ಹಾದಿ ತಪ್ಪಿತಾ ಕುಸ್ತಿಪಟುಗಳ ಪ್ರತಿಭಟನೆ? ಮೊಳಗಿತು ಮೋದಿ ತೇರಿ ಕಬರ್ ಖುದೇಗಿ ಘೋಷಣೆ!
WFI ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸಿದ ಮೊದಲ ಹೋರಾಟದಿಂದ ರಾಜಕೀಯ ನಾಯಕರನ್ನು ದೂರ ಇಡಲಾಗಿತ್ತು. ಆದರೆ ಎರಡನೇ ಹೋರಾಟದಲ್ಲಿ ರಾಜಕೀಯ ನಾಯಕರು ಕಾಣಿಸಿಕೊಂಡಿದ್ದಾರೆ. ಪ್ರತಿಭಟನೆ ಬ್ರಿಜ್‌ಭೂಷಣ್ ವಿರುದ್ಧ ನಡೆಯುತ್ತಿದೆ. ಆದರೆ ಈ ಹೋರಾಟದಲ್ಲಿ ವಿವಾದಿತ ಮೋದಿ ತೆರಿ ಕಬರ್ ಖುದೇಗಿ ಘೋಷಣೆ ಮೊಳಗಿದೆ.
ನವದೆಹಲಿ(ಏ.29): ಕುಸ್ತಿಪಟುಗಳು ಹೋರಾಟ ಹಾದಿ ತಪ್ಪಿತಾ? ಈ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮೊಳಗುತ್ತಿರುವ ಘೋಷಣೆ. ವಿವಾದಿತ ಘೋಷಣೆಗಳು ಕುಸ್ತಿಪಟುಗಳ ಪ್ರತಿಭಟನೆಯಲ್ಲ ಕೇಳಿಬರುತ್ತಿದೆ. ಕುಸ್ತಿ ಫೆಡರೇಶನ್ ಅಧ್ಯಕ್ಷನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕುಸ್ತಿಪಟುಗಳು ಮೋದಿ ತೇರಿ ಕಬರ್ ಖುದೇಗಿ, ಆಜ್ ನಹಿ ತೋ ಕಲ್ ಖುದೇಗಿ ಘೋಷಣೆ ಸೇರಿದಂತೆ ಹಲವು ವಿವಾದಿತ ಘೋಷಣೆ ಕೂಗಿದ್ದಾರೆ. ಈ ಘೋಷೆಗಳಿಂದ ಇದೀಗ ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯವಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ರಾಜಕೀಯ ನಾಯಕರಿಂದ ದೂರ ಉಳಿದಿದ್ದ, ಪ್ರತಿಭಟನೆಯಲ್ಲಿ ಇದೀಗ ಪ್ರಮುಖ ನಾಯಕರು ಕಾಣಿಸಿಕೊಳ್ಳುತ್ತಿದ್ದಾರೆ.
ಲೈಂಗಿಕ ಕಿರುಕುಳ ಸೇರಿ ಹಲವು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಏಪ್ರಿಲ್ 22 ರಿಂದ ಕುಸ್ತಿಪಟುಗಳು ಮತ್ತೆ ಪ್ರತಿಭಟನ ಆರಂಭಿಸಿದ್ದಾರೆ. ಮೊದಲ ಬಾರಿ ಪ್ರತಿಭಟನೆಯಲ್ಲಿ ಕುಸ್ತಿಪಟುಗಳು ರಾಜಕೀಯ ನಾಯಕರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಈ ಬಾರಿ ಹಲವು ನಾಯಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಪ್ರತಿಭಟನೆಯಲ್ಲಿ ವಿವಾದಿತ ಘೋಷಣೆ ಕೂಗಿದ್ದಾರೆ. ಮೋದಿ ತೇರಿ ಕಬರ್ ಖುದೇಗಿ, ಆಜ್ ನಹಿ ತೋ ಕಲ್ ಖುದೇಗಿ( ಮೋದಿ ನಿನ್ನ ಸಮಾಧಿ ನಿರ್ಮಿಸುತ್ತೇವೆ. ಇಂದಲ್ಲ ನಾಳೆಯಾದರೂ ಸಮಾಧಿ) ಈ ಘೋಷಣೆ ಮೊಳಗಿದೆ.
ಪ್ರತಿಭಟನೆಗೆ ಲಕ್ಷಾಂತರ ರೂಪಾಯಿ ಸುರಿದ ರಸ್ಲರ್ಸ್; ಹಾಸಿಗೆ, ಮೈಕ್, ಸ್ಪೀಕರ್ ಖರೀದಿ!
ಮೋದಿ ತೇರಿ ಕಬರ್ ಖುದೇಗಿ ಘೋಷಣೆ ಮಾತ್ರವಲ್ಲ, ಮೋದಿ ವಿರುದ್ಧ ಹಲವು ವಿವಾದಿತ ಘೋಷಣೆಗಳು ಮೊಳಗಿದೆ. ಈ ಘೋಷವಾಕ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪ್ರತಿಭಟನೆಯ ಅಸಲಿಯತ್ತಿನ ಅನುಮಾನಗಳು ವ್ಯಕ್ತವಾಗಿದೆ. ಪ್ರತಿಭಟನಾ ನಿರತರ ಕುಸ್ತಿಪಟುಗಳನ್ನು ಭೇಟಿಯಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಬ್ರಿಷ್ ಭೂಷಣ್ ಬಿಜೆಪಿ ಸಂಸದ ಅನ್ನೋ ಕಾರಣಕ್ಕೆ ಸರ್ಕಾರ ರಕ್ಷಿಸುವ ಕೆಲಸ ಮಾಡುತ್ತಿದೆ. ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ದೂರು ದಾಖಲಾದ ಎಫ್ಐಆರ್ ಪ್ರತಿ ತೋರಿಸುವಂತೆ ಪ್ರಿಯಾಂಕಾ ವಾದ್ರಾ ಆಗ್ರಹಿಸಿದ್ದಾರೆ.
ಇತ್ತ ಬ್ರಿಜ್ ಭೂಷಣ್ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ತನಿಖೆಗೂ ನಾನು ಸಿದ್ದ. ಈ ಪ್ರಕರಣದಲ್ಲಿ ನಾನು ಅಮಾಯಕ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ನಾನು ರಾಜೀನಾಮೆ ನೀಡಬಹುದು. ಆದರೆ ಒರ್ವ ಕ್ರಿಮಿನಲ್ ಅನ್ನೋ ಹಣೆಪಟ್ಟಿ ಹೊತ್ತುಕೊಂಡು ನಾನು ರಾಜೀನಾಮೆ ನೀಡುವುದಿಲ್ಲ. ಹೀಗೆ ಮಾಡಿದರೆ ನಾನು ಕುಸ್ತಿಪಟುಗಳ ಆರೋಪ ಒಪ್ಪಿಕೊಂಡಂತೆ. ಹೀಗಾಗಿ ನಾನು ರಾಜೀನಾಮೆ ನೀಡುವುದಿಲ್ಲ. ತನಿಖೆ ನಡೆಯಲಿ ಸತ್ಯಾಂಶ ಹೊರಬರಲಿ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ಬಂಧನದ ವರೆಗೆ ಪ್ರತಿಭಟನೆ, FIR ಪ್ರತಿ ತೋರಿಸುವಂತೆ ಪಟ್ಟು!
ಭಾರತೀಯ ಕುಸ್ತಿ ಫೆಡರೇಶನ್‌ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು 3 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ರಚಿಸಿದೆ. ಈ ಸಮಿತಿಗೆ ನಿವೃತ್ತ ಹೈಕೋರ್ಚ್ ನ್ಯಾಯಮೂರ್ತಿ ಒಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಲು ನಿರ್ಧರಿಸಿದ್ದು, ಇನ್ನಷ್ಟೇ ಹೆಸರು ಅಂತಿಮಗೊಳ್ಳಬೇಕಿದೆ. ಇನ್ನು ಭಾರತೀಯ ವುಶು ಸಂಸ್ಥೆ ಮುಖ್ಯಸ್ಥ ಭೂಪೇಂದ್ರ ಬಾಜ್ವಾ, ಖ್ಯಾತ ಶೂಟಿಂಗ್ ಕೋಚ್ ಸುಮಾ ಶಿರೂರು ಸಮಿತಿಯ ಸದಸ್ಯರಾಗಿದ್ದಾರೆ.