Asianet Suvarna News Asianet Suvarna News

NTPCಯಲ್ಲಿ ನೇಮಕಾತಿ; ತಿಂಗಳಿಗೆ 71 ಸಾವಿರ ರೂಪಾಯಿ ಸಂಬಳ!

ಖಾಲಿ ಇರುವ 35 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿರುವ ನ್ಯಾಷನಲ್ ಎನ್‌ಟಿಪಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ಅರ್ಹ ಎಂಜಿನಿಯರ್ ಅಭ್ಯರ್ಥಿಗಳು ಆಯ್ಕೆಯಾದರೆ ತಿಂಗಳಿಗೆ 71 ಸಾವಿರ ಸಂಬಳ ಸಿಗಲಿದೆ ಮತ್ತು ಈ ನೇಮಕಾತಿ ಗುತ್ತಿಗೆ ಅವಧಿಯದ್ದಾಗಿದೆ.

NTPC is recruiting its various posts and check details here
Author
Bengaluru, First Published Apr 7, 2021, 4:13 PM IST

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿಯಿರುವ 35 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಅರ್ಹ ಇಂಜಿನಿಯರ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನವದೆಹಲಿಯಲ್ಲಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ)  ಭವನದಲ್ಲಿ ಖಾಲಿಯಿರೋ ಹುದ್ದೆಗಳನ್ನ ಭರ್ತಿ ಮಾಡಲಾಗುವುದು.

ವಿಜ್ಞಾನ ಪ್ರಸಾರದಲ್ಲಿ ಉದ್ಯೋಗ: ಸಖತ್ ಸಂಬಳವೂ ಇದೆ

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಾಹಕ (ಸುರಕ್ಷತೆ), ಕಾರ್ಯನಿರ್ವಾಹಕ (ಐಟಿ ಡಾಟಾ ಕೇಂದ್ರ ಮತ್ತು ಡೇಟಾ ರಿಕವರಿ), ಹಿರಿಯ ಕಾರ್ಯನಿರ್ವಾಹಕ (ಸೌರ) ಮತ್ತು ತಜ್ಞ (ಸೌರ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಸಂಬಂಧ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.

2021ರ ಏಪ್ರಿಲ್ 1ರಿದಂಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಹಾಗೆಯೇ, ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹಾಗಾಗಿ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಬಹುದು.

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿ(ಎನ್‌ಟಿಜಿಸಿ)ಗೆ ನೇಮಕ ಮಾಡಿಕೊಳ್ಳುತ್ತಿರುವ ಹುದ್ದಗಳು ಮೂರು ವರ್ಷಗಳ ಕಾಂಟ್ರಾಕ್ಟ್ ಅವಧಿಯಾಗಿದ್ದಿವೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 71 ಸಾವಿರ ರೂಪಾಯಿ ಸಂಬಳ ಸಿಗಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು  ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಮತ್ತು ಅಂಗೀಕರಿಸಲ್ಪಟ್ಟ ವಿಶ್ವವಿದ್ಯಾಲಯಗಳು / ಸಂಸ್ಥೆಗಳಿಂದ ಅಗತ್ಯವಾದ ಅರ್ಹತೆಗಳನ್ನು ಹೊಂದಿರಬೇಕು.

ವಾಯುಪಡೆಯಲ್ಲಿ 1515 ಗ್ರೂಪ್‌ ಸಿ ಹುದ್ದೆಗಳಿಗೆ ನೇಮಕಾತಿ ಶುರು, ಅಪ್ಲೈ ಮಾಡಿ

ಈ ಹುದ್ದೆಗಳಿಗೆ  ಯಾವುದೇ ಕೋಟಾದಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕೆ ಅಗತ್ಯವಾದ ಪ್ರಮಾಣಪತ್ರಗಳನ್ನು ಒದಗಿಸಬೇಕು. ಪ್ರತಿ ಪ್ರೊಫೈಲ್‌ನ ಅವಶ್ಯಕತೆಗಳು ವಿಭಿನ್ನವಾಗಿವೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಪರಿಶೀಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಯಾವುದೇ ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸುವ ಅಗತ್ಯವಿಲ್ಲ.

NTPC is recruiting its various posts and check details here

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿ. ಖಾಲಿ ಇರುವ 45 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ 35 ಹುದ್ದೆಗಳ ಪೈಕಿ, 25 ಎಕ್ಸಿಕ್ಯೂಟಿವ್ ಸೇಫ್ಟಿ ಹುದ್ದೆಗಳು ಖಾಲಿ ಇದ್ದರೆ, ಐಟಿ ಡೇಟಾ ಮತ್ತು ಡೇಟಾ ರಿಕವರಿ ಎಕ್ಸಿಕ್ಯೂಟಿವಿ 8 ಹುದ್ದೆಗಳು ಖಾಲಿ ಇವೆ.  ಇನ್ನು ಸೀನಿಯರ್ ಎಕ್ಸಿಕ್ಯೂಟಿವ್ (ಸೋಲಾರ್) ಮತ್ತು   ಸ್ಪೆಷಾಲಿಟಿ (ಸೋಲಾರ್) ಕ್ರಮವಾಗಿ ಒಂದೊಂದು ಖಾಲಿ ಹುದ್ದೆಗಳಿವೆ. ಎನ್‌ಟಿಪಿಸಿ ಈ ಎಲ್ಲ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ.

ಅರ್ಜಿ ಸಲ್ಲಿಸುವುದು ಹೇಗೆ?: ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೆ ವೆಬ್ ಸೈಟ್ಗೆ ಲಾಗಿನ್ ಆಗ ಬೇಕು. ಏಪ್ರಿಲ್ ೧೫ ರೊಳಗೆ ಲಾಗಿನ್ ಆಗಿ ಅರ್ಹತೆ ಬಗ್ಗೆ ಪರಿಶೀಲಿಸಬೇಕು. ಸಾಮಾನ್ಯ ವರ್ಗ, ಇಡಬ್ಲ್ಯೂಎಸ್ ಅಥವಾ ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಮರುಪಾವತಿಸಲಾಗದ ನೋಂದಣಿ ಶುಲ್ಕ 300 ರೂ.ಪಾವತಿಸಬೇಕು.

ಇಸ್ರೋದಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ಅವಕಾಶ, ಅರ್ಜಿ ಸಲ್ಲಿಸಲು ಏ.21 ಕೊನೆಯ ದಿನ

ಬೇರೆ ಯಾವುದೇ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್‌ ಮೂಲಕ ಪಾವತಿ ಮಾಡಬಹುದು. ಶುಲ್ಕ ಪಾವತಿ ಮಾಡಿದ ನಂತರ,ಅಭ್ಯರ್ಥಿಗಳು, ಭಾವಚಿತ್ರ, ಸಹಿ, ಶುಲ್ಕ ರಸೀದಿ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.

ಈ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

Follow Us:
Download App:
  • android
  • ios