ಪ್ರತಿಭಟಿಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನ!

ಖಾಸಗಿ ಜಮೀನನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸಿದ ಮಹಿಳೆಯರ ಮೇಲೆ ಜಲ್ಲಿ ಕಲ್ಲು ಮಣ್ಣು ಸುರಿದು ಜೀವಂತ ಸಮಾಧಿ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.
 

Woman Partially Buried During Protest Against Road Construction at Madhya Pradesh ckm

ರೇವಾ(ಜು.21) ತಮ್ಮ ಖಾಸಗಿ ಜಮೀನನಲ್ಲಿರಸ್ತೆ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಜಮೀನನಲ್ಲೇ ಕುಳಿತು ಪ್ರತಿಭಟಿಸಿದ ಇಬ್ಬರು ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯರು ನೆರವಿಗೆ ಧಾವಿಸಿ ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಕೃತ್ಯ ಎಸಗಿದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.

ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಇಬ್ಬರು ಮಹಿಳೆಯರು ತಮ್ಮ ಜಮೀನಿನಲ್ಲಿ ಪರಿವಾರದ ಮತ್ತೊಬ್ಬ ಸದಸ್ಯರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆ ಮಮತಾ ಹಾಗೂ ಆಶಾ ಇಬ್ಬರು ವಿರೋಧಿಸಿದ್ದಾರೆ. ನಿಮ್ಮ ಜಮೀನಿಗೆ ದಾರಿಗಾಗಿ ನಮ್ಮ ಜಮೀನು ಬಲಿಕೊಡುವುದಿಲ್ಲ. ಇದು ನಮ್ಮ ಜಮೀನು, ಪುಕ್ಸಟೆ ನೀಡಲು ಸಾಧ್ಯವಿಲ್ಲ ಎಂದು ಗದರಿದ್ದಾರೆ. 

ಕೊಲೆಗಾರನ ಬೆನ್ನಟ್ಟಲು ಮಳೆಯನ್ನೂ ಲೆಕ್ಕಿಸದೆ 8 ಕಿ.ಮೀ ಓಡಿ ಮಹಿಳೆಯ ಪ್ರಾಣ ಉಳಿಸಿದ ಕರ್ನಾಟಕ ಪೊಲೀಸ್ ಶ್ವಾನ!

ಮಮತಾ ಹಾಗೂ ಆಶಾ ಪಾಂಡೆ ವಿರೋಧದಿಂದ ಮರಳಿದ್ದ ಪರಿವಾರ ಸದಸ್ಯರು ಏಕಾಏಕಿ ಟಿಪ್ಪರ್ ಮೂಲಕ ಜಲ್ಲಿ, ಕಲ್ಲು ತುಂಬಿದ ಮಣ್ಣು ತಂದಿದ್ದಾರೆ. ಈ ವೇಳೆ ದಾರಿ ಮಾಡಲು ಉದ್ದೇಶಿದಸ್ಥಳದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು ಸುರಿದ್ದಾರೆ.ಈ ಮೂಲಕ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆ. 

 

 

ಒರ್ವ ಮಹಿಳೆ ಅರ್ಧ ಭಾಗ ಮಣ್ಣಿನಡಿ ಸಿಲುಕಿಕೊಂಡರೆ, ಮತ್ತೊರ್ವ ಮಹಿಳೆ ಕುತ್ತಿಗೆ ವರಗೆ ಮಣ್ಣಿನಡಿ ಸಿಲುಕಿದ್ದಾರೆ. ಮಹಿಳೆಯರ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮಹಿಳೆಯರ ಆರೋಗ್ಯ ಚೇತರಿಕೆ ಕಂಡಿದೆ. ಹೀಗಾಗಿ ಸಂಜೆ ವೇಳೆ ಬಿಡುಗಡೆ ಮಾಡಲಾಗಿದೆ.

ರೀಲ್ಸ್ ಹುಚ್ಚಿಗೆ ಬಿದ್ದ ಮಹಾಶಯ ಮಾಡಿದ್ದ ಹುಚ್ಚಾಟ ಏನು..? ರೀಲ್ಸ್ ಮಾಡುವವರೇ ಎಚ್ಚರ..ಎಚ್ಚರ..ಎಚ್ಚರ..!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಒರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಇತ್ತ ಮಣ್ಣು ಸುರಿಯಲು ಬಳಸಿದ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios