ಖಾಸಗಿ, ಸರ್ಕಾರಿ ನೌಕರಿಗೆ ಮತ್ತೆ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ, ಸರ್ಕಾರದ ಆದೇಶ, GRAP 4 ಹೇರಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಿಂತೆ ಇದೀಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ನವದೆಹಲಿ (ನ.22) ಕೋವಿಡ್ ಸಮಯದಲ್ಲಿ ಬಹುತೇಕರಿಗೆ ಮನೆಯಿಂದಲೇ ಕೆಲಸ ( ವರ್ಕ್ ಫ್ರಮ್ ಹೋಮ್ ) ನೀಡಲಾಗಿತ್ತು. ಕೋವಿಡ್ ಬಳಿಕ ಹಂತ ಹಂತವಾಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿತ್ತು. ಇದೀಗ ಬೆರಳೆಣಿಕೆ ಕಂಪನಿಗಳು ವರ್ಕ್ ಫ್ರಮ್ ಆಯ್ಕೆ ನೀಡುತ್ತಿದೆ. ಇದರ ನಡುವೆ ನಾಳೆಯಿಂದ (ನ.23) ಖಾಸಗಿ ಹಾಗೂ ಸರ್ಕಾರಿ ನೌಕರರಿಗೆ ನಾಳೆಯಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚಿಸಲಾಗಿದೆ. ಹೌದು, ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ಬೆನ್ನಲ್ಲೇ ದೆಹಲಿ ಸರ್ಕಾರ ಪ್ರತಿ ಕಂಪನಿ, ಕಚೇರಿ ಕನಿಷ್ಠ ಶೇಕಡಾ 50 ರಷ್ಟು ಉದ್ಯೋಗಿಳಿಗೆ ವರ್ಕ್ ಫ್ರಮ್ ಹೋಮ್ ನೀಡಲು ಸೂಚಿಸಿದೆ. ಇದಕ್ಕೆ ಮುಖ್ಯ ಕಾರಣ ದೆಹಲಿ ವಾಯು ಮಾಲಿನ್ಯ.
GRAP 4 ಜಾರಿ ಮಾಡಿದ ದೆಹೆಲಿ ಸರ್ಕಾರ
ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ GRAP 4 ನಿರ್ಬಂಧ ಜಾರಿ ಮಾಡಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರತಿ ದಿನ ಹೆಚ್ಚಾಗುತ್ತಿದೆ. ಮನುಷ್ಯ ಮಾತ್ರವಲ್ಲ, ನಾಯಿ ಸೇರಿದಂತೆ ಪ್ರಾಣಿ ಪಕ್ಷಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದೆ. ಉಸಿರಾಟದ ಸಮಸ್ಯೆಯಿಂದ ಹಲವರು ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ನಿನ್ನೆ(ನ.21) ದೆಹೆಲಿ ಮಾಲಿನ್ಯ ಹಾಗೂ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಚಾರಣೆ ನಡೆಸಿತ್ತು. ಈ ವೇಳೆ ದಹಲಿಯಲ್ಲಿ ಮಾಲಿನ್ಯ ತಗ್ಗಿಸಲು ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದೆ.ಇದೇ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ದೆಹಲಿ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ. ಈ ಪೈಕಿ GRAP 4 ಹಂತ ಜಾರಿಯಾಗಿದೆ.ವಾಯುಗುಣಮಟ್ಟ ( AQI) 450ಕ್ಕಿಂತ ಮೇಲಿದ್ದರೆ GRAP 4 ಹಂತ ಜಾರಿ ಮಾಡಲಾಗುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೂ ವರ್ಕ್ ಫ್ರಮ್ ಹೋಮ್ ಸಾಧ್ಯತೆ
ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೊ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವ ಸಾಧ್ಯತೆ ಇದೆ. ಈ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡುವುದು, ಮಾಲಿನ್ಯ ಇಳಿಕೆಗೆ ಸರ್ಕಾರ ಮುಂದಾಗಿದೆ. ಸೆಂಟ್ರಲ್ ಪೊಲ್ಯೂಶನ್ ಬೋರ್ಡ್ ಪ್ರಕಾರ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಎಂದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದೆ.
ದಹಲಿಯಲ್ಲಿ ಮತ್ತಷ್ಟು ಕಠಿಣ ನಿಯಮ ಜಾರಿ
ದೆಹಲಿಯಲ್ಲಿ ವಾಯುಗುಣಮಟ್ಟ ಕ್ಷೀಣಿಸುತ್ತಿರುವ ಕಾರಣ ಮತ್ತಷ್ಟು ಕಠಿಣ ನಿಯಮಗಳು ಜಾರಿಯಾಗಲಿದೆ. ಇತ್ತೀಚೆಗೆ ಕಟ್ಟಡ ಕಾಮಗಾರಿ ಸೇರಿದಂತೆ ಕಾಮಗಾರಿ ಕೆಲಸಗಳಿಗ ನಿರ್ಬಂಧ ಹೇರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಈ ನಿರ್ಧಾರ ಹಿಂಪಡೆಯಲಾಗಿತ್ತು.


