Asianet Suvarna News Asianet Suvarna News

ಮಹಿಳಾ ಸಮಾನತೆ ದಿನಾಚರಣೆಗೆ NTPC ಕೊಡುಗೆ; ಮಹಿಳಾ ಎಂಜನೀಯರ್ಸ್ ಬ್ಯಾಚ್ ನೇಮಕಾತಿ!

  • ಮಹಿಳಾ ಸಮಾನತೆ ದಿನಾಚರಣೆಗೆ ಮಹಿಳೆಯರಿಗೆ ಬಂಪರ್ ಗಿಫ್ಟ್
  • ಎಲ್ಲಾ ಮಹಿಳಾ ಇಂಜಿನಿಯರ್ಸ್ ಬ್ಯಾಚ್ ನೇಮಕಾತಿ ಪ್ರಕಟ
  • NTPCಯಿಂದ ಮಹತ್ವದ ನಿರ್ಧಾರ
Womens Equality Day NTPC announces recruitment of an all Female Engineers batch ckm
Author
Bengaluru, First Published Aug 26, 2021, 6:13 PM IST

ನವದೆಹಲಿ(ಆ.26): ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್(NTPC) ಮಹಿಳಾ ಸಮಾನತೆ ದಿನಾಚರಣೆಗೆ ಮಹತ್ವದ ನಿರ್ಧಾರ ತೆಗೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳಾ ಸಮಾನತೆ ದಿನವಾದ ಇಂದು(ಆ.26) NTPC ತನ್ನ ಮೊದಲ ಎಲ್ಲಾ ಮಹಿಳಾ ಎಂಜಿನಿಯರಿಂಗ್ ಎಕ್ಸಿಕ್ಯುಟಿವ್ ಟ್ರೈನೀಸ್ (EETs) ಬ್ಯಾಚ್‌ನ್ನು ನೇಮಕಾತಿ ಮಾಡಿದೆ.

NTPCಯಲ್ಲಿ ನೇಮಕಾತಿ; ತಿಂಗಳಿಗೆ 71 ಸಾವಿರ ರೂಪಾಯಿ ಸಂಬಳ!

NTPC ಮೊದಲ ಮಹಿಳಾ ಎಂಜಿನೀಯರ್ ಪದವೀಧರರನ್ನು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗಗಳಲ್ಲಿ ನೇಮಕಾತಿ ಮಾಡಲಾಗಿದೆ. ಇವರ ಸಾಧನೆಯನ್ನು ಆಧರಿಸಿ ಆಯ್ಕೆ ಮಾಡಲಾಗಿದೆ. ಎಪ್ರಿಲ್ 2021ರಲ್ಲಿ NTPC ಮಹಿಳಾ ನೇಮಕಾತಿ ಕುರಿತು ಜಾಹೀರಾತು ಪ್ರಕಟಿಸಿತ್ತು. NTPC ಜಾಹೀರಾತು ಹಾಗೂ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಮಹಿಳೆಯ ಉಜ್ವಲ ಭವಿಷ್ಯಕ್ಕಾಗಿ NTPC ಮಹಿಳಾ ಕಾರ್ಯಚರಣೆ ನಿಯಂತ್ರಣ ಕೊಠಡಿ(female Operation Control Room ) ಕಲ್ಪಿಸಲು ನಿರ್ಧರಿಸಿದೆ. NTPC ಮೊದಲ ಮಹಿಳಾ ಬ್ಯಾಚ್ ಎಂಜನೀಯರ್ಸ್‌ಗೆ 50 ಆಫರ್ ಲೆಟರ್(ನೇಮಕಾತಿ ಪತ್ರ) ನೀಡಲಾಗಿತ್ತು. ಇದರಲ್ಲಿ 30 ಮಹಿಳಾ ಎಂಜಿನೀಯರ್ಸ್ ತರಬೇತಿದಾರರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. 

ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು

ಹೊಸ ನೇಮಕಾತಿಗೊಂಡಿರುವ ಮಹಿಳಾ ಎಂಜಿನೀಯರ್ಸ್ ಜೊತೆ ಆಡಳಿತ ಮಂಡಳಿ ಸದಸ್ಯರು, ಹಿರಿಯ ಉದ್ಯೋಗಿಗಳು ನಿರಂತರ ಪ್ರೋತ್ಸಾಹ, ಸಲಹೆ ಸೂಚನೆ ನೀಡುವ ಮೂಲಕ ತ್ವರಿತವಾಗಿ ಕೌಶಲ್ಯ ಅಭಿವೃದ್ಧಿಪಡಿಸಲು ನೆರವಾಗುತ್ತಿದ್ದಾರೆ. NTPC ಲಿಂಗ ತಾರತಮ್ಯ ನಿವಾರಿಸಲು ತನ್ನ ಕೈಲಾದ ಕಲಸ ಮಾಡುತ್ತಿದೆ. ಸಮಾಜದ ಎಲ್ಲಾ ವರ್ಗಗಳಗೆ ಸಮಾನ ಅವಕಾಶ ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Follow Us:
Download App:
  • android
  • ios