ಮುಸ್ಲಿಮರ ಮದುವೆ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ: ಹೈಕೋರ್ಟ್
ವೈಯಕ್ತಿಕ ಕಾನೂನು ಅಡಿ ಮುಸಲ್ಮಾನರು ಆಗುವ ಮದುವೆ ‘ಪೋಕ್ಸೋ’ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಿಂದ ಹೊರಗಿಲ್ಲ. ವಿವಾಹದ ಹೆಸರಿನಲ್ಲಿ ಬಾಲಕಿ ಜತೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಕೊಚ್ಚಿ: ವೈಯಕ್ತಿಕ ಕಾನೂನು ಅಡಿ ಮುಸಲ್ಮಾನರು ಆಗುವ ಮದುವೆ ‘ಪೋಕ್ಸೋ’ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಿಂದ ಹೊರಗಿಲ್ಲ. ವಿವಾಹದ ಹೆಸರಿನಲ್ಲಿ ಬಾಲಕಿ ಜತೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಕೇರಳ ಹೈಕೋರ್ಟ್ ಹೇಳಿದೆ. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದು ಗಮನಾರ್ಹ.
15 ವರ್ಷದ ಬಾಲಕಿಯನ್ನು ನಾನು ವಿವಾಹವಾಗಿದ್ದೇನೆ (Wedding). ಆದರೂ ನನ್ನ ವಿರುದ್ಧ ಅಪಹರಣ ಹಾಗೂ ಆಕೆಯನ್ನು ಗರ್ಭಿಣಿಯನ್ನಾಗಿಸಿದ (Pragnent) ಆರೋಪದಡಿ ಪೋಕ್ಸೋ ಕಾಯ್ದೆಯಡಿ (Pocso) ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಜಾಮೀನು ನೀಡಬೇಕು’ ಎಂದು ಕೋರಿ 31 ವರ್ಷದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬಾಲ್ಯ ವಿವಾಹ ಎಂಬುದು ಸಮಾಜದ ಪಿಡುಗು. ಮಕ್ಕಳೊಂದಿಗೆ ದೈಹಿಕ ಸಂಬಂಧ (Physical Relationship) ಹೊಂದುವುದನ್ನು, ಇದಕ್ಕಾಗಿ ಮದುವೆಯಾಗುವುದನ್ನು ತಡೆಯುವುದಕ್ಕಾಗಿಯೇ ಪೋಕ್ಸೋ ಕಾಯ್ದೆ ಇರುವುದು. ಹೀಗಾಗಿ ವೈಯಕ್ತಿಕ ಕಾನೂನಿನಡಿ ಮುಸ್ಲಿಮರ ವಿವಾಹ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ’ ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ (Bechu Kurian Thomas) ಅವರು ನ.18ರಂದು ಮಹತ್ವದ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
‘ಮೊಹಮ್ಮದೀಯ ಕಾನೂನಿನಡಿ (Mohammedan law) ಬಾಲಕಿಯನ್ನು 2021ರ ಮಾ.14ರಂದು ವಿವಾಹವಾಗಿದ್ದೇನೆ. ಮೊಹಮದೀಯ ಕಾನೂನಿನಡಿ 18 ವರ್ಷದ ಕೆಳಗಿನವರನ್ನೂ ವಿವಾಹವಾಗಲು ಅವಕಾಶವಿದೆ. ಹೀಗಾಗಿ ಪೋಕ್ಸೋ ಕಾಯ್ದೆಯಡಿ ತನ್ನ ವಿಚಾರಣೆ ನಡೆಸಕೂಡದು’ ಎಂದು ಪಶ್ಚಿಮ ಬಂಗಾಳ ಮೂಲದ ಖಾಲಿದುರ್ ರೆಹಮಾನ್ ವಾದಿಸಿದ್ದ. ಬಾಲಕಿ ಕೇರಳದ ಪಟ್ಟಣಂತಿಟ್ಟ (Pattanithatta) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾಗ 16ನೇ ವಯಸ್ಸಿನಲ್ಲೇ ಗರ್ಭಿಣಿಯಾಗಿರುವುದನ್ನು ಅಲ್ಲಿನ ಸಿಬ್ಬಂದಿ ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ 2022ರ ಆ.31ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಪ್ರಾಪ್ತ ಹೆಂಡತಿಯ ಮೇಲೆ ಅತ್ಯಾಚಾರ ಪ್ರಕರಣ: ಪೋಕ್ಸೊ ಕೇಸ್ ರದ್ದುಮಾಡಿದ ಕರ್ನಾಟಕ ಹೈಕೋರ್ಟ್
ಹಿಜಾಬ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ!
ಮುಸ್ಲಿಮರಿಗೆ ಭಿಕ್ಷೆ ಯಾಕೆ ಕೊಟ್ರಿ? ಆಗ GPRS ಇತ್ತಾ? ರಜಾಕ್ ವಾದ!