Asianet Suvarna News Asianet Suvarna News

ಜಗತ್ತಿನ ಶಕ್ತಿಯುತ ಪಾಸ್‌ಪೋರ್ಟ್ ಶ್ರೇಯಾಂಕ ಬಿಡುಗಡೆ, ಫ್ರಾನ್ಸ್ ಅಗ್ರ ಹೀನಾಯ ಕುಸಿತ ಕಂಡ ಭಾರತ!

ಇತ್ತೀಚೆಗೆ ಬಿಡುಗಡೆಯಾದ 2024 ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಫ್ರಾನ್ಸ್ ಅಗ್ರಸ್ಥಾನದಲ್ಲಿದೆ. ಭಾರತದ ಪಾಸ್‌ಪೋರ್ಟ್ ಶ್ರೇಯಾಂಕವು ಕುಸಿತ ಕಂಡಿದೆ.

World's most powerful passport list released India slips France tops list gow
Author
First Published Feb 19, 2024, 6:11 PM IST

ಇತ್ತೀಚೆಗೆ ಬಿಡುಗಡೆಯಾದ 2024 ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಫ್ರಾನ್ಸ್ ಅಗ್ರಸ್ಥಾನದಲ್ಲಿದೆ. ಭಾರತದ ಪಾಸ್‌ಪೋರ್ಟ್ ಶ್ರೇಯಾಂಕವು 84 ನೇ ಸ್ಥಾನದಿಂದ 85 ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಿಂದಿನ ವರ್ಷಕ್ಕಿಂತ ಒಂದು ಸ್ಥಾನಕ್ಕೆ ಭಾರತದ ಶ್ರೇಯಾಂಕವು ಕುಸಿದಿದೆ. ಭಾರತದ ಶ್ರೇಯಾಂಕದಲ್ಲಿನ ಈ ಕುಸಿತವು ಆಶ್ಚರ್ಯಕರವಾಗಬಹುದು, ಕಳೆದ ವರ್ಷ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು 60 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದಾಗಿತ್ತು, ಈ ವರ್ಷ ಆ ಸಂಖ್ಯೆ 62 ಕ್ಕೆ ಏರಿದೆ.

ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ಕೂಡ ಫ್ರಾನ್ಸ್ ಜೊತೆಗೆ ಅಗ್ರ ಶ್ರೇಯಾಂಕದ ದೇಶಗಳಲ್ಲಿ ಸೇರಿವೆ. ಈ ನಡುವೆ ಪಾಕಿಸ್ತಾನ ಕಳೆದ ವರ್ಷದಂತೆ 106 ನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ, ಆದರೆ ಬಾಂಗ್ಲಾದೇಶ 101 ನೇ ಸ್ಥಾನದಿಂದ 102 ನೇ ಸ್ಥಾನಕ್ಕೆ ಕುಸಿದಿದೆ.

ದೃಷ್ಠಿಹೀನರಿಗಾಗಿ ಸ್ಮಾರ್ಟ್ ಗ್ಲಾಸ್ ತಯಾರಿಸಿದ ಕೇರಳದ 14 ವರ್ಷದ ಹುಡುಗಿಯರು!

ಭಾರತದ ನೆರೆಯ ಮಾಲ್ಡೀವ್ಸ್ ಪ್ರಬಲವಾಗಿ ಪಾಸ್‌ಪೋರ್ಟ್ ಅನ್ನು ಮುಂದುವರೆಸಿದೆ, 58 ನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಮಾಲ್ಡೀವಿಯನ್ ಪಾಸ್‌ಪೋರ್ಟ್ ಹೊಂದಿರುವವರು 96 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಮಾಡುವ ಅವಕಾಶ ಇದೆ.

ಇರಾನ್, ಮಲೇಷ್ಯಾ ಮತ್ತು ಥಾಯ್ಲೆಂಡ್‌ನಿಂದ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುವ ಇತ್ತೀಚಿನ ಪ್ರಕಟಣೆಗಳ ನಂತರವೂ ಭಾರತವು ಶ್ರೇಯಾಂಕದಲ್ಲಿ ಕುಸಿತವಾಗಿರುವುದು ಆಶ್ಚರ್ಯ ಎನಿಸಿಕೊಂಡಿದೆ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಅದರ ಶ್ರೇಯಾಂಕಗಳನ್ನು ಕಳೆದ 19 ವರ್ಷಗಳಲ್ಲಿ ವ್ಯಾಪಿಸಿರುವ ದತ್ತಾಂಶದಿಂದ ಪಡೆದುಕೊಂಡಿದೆ, ಇದು ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್‌ನ (IATA) ವಿಶೇಷ ದತ್ತಾಂಶವನ್ನು ಆಧರಿಸಿ, 199 ವಿಭಿನ್ನ ಪಾಸ್‌ಪೋರ್ಟ್‌ಗಳು ಮತ್ತು ವಿಶ್ವದಾದ್ಯಂತ 227 ಪ್ರಯಾಣದ ಸ್ಥಳಗಳನ್ನು ಒಳಗೊಂಡಿದೆ.

ಬಿಡುಗಡೆಯಾಗದಂತೆ ಬರೋಬ್ಬರಿ 34 ಕೋರ್ಟ್ ಕೇಸ್ ಕಂಡ ಸೂಪರ್‌ ಹಿಟ್‌ ಚಿತ ...

ಸೂಚ್ಯಂಕವನ್ನು ಮಾಸಿಕವಾಗಿ ನವೀಕರಿಸಲಾಗುತ್ತದೆ ಮತ್ತು ಸ್ವತಂತ್ರ ದೇಶಗಳ ನಾಗರಿಕರಿಗೆ ಜಾಗತಿಕ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನ ಡೇಟಾವು ಕಳೆದ ಎರಡು ದಶಕಗಳಲ್ಲಿ ಜಾಗತಿಕ ಚಲನಶೀಲತೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. 2006 ರಲ್ಲಿ, ಜನರು ಸರಾಸರಿ 58 ದೇಶಗಳಿಗೆ ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾಗಿತ್ತು. ಆದರೆ ಈ ವರ್ಷ, ಆ ಸಂಖ್ಯೆಯು ಸುಮಾರು 111 ದೇಶಗಳಿಗೆ ವಿಸ್ತರಣೆಯಾಗಿದ್ದು ದ್ವಿಗುಣಗೊಂಡಿದೆ.

Follow Us:
Download App:
  • android
  • ios