮೇಲ್ಮೈ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆಗಸ್ಟ್ 23 ರಂದು  ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸುವ ಮೂಲಕ ಇಸ್ರೋ ಮೈಲಿಗಲ್ಲು ನಿರ್ಮಿಸಿತ್ತುು. ಈವರೆಗೂ ವಿಶ್ವದ ಯಾವುದೇ ದೇಶವೂ ಭೇದಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದ್ದರು ಐತಿಹಾಸಿಕ ಕ್ಷಣಕ್ಕೆ ವಿಶ್ವ ಸಾಕ್ಷಿಯಾಗಿತ್ತು. ಸೌತ್ ಆಫ್ರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಸ್ರೋ ನೇರ ಪ್ರಸಾರದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್‌ಗೆ ಅತೀವ ಸಂತಸ ವ್ಯಕ್ತಪಡಿಸಿದ್ದರು. 

ಆಗಸ್ಟ್ ತಿಂಗಳಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಗೆ ಪ್ರಮುಖ ಜಾಗತಿಕ ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟ್ಯಾನ್ಲಿ ಮನ್ನಣೆ ನೀಡಿತ್ತು.  ಏಷ್ಯಾದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳಿಗೆ ತನ್ನ ರೇಟಿಂಗ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಈ ಪ್ರಖ್ಯಾತ ಸಂಸ್ಥೆಯು ಭಾರತದ ರೇಟಿಂಗ್ ಅನ್ನು ‘’ಓವರ್‌ವೇಯ್ಟ್‌’’  ("overweight") ಗೆ ಅಪ್‌ಗ್ರೇಡ್‌ ಮಾಡಿದ್ದು, ಇನ್ನೊಂದೆಡೆ ಚೀನಾದ ರೇಟಿಂಗ್ ಅನ್ನು ಈಕ್ವಲ್‌ ವೇಯ್ಟ್‌ ("equal-weight") ಗೆ ಇಳಿಸಿತ್ತು.

2023ರ ಮಿಸ್ ಯುನಿವರ್ಸ್‌ಗೆ ಸಿದ್ಧತೆ ನಡುವೆ ಮಿಸ್‌ ಯುನಿವರ್ಸ್‌ ಸಂಘಟಕರ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಇಂಡೋನೇಷ್ಯಾ ದೇಶವನ್ನು ಸ್ಪರ್ಧೆಯಿಂದ ನಿಷೇಧ ಮಾಡಿದ ಘಟನೆ ನಡೆದಿತ್ತು. ಇಂಡೋನೇಷ್ಯಾದಿಂದ ಸ್ಪರ್ಧೆ ಮಾಡುವ ಮಿಸ್‌ ಯುನಿವರ್ಸ್‌ ಸ್ಪರ್ಧಿಗಳಿಗೆ ಸ್ಥಳೀಯ ಸಂಘಟಕರು ಟಾಪ್‌ಲೆಸ್‌ ಬಾಡಿಚೆಕ್‌ ಮಾಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು.  12ಕ್ಕಿಂತ ಅಧಿಕ ಅಧಿಕಾರಿಗಳು ಹಾಜರದಿದ್ದರು ಅದರಲ್ಲಿ ಹೆಚ್ಚಿನವರು ಪುರುಷರು ಆಗಿದ್ದರು.  ಐವರು ಸ್ಪರ್ಧಿಗಳು ತಮ್ಮ ಟಾಪ್‌ಲೆಸ್‌ ಫೋಟೋಗಳನ್ನು ಅವರು ತೆಗೆದುಕೊಂಡಿದ್ದಾರೆ ಎಂದು ದೂರಿದ್ದರು.  

Throwback 2023 ಟ್ವಿಟರ್ ಲೋಗೋ ಬದಲಾವಣೆ, ಪಾಕಿಸ್ತಾನಕ್ಕೆ ಸಾಲ ಘೋಷಣೆ; ಅಚ್ಚರಿ ನೀಡಿದ ಜುಲೈ!

ಆಗಸ್ಟ್ 27 ರಂದು ರಷ್ಯಾದಲ್ಲಿ ಕೆಲ ಕ್ರಾಂತಿಕಾರಿ ಬೆಳವಣಿಗೆ ನಡಿದಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ದ ಬಂಡಾಯ ಎದ್ದು ಸಮರ ಸಾರಿದ್ದ ಖಾಸಗಿ ಸೇನೆ ವ್ಯಾಗ್ನರ್ ಪಡೆಯ ಮುಖ್ಯಸ್ಥ ಯೆವೆಗೆನಿ ಪ್ರಿಗೋಜಿನ್‌ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ರಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಜೆನೆಟಿಕ್ ಪರೀಕ್ಷೆ ಮಾಡಿದೆ. ಬಳಿಕ ವ್ಯಾಗ್ನರ್ ಪಡೆ ಮುಖ್ಯಸ್ಥ ಪ್ರಿಗೋಜಿನ್ ಮೃತಪಟ್ಟಿರುವುದನ್ನು ಖಚಿತಪಡಿಸಿತ್ತು.  ಆದರೆ ಕೆಲವೇ ದಿನಗಳ ಬಳಿಕ ಪ್ರಿಗೋಜಿನ್ ವಿಡಿಯೋ ಮೂಲಕ ಪ್ರತ್ಯಕ್ಷರಾಗಿ ನಾನು ಸತ್ತಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದ. 
 
ಆಗಸ್ಟ್ ಅಂತ್ಯದಲ್ಲಿ ನಾಸಾ ಮಂಗಳ ಗ್ರಹದ ಮೇಲೆ ಮತ್ತೊಂದು ಸಾಧನೆ ಮಾಡಿದೆ. ಹೌದು ಭೂಮಿಯಿಂದ 225 ಮಿಲಿಯನ್‌ ಕಿಲೋಮೀಟರ್‌ ದೂರದಲ್ಲಿರುವ ಮಂಗಳ ಗ್ರಹದಲ್ಲಿ ನಾಸಾ ದಾಖಲೆಯ 54ನೇ ಬಾರಿಗೆ ತನ್ನ ಎಕ್ಸಪೀರಿಮೆಂಟಲ್‌ ಇಂಜೆಗ್ನುಟಿ ಹೆಲಿಕಾಪ್ಟರ್‌ನ (ಇಐಎಚ್‌) ಹಾರಾಟ ನಡೆಸಿ ದಾಖಲೆ ಬರೆದಿತ್ತು.
 

Latest Videos
Follow Us:
Download App:
  • android
  • ios