Asianet Suvarna News Asianet Suvarna News

25ನೇ ವರ್ಷದಲ್ಲಿ ಅಸುನೀಗಿದ ವಿಶ್ವದ ಅತ್ಯಂತ ಹಿರಿಯ ಹುಲಿ!

ಭಾರತದ ಹೆಮ್ಮೆ ಎಂದೇ ಗುರುತಿಸಿಕೊಂಡಿದ್ದ ರಾಜಾ ಹೆಸರಿನ ಹುಲಿ, 2008 ರಿಂದ ಪಶ್ಚಿಮ ಬಂಗಾಳದ ದಕ್ಷಿಣ ಖೈರಾಬರಿ ಚಿರತೆ ರಕ್ಷಣಾ ಕೇಂದ್ರದಲ್ಲಿ ವಾಸಿಸುತ್ತಿತ್ತು. ಮೊಸಳೆಯ ದಾಳಿಯಿಂದ ಬದುಕುಳಿದಿದ್ದ ರಾಜಾ, ಈ ವೇಳೆ ತೀವ್ರವಾಗಿ ಗಾಯಗೊಂಡಿತ್ತು. ಬಲ ಹಿಂಗಾಲು ಭಾಗಶಃ ತುಂಡಾಗಿದ್ದರೂ ವಿಶ್ವಾಸದಿಂದ ಜೀವನ ಸಾಗಿಸಿತ್ತು.
 

Worlds Oldest Tiger in Captivity Raja Breathes His Last at 25 Pride of India san
Author
Bengaluru, First Published Jul 12, 2022, 11:04 PM IST

ನವದೆಹಲಿ (ಜುಲೈ 12): ಸೆರೆಯಲ್ಲಿ ಉಳಿದಿದ್ದ ವಿಶ್ವದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಟೈಗರ್ ರಾಜಾ ಈ ಸೋಮವಾರ ಕೊನೆಯುಸಿರೆಳೆದಿದೆ. ಹೆಚ್ಚಿನ ಹುಲಿಗಳು ಸೆರೆಯಲ್ಲಿ 18 ರಿಂದ 20 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದರೆ, ರಾಜ 25 ವರ್ಷ ಮತ್ತು 10 ತಿಂಗಳುಗಳ ಕಾಲ ಘರ್ಜಿಸಿದ್ದ. ಭಾರತದ ಹೆಮ್ಮೆಯಾಗಿದ್ದ ರಾಜಾ, 2008 ರಿಂದ ಪಶ್ಚಿಮ ಬಂಗಾಳದ ದಕ್ಷಿಣ ಖೈರಾಬರಿ ಚಿರತೆ ರಕ್ಷಣಾ ಕೇಂದ್ರದಲ್ಲಿ ವಾಸಿಸುತ್ತಿತ್ತು. ಹಿಂದೊಮ್ಮೆ ಮೊಸಳೆಯ ಭೀಕರ ದಾಳಿಯ ನಡುವೆಯೂ ಬದುಕುಳಿದಿತ್ತು. ಆದರೆ, ಈ ದಾಳಿಯ ವೇಳೆ ಇದರ ಬಲ ಹಿಂಗಾಲು ಭಾಗಶಃ ತುಂಡಾಗಿತ್ತು. ಆ ಬಳಿಕ ರಾಜಾನನ್ನು ರಕ್ಷಣಾ ಕೇಂದ್ರಕ್ಕೆ ಕರೆದೊಯ್ದಿದ್ದಲ್ಲದೆ, ನಡೆಯಲು ಸಹಾಯವಾಗುವಂತೆ ಕೃತಕ ಕಾಲನ್ನು ಜೋಡಿಸಲಾಗಿತ್ತು. ಅಲಿಪುರ್‌ದವಾರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುರೇಂದ್ರ ಕುಮಾರ್ ಮೀನಾ ಅವರ ಪ್ರಕಾರ, ರಾಜಾ ವಯಸ್ಸಾಗಿದ್ದರಿಂದ ಮತ್ತು ಕೆಲ ಸಮಯ ಅಸ್ವಸ್ಥನಾಗಿದ್ದ. ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಆತ ರಕ್ಷಣಾ ಕೇಂದ್ರದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ನಂತರ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಕೇಂದ್ರ ಸಚಿವರ ಸಂತಾಪ: ರಾಜಾ ನಿಧನದ ಬೆನ್ನಲ್ಲಿಯೇ, ಸಾಮಾಜಿಕ ಮಾಧ್ಯಮದಲ್ಲಿ ಆತನಿಗೆ ಸಂತಾಪ ಸೂಚಿಸಿ ಸಾಕಷ್ಟು ಸಂದೇಶಗಳು ಬಂದವು. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ (Union Minister for Environment Bhupender Yadav) ಕೂಡ ಟ್ವಿಟರ್ ಪೋಸ್ಟ್ ಮೂಲಕ ಹುಲಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ದೀರ್ಘ ಅವಧಿಯ ಕಾಲ ಸೆರೆಯಲ್ಲಿದ್ದೂ ಜೀವಂತವಾಗಿದ್ದ ಹುಲಿ ಎನಿಸಿಕೊಂಡಿದ್ದ ವಿಶ್ವದ ಅತ್ಯಂತ ಹಿರಿಯ ಹುಲಿ ರಾಜಾ (Worlds Oldest Tiger in Captivity Raja) ಇನ್ನಿಲ್ಲ ಎಂದು ತಿಳಿದು ದುಃಖವಾಯಿತು. ಭಾರತದ ಹೆಮ್ಮೆಯಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಬದುಕಿದ. ರಾಜಾ ಅವರನ್ನು ಪ್ರಾಣಿಯ ಅಭಿಮಾನಿಗಳು ತುಂಬಾ ಮಿಸ್‌ ಮಾಡಿಕೊಳ್ಳುತ್ತಾರೆ' ಎಂದು ಟ್ವೀಟ್ ಓದಿದೆ.

 ಇದನ್ನೂ ಓದಿ: ಚಾಮರಾಜನಗರ: ಕೊನೆಗೂ ಸಿಕ್ಕಿಬಿದ್ದ ಹುಲಿರಾಯ, ನಿಟ್ಟುಸಿರು ಬಿಟ್ಟ ಜನತೆ..!

ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ (IFS officer Praveen Kaswan) ಅವರು ರಾಜಾ ಅವರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ. “ಇಂದು ಸೆರೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಜೀವಂತ ಹುಲಿ ‘ರಾಜಾ’ ಇನ್ನಿಲ್ಲ. ಆತ 25 ವರ್ಷ ಮತ್ತು 10 ತಿಂಗಳ ವರ್ಷದಲ್ಲಿ ಕೊನೆಯುಸಿರೆಳೆದ' ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಕೊಡಗಿನ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ

15 ವರ್ಷಗಳ ಕಾಲ ಸೆರೆಯಲ್ಲಿ ಬದುಕಿತ್ತು:
ಇಂದು ಸೆರೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಜೀವಂತ ಹುಲಿ 'ರಾಜಾ' ಇನ್ನಿಲ್ಲ. ಆತ 25 ವರ್ಷ ಮತ್ತು 10 ತಿಂಗಳ ವಯಸ್ಸಿನಲ್ಲಿ ಸಾವು ಕಂಡಿದ್ದಾನೆ. ರಾಜಾ ಹಲವು ವರ್ಷಗಳಿಂದ ಜಲದಪರ ರಕ್ಷಣಾ ಕೇಂದ್ರದಲ್ಲಿದ್ದರು.  ಮೊಸಳೆ ದಾಳಿಯಿಂದ ಭೀಕರವಾಗಿ ಗಾಯಗೊಂಡ ಬಳಿಕ ಈ ರಕ್ಷಣಾ ಕೇಂದ್ರಕ್ಕೆ ತರಲಾಗಿತ್ತು. ಆ ಬಳಿಕ ಸೆರೆಯಲ್ಲಿದ್ದ ವಿಶ್ವದ ಅತ್ಯಂತ ಹಳೆಯ ಹುಲಿ ಎನಿಸಿಕೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ. ವರದಿಯ ಪ್ರಕಾರ, ಗಾಯಗೊಂಡು ಕೇಂದ್ರಕ್ಕೆ ಕರೆತಂದಾಗ ರಾಜಾಗೆ 11 ವರ್ಷ ವಯಸ್ಸಾಗಿತ್ತು. ಸೆರೆಯಲ್ಲಿ ಅಂದಾಜು 15 ವರ್ಷಗಳ ಕಾಲ ಬದುಕುಳಿಯುವ ಮೂಲಕ, ವಿಶ್ವದಲ್ಲಿಯೇ ಸೆರೆಯಲ್ಲಿದ್ದು ಬದುಕಿದ್ದ ವಿಶ್ವದ ಅತ್ಯಂತ ಹಿರಿಯ ಹುಲಿ ಎನಿಸಿಕೊಂಡಿತ್ತು.

ಜಲ್ದಪರದಲ್ಲಿರುವ ಅರಣ್ಯ ನಿರ್ದೇಶನಾಲಯದ ಸುರೇಂದ್ರ ಕುಮಾರ್ ಮೀನಾ ಅವರು ರಾಜಾ ಅವರಿಗೆ ಗೌರವ ಸಲ್ಲಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ರಾಜಾ ಅವರನ್ನು ಮೊಸಳೆ ದಾಳಿಯಿಂದ ರಕ್ಷಿಸಲಾಗಿತ್ತು ಮತ್ತು ರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು ಎಂದು ಬರೆದಿದ್ದಾರೆ.

Follow Us:
Download App:
  • android
  • ios