Asianet Suvarna News Asianet Suvarna News

ಮಸೀದಿಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ, ಮುಸ್ಲಿಮ್ ಬೋರ್ಡ್!

ಮಸೀದಿಯೊಳಕ್ಕೆ ಮುಸ್ಲಿಮ್ ಮಹಿಳೆರಿಗೆ ಪ್ರವೇಶವಿಲ್ಲ ಅನ್ನೋದು ಹಲವು ಬಾರಿ ಚರ್ಚೆಯಾಗಿದೆ. ಇದೀಗ ಮುಸ್ಲಿಮ್ ಬೋರ್ಡ್ ಸುಪ್ರೀಂ ಕೋರ್ಟ್‌ಗೆ ಮಹತ್ವದ ಹೇಳಿಕೆ ನೀಡಿದೆ. ಮುಸ್ಲಿಮ್ ಮಹಿಳೆ ಮಸೀದಿ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಆದರೆ ಒಂದು ಷರತ್ತು ಇದೆ ಎಂದಿದ್ದಾರೆ.

Women permitted to enter mosques for offering namaz says Muslim Personal Law Board in Supreme court ckm
Author
First Published Feb 9, 2023, 8:08 PM IST

ನವದೆಹಲಿ(ಫೆ.09): ಮಸೀದಿಯೊಳಗೆ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ಯಾಕಿಲ್ಲ ಅನ್ನೋ ಪ್ರಶ್ನೆ ಹಲವು ಭಾರಿ ಚರ್ಚೆಯಾಗಿದೆ. ಮುಸ್ಲಿಮ್ ಧಾರ್ಮಿಕ ಮುಖಂಡರು, ಮೌಲ್ವಿಗಳು ಈ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದೀಗ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(AIMPLB) ಮಹತ್ವದ ಹೇಳಿಕೆ ನೀಡಿದೆ. ಸುಪ್ರೀಂ ಕೋರ್ಟ್‌ಗೆ ನೀಡಿದ ಹೇಳಿಕೆಯಲ್ಲಿ ಮುಸ್ಲಿಮ್ ಮಹಿಳೆಯರು ಮಸೀದಿ ಪ್ರವೇಶಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಮಸೀದಿಯೊಳಗೆ ಮುಸ್ಲಿಮ್ ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ಮುಸ್ಲಿಮ್ ಬೋರ್ಡ್, ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಆದರೆ ಮಸೀದಿಯೊಳಗೆ ಮಹಿಳೆಯರು ಹಾಗೂ ಮುಸ್ಲಿಮರು ಜೊತಯಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ. ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು AIMPLB ಹೇಳಿದೆ.

ಮುಸ್ಲಿಮ್ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಈ ಕುರಿತು AIMPLB ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ. ಈ ಅಫಿದವಿತ್‌ನಲ್ಲಿ ಮಹತ್ವದ ಅಂಶ ಉಲ್ಲೇಖಿಸಿದೆ. ಮುಸ್ಲಿಮ್ ಮಹಿಳೆಯರೂ ಮಸೀದಿಯೊಳಗೆ ಪ್ರವೇಶಿಸಿ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬುಹುದು ಎಂದಿದೆ.

ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್‌ ಅಖ್ತರ್ ಕಿಡಿ

ಮಸೀದಿಯೊಳಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮ್ ಮಹಿಳೆಗೆ ಅವಕಾಶವಿದೆ. ಅದು ಆಕೆಯ ಹಕ್ಕಾಗಿದೆ ಎಂದು AIMPLB ತನ್ನ ಅಫಿದವಿತ್‌ನಲ್ಲಿ ಹೇಳಿದೆ. ಆದರೆ ಮಸೀದಿಯೊಳಗೆ ನಡೆಯುವ ಧಾರ್ಮಿಕ ಆಚರಣೆಗಳು, ಮುತ್ತಾವಾಲಿಗಳು ಸಂಪೂರ್ಣವಾಗಿ ಮಸೀದಿ ನಿಯಂತ್ರಿಸವು ಖಾಸಗಿ ಕ್ರಮಗಳು. ಹೀಗಾಗಿ ಈ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರು ಪ್ರವೇಶಿಸಿದರೆ ಅವರಿಗೆ ವ್ಯವಸ್ಥೆ ಮಾಡಲು AIMPLB ಅಥವಾ ನ್ಯಾಯಾಲಕ್ಕೆ ಸಾಧ್ಯವಿಲ್ಲ. ಆದರೆ ಮುಸ್ಲಿಮ್ ಮಹಿಳೆಯರಿಗೆ ದಿನಕ್ಕೆ 5 ಬಾರಿ ನಮಾಜ್ ಹಾಗೂ ಪ್ರಾರ್ಥನೆಗಾಗಿ ಮಸೀದಿಗೆ ಬರುವುದನ್ನು ಕಡ್ಡಾಯ ಮಾಡಿಲ್ಲ. ಆದರೂ ಮುಸ್ಲಿಮ್ ಮಹಿಳೆಯರು ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು AIMPLB ಹೇಳಿದೆ.

ಇಸ್ಲಾಮ್ ಧಾರ್ಮಿಕ ಪಠ್ಯದಲ್ಲಿ ಮಸೀದಿಯೊಳಗೆ ಪುರುಷ ಹಾಗೂ ಮಹಿಳೆ ಜೊತೆಯಾಗಿ ಪ್ರಾರ್ಥನೆ ಸಲ್ಲಿಸುವ ಯಾವುದೇ ಉಲ್ಲೇಖವಿಲ್ಲ. ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕ ಹಾಗೂ ಮದೀನಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮಸೀದಿಯೊಳಗೆ ಪ್ರತ್ಯೇಕ ವ್ಯವಸ್ಥೆಯಲ್ಲೇ ಪ್ರಾರ್ಥನೆ ಮಾಡಬೇಕು. ಮಹಿಳೆಯರು ಹಾಗೂ ಪುರುಷರು ಜೊತೆಯಾಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ ಎಂದು AIMPLB ತನ್ನ ಅಫಿದವಿತ್‌ನಲ್ಲಿ ಹೇಳಿದೆ.

ಮುಸ್ಲಿಮರ ಮದುವೆ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ: ಹೈಕೋರ್ಟ್

ಇದರ ಜೊತೆಗ ಫತ್ವಾ ಕುರಿತು AIMPLB ಹೇಳಿಕೆ ನೀಡಿದೆ. ಫತ್ವಾ ಇಸ್ಲಾಂ ಧಾರ್ಮಿಕ ಹಾಗೂ ಸಿದ್ಧಾಂತ ಆಧರಿಸಿ ಅಭಿಪ್ರಾಯವಾಗಿದೆ. ಧರ್ಮದಲ್ಲಿ ನಂಬಿಕೆ ಇಟ್ಟವರಿಗೆ, ಧರ್ಮ ಅನುಸರಿಸುವವರಿಗೆ ಕೆಲ ಸಂದರ್ಭದಲ್ಲಿ  ಫತ್ವಾ ಹೊರಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಧಾರ್ಮಿಕ ನಂಬಿಕೆ ಹಾಗೂ ಧಾರ್ಮಿಕ ವಿಧಾನವಾಗಿದೆ. ಹೀಗಾಗಿ ಫತ್ವಾ ಹೊರಡಿಸುವುದನ್ನು ನ್ಯಾಯಾಂಗ  ನಿರ್ಬಂಧಿಸಲು ಸಾಧ್ಯವಿಲ್ಲ. ಒಂದು ವೇಳೆ ನ್ಯಾಯಾಂಗ ಫತ್ವಾ ನಿರ್ಬಂಧಿಸಲು ಪ್ರಯತ್ನಿಸಿದರೆ ಅದು ಧಾರ್ಮಿಕ ಉಲ್ಲಂಘನೆಯಾಗಲಿದೆ ಎಂದು AIMPLB ಹೇಳಿದೆ. 
 

Follow Us:
Download App:
  • android
  • ios