Asianet Suvarna News Asianet Suvarna News

ಕೊಡಗಿನ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ

ದಕ್ಷಿಣ ಕೊಡಗಿನ ಬಿಟ್ಟಂಗಾಲ ಸಮೀಪದ 2ನೇ ರುದ್ರಗುಪ್ಪೆಯಲ್ಲಿ ಕಾಫಿ ತೋಟವೊಂದರಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಈ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 

Tiger Dead Body Found At Kodagu District gvd
Author
Bangalore, First Published Jun 29, 2022, 10:57 AM IST

ಮಡಿಕೇರಿ (ಜೂ.29): ದಕ್ಷಿಣ ಕೊಡಗಿನ ಬಿಟ್ಟಂಗಾಲ ಸಮೀಪದ 2ನೇ ರುದ್ರಗುಪ್ಪೆಯಲ್ಲಿ ಕಾಫಿ ತೋಟವೊಂದರಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಈ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 2ನೇ ರುದ್ರಗುಪ್ಪೆಯ ತೋತೇರಿ ಬಳಿಯ ನಾಜಗೊಲ್ಲಿ ಎಂಬಲ್ಲಿನ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಮಂಗಳವಾರ ಸಂಜೆ ಕಂಡುಬಂದಿದೆ. 

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿಯೊಂದು ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. 2ನೇ ರುದ್ರಗುಪ್ಪೆಯ ಸಮೀಪವಿರುವ ಕಂಡಂಗಾಲದಲ್ಲಿ ಕರಿಮೆಣಸು ಕೊಯ್ಯುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಅವರನ್ನು ದಾರುಣವಾಗಿ ಕೊಂದು ಹಾಕಿತ್ತು. 

ಇದಲ್ಲದೆ ಸುತ್ತಮುತ್ತಲಿನ ಜಾನುವಾರುಗಳ ಮೇಲೆಯೂ ನಿರಂತರವಾಗಿ ದಾಳಿ ನಡೆಸುತ್ತಿತ್ತು. ಈ ಭಾಗದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಗ್ರಾಮದಲ್ಲಿ ಬೀಡು ಬಿಟ್ಟು ನಿರಂತರವಾದ ಕಾರ್ಯಾಚರಣೆ ನಡೆಸಿದರೂ ಹುಲಿ ಸರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಹುಲಿಯ ಸಾವಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Udupi: ಹುಲಿ ಬಂತು ಹುಲಿ ಓಡಿ ಓಡಿ ಓಡಿ: ದೈವದೊಂದಿಗೆ ಭಕ್ತರ ಆಟ!

ಮೇಟಿಕುಪ್ಪೆ ವಲಯದಲ್ಲಿ ಹುಲಿ ಸಾವು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದಲ್ಲಿ ನಾಲ್ಕು ವರ್ಷದ ಗಂಡು ಹುಲಿ ಮೃತ ಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ದಟ್ಟಹಳ್ಳಿ ಬೀಟ್‌ನಲ್ಲಿ ಗಂಡು ಹುಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸ್ವಾಭಾವಿಕವಾಗಿ ಮೃತ ಪಟ್ಟಿದ್ದು ದಟ್ಟಹಳ್ಳ ಗ್ರಾಮದ ಮಸಿಕಟ್ಟೆಹೆಬ್ಬಳ್ಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸಂಜೆ ಗಸ್ತಿನಲ್ಲಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹುಲಿ ಮೃತ ಪಟ್ಟಿದ್ದರಿಂದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇತ್ತು. ಶನಿವಾರ ಸ್ಥಳಕ್ಕೆ ಮೇಟಿಕುಪ್ಪೆ ಅರಣ್ಯ ವಲಯ ಅಧಿಕಾರಿ ಸಿದ್ದರಾಜು ಸಿಬ್ಬಂದಿ ಜೊತೆ ಭೇಟಿ ನೀಡಿ ಪರಿಶೀಲಿಸಿದರು. ನಾಗರಹೊಳೆ ಹುಲಿ ಸಂರಕ್ಷಿತ ಪಶುವೈದ್ಯ ಅಧಿಕಾರಿ ಡಾ. ರಮೇಶ್‌ ಹಾಗೂ ತಾಲೂಕಿನ ಕಂಚುಮಳ್ಳಿ ಪಶುವೈದ್ಯ ಅಧಿಕಾರಿ ಪ್ರಸನ್ನ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಹುಲಿಯ ಮೃತದೇಹವನ್ನು ದಟ್ಟಹಳ್ಳ ಗ್ರಾಮದ ಅರಣ್ಯದ ಅಂಚಿನಲ್ಲಿ ಸುಡಲಾಯಿತು.

ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್‌

ಸ್ಥಳಕ್ಕೆ ನಾಗರಹೊಳೆ ಡಿಸಿಎಫ್‌ ಮಹೇಶ್‌ ಕುಮಾರ್‌ ಭೇಟಿ ನೀಡಿ ಮಾತನಾಡಿ, ನಾಲ್ಕು ವರ್ಷದ ಗಂಡು ಹುಲಿ ಮೃತದೇಹವನ್ನು ಪರಿಶೀಲನೆ ನಡೆಸಿದಾಗ ಬೇರೊಂದು ಕಾಡು ಪ್ರಾಣಿ ಜೊತೆ ಕಾದಾಟ ನಡೆಸಿದೆ ಎಂಬುದಕ್ಕೆ ಹುಲಿಯ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. ಹಾಗಾಗಿ ಹುಲಿ ಸ್ವಾಭಾವಿಕವಾಗಿ ಮೃತ ಪಟ್ಟಿರುವುದು ಕಂಡುಬಂದಿದೆ ಎಂದು ತಿಳಿಸಿದರು. ಅಂತರಸಂತೆ ಎಸಿಎಫ್‌ ಮಹದೇವು, ರಘುರಾಮ…, ವೆಂಕಟನಾಯ್ಡ ಇದ್ದರು.

Follow Us:
Download App:
  • android
  • ios