Asianet Suvarna News Asianet Suvarna News

ಹೃದಯಾಘಾತಕ್ಕೆ ಕುಸಿದ ಬಿದ್ದ ಮಹಿಳೆ, ವಿಮಾನದಲ್ಲಿದ್ದ ನಾಲ್ವರು ವೈದ್ಯರಿಂದ ಜೀವ ರಕ್ಷಣೆ!

ದೆಹಲಿ ಪಾಟ್ನಾ ವಿಮಾನ ಸಂಚಾರದ ನಡುವೆ ಮಹಿಳೆಯೊಬ್ಬರು ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅದೇ ವಿಮಾನದಲ್ಲಿ ಸಂಚರಿಸುತ್ತಿದ್ದ ನಾಲ್ವರು ವೈದ್ಯರು ನರೆವಿಗೆ ಧಾವಿಸಿದ್ದಾರೆ. ಪರಿಣಾಮ ಮಹಿಳೆಯ ಜೀವ ಉಳಿಸಿದ್ದಾರೆ.
 

Woman passenger collapse after heart attack in Dehli Patna mid flight four doctors saves her life on board ckm
Author
First Published Nov 21, 2022, 9:35 PM IST

ದೆಹಲಿ(ನ.21) ದೆಹಲಿಯಿಂದ ವಿಮಾನ ಟೇಕ್ ಆಫ್ ಆಗಿ ಸರಿಸುಮಾರು 35 ನಿಮಿಷಗಳಾಗಿವೆ. ಬಿಹಾರ ರಾಜಧಾನಿ ಪಾಟ್ನಾದತ್ತ ಸಾಗುತ್ತಿದ್ದ ವಿಮಾನ ಇನ್ನು1 ಗಂಟೆ 10 ನಿಮಿಷಗಳ ಪ್ರಯಾಣ ಬಾಕಿ ಉಳಿದಿತ್ತು. ಈ ವೇಳೆ ವಿಮಾನದಲ್ಲಿದ್ದ ಮಹಿಳೆ ಸುಮನಾ ಅಗರ್ವಾಲ್ ಎದೆ ನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇಷ್ಟೇ ಅಲ್ಲ ತಮ್ಮ ಸೀಟಿನಲ್ಲೇ ಕುಸಿದಿದ್ದಾರೆ. ಇದನ್ನು ಗಮನಿಸಿದ ಗಗನಸಖಿಯರು ತಕ್ಷಣವೇ ಪ್ರಯಾಣಿಕರೋರ್ವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರಿಗೆ ನೆರವು ಬೇಕಿದೆ ಎಂದು ಅನೌನ್ಸ್ ಮಾಡಿದ್ದಾರೆ. ಈ ಘೋಷಣೆ ಹೊರಬೀಳುತ್ತಿದ್ದಂತೆ ಅದೇ ವಿಮಾನದಲ್ಲಿದ್ದ ನಾಲ್ವರು ವೈದ್ಯರು ನೆರವಿಗೆ ಧಾವಿಸಿದ್ದಾರೆ. ಮೂವರು ಪುರಷ ವೈದ್ಯರು ಹಾಗೂ ಓರ್ವ ಮಹಿಳಾ ವೈದ್ಯೆ ನೆರವಿಗೆ ಬಂದಿದ್ದಾರೆ. ತುರ್ತು ಚಿಕಿತ್ಸೆ ನೀಡುವ ಮೂಲಕ ಮಹಿಳೆಯ ಜೀವ ಉಳಿಸಿದ್ದಾರೆ.

ಮಹಿಳೆ ಕುಸಿದು ಬಿದ್ದದತ್ತ ಧಾವಿಸಿದ ನಾಲ್ವರು ವೈದ್ಯರು ಮಹಿಳೆಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಮಹಿಳೆಯ ಯಾವುದೇ ವೈದ್ಯಕೀಯ ದಾಖಲೆಗಳು ಇವರಿಗೆ ತಿಳಿದಿಲ್ಲ. ಆದರೆ ಪರಿಸ್ಥಿತಿ ಹಾಗೂ ಅವರ ಆರೋಗ್ಯ ಪರೀಶಿಲಿಸಿದ ವೈದ್ಯರು ಗಗನಸಖಿಯಲ್ಲಿ ನೀರಿಗೆ ಸಕ್ಕರೆ ಬೆರೆಸಿ ನೀಡಲು ಸೂಚಿಸಿದ್ದಾರೆ. ಇದರ ಜೊತೆಗೆ ಹೆಚ್ಚುವರಿ ಆಮ್ಲಜನಕವನ್ನು ನೀಡಿದ್ದಾರೆ. ಇದು ವಿಮಾನದಲ್ಲಿ ಮಾಡುವುದು ಅತ್ಯಂತ ಅಪಾಯಕಾರಿ. ಕಾರಣ ಇದರಿಂದ ರೋಗಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಅಪಾಯದ ಮಟ್ಟ ಹೆಚ್ಚಾಗುವ ಸಾಧ್ಯತೆಯೂ ಇದೆ. ಆಸ್ಪತ್ರೆಯಲ್ಲೇ ಈ ಚಿಕಿತ್ಸೆ ವಿಧಾನ ಹೆಚ್ಚು ಸವಾಲಿನಿಂದ ಕೂಡಿರಲಿದೆ ಎಂದು ಚಿಕಿತ್ಸೆ ನೀಡಿದ ಓರ್ವ ವೈದ್ಯ ಅಭಿಷೇಕ್ ಕುಮಾರ್ ಸಿನ್ಹ ಹೇಳಿದ್ದಾರೆ.   

ವಿಮಾನದಲ್ಲಿ ಯೋಧನಿಗೆ ಹೃದಯಾಘಾತ; ಪ್ರಾಣ ಉಳಿಸಿದ ಕೇರಳದ 'ಫ್ಲಾರೆನ್ಸ್ ನೈಟಿಂಗೇಲ್' ಪಿ.ಗೀತಾ

ವಿಮಾನದಲ್ಲಿರುವ ಮೆಡಿಸಿನ್ ಸಂಗ್ರಹದಿಂದ ಜೀವ ರಕ್ಷಕ ಔಷಧಿಗಳನ್ನು ಮಹಿಳೆಗೆ ನೀಡಲಾಗಿದೆ. ಈ ವೇಳೆ ನಿಧಾನವಾಗಿ ಮಹಿಳೆ ಚೇತರಿಸಿಕೊಂಡಿದ್ದಾರೆ. ಪ್ರಜ್ಞಾಹೀನರಾಗಿ ಕುಸಿದಿದ್ದ ಮಹಿಳೆಯ ದೇಹದಲ್ಲಿ ಚಲನವಲನ ಆರಂಭಗೊಂಡಿದೆ. 25 ನಿಮಿಷ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆ್ಯಂಬುಲೆನ್ಸ್ ಹಾಗೂ ವೈದ್ಯರು ರೆಡಿಯಾಗಿದ್ದರು. ಮಹಿಳೆಯನ್ನು ನೇರವಾಗಿ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ. ಸದ್ಯ ಮಹಿಳೆ ನಿಧನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ವೈದ್ಯರ ನೆರವಿನಿಂದ ಮಹಿಳೆಯ ಪ್ರಾಣ ಉಳಿದಿದೆ. ನಾಲ್ವರು ವೈದ್ಯರು ತಕ್ಷಣ ನೆರವಿಗೆ ಧಾವಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಇದೀಗ ಈ ವೈದ್ಯರ ಸೇವೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

ಮೊದಲ ಬಾರಿ ವಿಮಾನವೇರಿದ ಹಿರಿಜೀವಗಳು... ಅಮೇಲೇನಾಯ್ತು ನೋಡಿ..

ವಿಮಾನದಲ್ಲಿ ಇನ್ನು ಮಾಸ್ಕ್ ಧಾರಣೆ ಕಡ್ಡಾಯ ಅಲ್ಲ
ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದಲ್ಲಿ ಮಾಸ್‌್ಕ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ಹಿಂದಕ್ಕೆ ಪಡೆದಿದೆ. ಆದರೆ ಪ್ರಯಾಣಿಕರು ತಮ್ಮ ಸುರಕ್ಷತೆಗಾಗಿ ಮುಖಗವಚ ಧರಿಸುವುದು ಉತ್ತಮ ಎಂದು ಹೇಳಿದೆ. ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ನೀಡಿದ್ದ ಕೋವಿಡ್‌-19 ನಿರ್ವಹಣೆಗೆ ಅನುಗುಣವಾಗಿ ನೀಡಿದ್ದ ಮಾರ್ಗಸೂಚಿಗಳನ್ನು ಅನುಸರಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಚಿವಲಯ ತಿಳಿಸಿದೆ. ಇನ್ನು ಮುಂದೆ ಕೋವಿಡ್‌-19ನಿಂದ ಉಂಟಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮಾಸ್‌್ಕ ಧರಿಸಬೇಕೆಂದು ಪ್ರಕಟಣೆ ನೀಡಬೇಕೆಂದು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.
 

Follow Us:
Download App:
  • android
  • ios