World Environment Day: ಎಲ್ಲರಿಗೂ 'ಒಂದೇ ಒಂದು ಭೂಮಿ', ಪರಿಸರ ಉಳಿಸಿ, ಬೆಳೆಸಿ

ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ (Care) ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನ (World Environment Day)ವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಆರಂಭಗೊಂಡಿದ್ದು ಯಾವಾಗ ? ಈ ದಿನದ ವಿಶೇಷತೆಯೇನು ಎಂಬುದನ್ನು ತಿಳಿಯೋಣ.

World Environment Day 2022, History, Theme And Significance Vin

ವಿಶ್ವ ಪರಿಸರ ದಿನ (World Environment Day)ವನ್ನು ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುತ್ತದೆ. ಇದು ಹಸಿರನ್ನು ಉಳಿಸಿ ಬೆಳೆಸುವ ಮೂಲಕ ಹೆಚ್ಚು ಸಮರ್ಥನೀಯ ಭವಿಷ್ಯವನ್ನು (Future) ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ದಿನದಂದು ಪರಿಸರದ ಬಗ್ಗೆ ಜಾಗೃತಿ (Awareness) ಮೂಡಿಸಲು ಮತ್ತು ಪರಿಸರದ ರಕ್ಷಣೆಗೆ (Protection) ಉತ್ತೇಜನೆ ನೀಡಲು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರವು ಅತಿ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿಯೇ ಈ ದಿನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯಿದೆ. 

ಮಾನವ (Human) ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ. ಇದರೆ ಇತ್ತಿಚಿನ ದಿನಗಳಲ್ಲಿ ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಪರಿಸರವೇ ಹಾಳಾಗುತ್ತಿದೆ. ಇದರಿಂದಾಲೇ ಹವಾಮಾನ (Weather) ವೈಪರೀತ್ಯ, ಆರೋಗ್ಯ ಸಮಸ್ಯೆಗಳು (Health Problem) ಸಹ ಹೆಚ್ಚಾಗ್ತಿದೆ. ಹೀಗಾಗಿಯೇ ಪರಿಸರವನ್ನು ಉಳಿಸುವಂತೆ ಜನರಿಗೆ ಎಚ್ಚರಿಕೆ ನೀಡಲು ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 

Chamarajnagar: ಹಸಿರಿನ ವನರಾಶಿಯಿಂದ ನಳನಳಿಸುತ್ತಿದೆ ಬಂಡೀಪುರ!

ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯ (Theme)ದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಈ ದಿನದಲ್ಲಿ ಭಾಗಿಯಾಗುತ್ತವೆ. 

​ವಿಶ್ವ ಪರಿಸರ ದಿನದ ಆಚರಣೆ ಆರಂಭವಾಗಿದ್ದು ಯಾವಾಗ ?
ವಿಶ್ವ ಪರಿಸರ ದಿನವನ್ನು 1974ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.

​ವಿಶ್ವ ಪರಿಸರ ದಿನವನ್ನು ಯಾಕೆ ಆಚರಿಸಲಾಗುತ್ತದೆ ?
ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 5ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ.

1 ಕೆಜಿ ಚಹಾ ಎಲೆ 11 ಲಕ್ಷ ರೂಪಾಯಿಗೆ ಮಾರಾಟವಾಯ್ತು..! ಯಾಕಿಷ್ಟು ಕಾಸ್ಟ್ಲೀ ?

​ವಿಶ್ವ ಪರಿಸರ ದಿನ 2022ರ ಧ್ಯೇಯವಾಕ್ಯ
ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಉದ್ದೇಶ ಪರಿಸರದ ಬಗ್ಗೆ ಪ್ರತಿ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ. 2022ರಲ್ಲಿ ಪರಿಸರ ದಿನಾಚರಣೆಯ ಹೋಸ್ಟ್‌ ಸ್ವೀಡನ್‌ ಆಗಿದೆ. 2022ರ ಧ್ಯೇಯವಾಕ್ಯ 'ಒಂದೇ ಒಂದು ಭೂಮಿ' ಎಂಬುದಾಗಿದೆ. 

​ಪರಿಸರ ದಿನದ ಉದ್ದೇಶಗಳು
ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ಹಲವಾರು ಮುಖ್ಯ ಉದ್ದೇಶಗಳಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.

ಅದೇನೆ ಇರ್ಲಿ ಮಾನವನು ಇನ್ನಾದ್ರೂ ಎಚ್ಚೆತ್ತು ಹಸಿರನ್ನು ಉಳಿಸಿ, ಬೆಳೆಸದಿದದ್ದರೆ ಮನುಷ್ಯನ ಜೀವನ ಇನ್ನಷ್ಟು ಏರುಪೇರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. 

Latest Videos
Follow Us:
Download App:
  • android
  • ios