ನಾಗ್ಪುರ (ಫೆ.19): ‘ಚರ್ಮಕ್ಕೆ ಚರ್ಮ ಸ್ಪರ್ಶ ಆಗದೇ ಇದ್ದರೆ ಅದು ಲೈಂಗಿಕ ಕಿರುಕುಳ ಅಲ್ಲ’ ಎಂದು ವಿವಾದಿತ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಾಧೀಶೆ ನ್ಯಾ. ಪುಷ್ಪಾ ಗನೇಡಿವಾಲಾ ಅವರಿಗೆ ಗುಜರಾಗಿನ ಮಹಿಳೆಯೊಬ್ಬಳು 150 ಕಾಂಡೋಂಗಳನ್ನು ಕಳುಹಿಸಿಕೊಟ್ಟಿದ್ದು, ತೀರ್ಪಿನ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾಳೆ. 

ತನ್ನನ್ನು ರಾಜಕೀಯ ವಿಶ್ಲೇಷಕಿ ಎಂದು ಕರೆಸಿಕೊಳ್ಳುವ ದೇವಶ್ರೀ ತ್ರಿವೇದಿ ಫೆ.13ರಂದು 12 ಪ್ಯಾಕ್‌ನಲ್ಲಿ 150 ಕಾಂಡೋಂಗಳನ್ನು ನ್ಯಾ.ಪುಷ್ಪಾ ಅವರ ನಾಗ್ಪುರ ವಿಳಾಸ ಮತ್ತು ನ್ಯಾಯಾಧೀಶರ ಅಧಿಕೃತ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಲೈಂಗಿಕ ಶೋಷಣೆ ಬಗ್ಗೆ ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ಗೆ ‘ಶಿಕ್ಷೆ’! ...

 ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ.