ಕೊಲೆಗಾರನ ಬೆನ್ನಟ್ಟಲು ಮಳೆಯನ್ನೂ ಲೆಕ್ಕಿಸದೆ 8 ಕಿ.ಮೀ ಓಡಿ ಮಹಿಳೆಯ ಪ್ರಾಣ ಉಳಿಸಿದ ಕರ್ನಾಟಕ ಪೊಲೀಸ್ ಶ್ವಾನ!
ಕರ್ನಾಟಕ ಪೊಲೀಸ್ ಕ್ರೈಂ ಡಾಗ್ ತುಂಗಾ ಇದ್ದಕ್ಕಿದ್ದಂತೆಯೇ ಮಳೆಯನ್ನೂ ಲೆಕ್ಕಿಸದೆ 8 ಕಿಮೀಟರ್ ಓಡಿ ಮಹಿಳೆಯೊಬ್ಬಳ ಜೀವ ಉಳಿಸಿದ ರೋಚಕ ಘಟನೆ ನಡೆದಿದೆ.
ದಾವಣಗೆರೆ (ಜು.15): ಇವಳು ಅಖಾಡಕ್ಕೆ ಇಳಿದ್ರೆ ಅದೆಂಥದ್ದೇ ಕ್ರೈಮ್ ಕೇಸ್ ಆದ್ರೂ ಕಂಡು ಹಿಡಿಯದೆ ಬಿಡೋದೇ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಇವಳನ್ನ ಲೇಡಿ ಸಿಂಗಂ ಅಂಥಲೇ ಕರೆಯುತ್ತಾರೆ. ಆಕೆಯ ಹೆಸರೇ ತುಂಗಾ-2. ಇನ್ನೂ ಈ ಲೇಡಿ ಸಿಂಗಂ ಮೊನ್ನೆ ತಾನೆ ಒಂದು ಕೇಸ್ ಬೇಧಿಸಿದ್ದಾಳೆ. ಮಹಿಳೆಯೊಬ್ಬಳನ್ನ ರೇಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದ ಹಂತಕನನ್ನ ಆತನ ಮನೆಗೇ ಹೋಗಿ ಹಿಡಿದು ಹಾಕಿದ್ದಾಳೆ. ಅದು ಕೂಡ 8 ಕಿ.ಮೀಟರ್ ಓಡಿಕೊಂಡು ಹೋಗಿ ಆರೋಪಿಯನ್ನು ಹಿಡಿದು ಹಾಕಿದ್ದಾಳೆ ಎಂದ್ರೆ ನೀವು ನಂಬಲೇಬೇಕು. ಇನ್ನೂ ಈಕೆಯ ಹಿನ್ನಲೆ ಕೇಳಿಬಿಟ್ರೆ ನೀವೇ ಒಂದು ಕ್ಷಣ ದಂಗಾಗ್ತೀರ. ಹೀಗೆ ಕರ್ನಾಟಕ ಪೊಲೀಸ್ ಲೇಡಿ ಸಿಂಗಂ ಅಂತಲೇ ಫೇಮಸ್ ಆಗಿರುವ ಶ್ವಾನ ತುಂಗಾ ಹಂತಕನನ್ನು ಹಿಡಿದಿದ್ದು ಹೇಗೆ ಎಂಬು ಇಂಚಿಂಚೂ ಮಾಹಿತಿ ಇಲ್ಲಿದೆ.
ಅಂದ ಹಾಗೆ ಈ ಲೇಡಿ ಸಿಂಗಂ ಅಂತಾನೆ ಫೇಮಸ್ ಆಗಿರುವ ತುಂಗಾ-2 ಇರುವುದು ದಾವಣಗೆರೆ ಜಿಲ್ಲಾ ಪೊಲೀಸ್ ಡಾಗ್ ಸ್ಕ್ವಾಡ್ ನಲ್ಲಿ. ಈಕೆಯ ಕೈಯಿಂದ ತಪ್ಪಿಸಿಕೊಂಡ ಕೊಲೆಗಾರನೇ ಇಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕೊಲೆ, ದರೋಡೆ ನಡೆದ್ರೂ ತುಂಗಾನೇ ಆರೋಪಿಗಳ ಹೆಡೆಮುರಿ ಕಟ್ಟುತ್ತಾಳೆ. 70 ಕ್ಕೂ ಹೆಚ್ಚು ಕೊಲೆಗಳನ್ನು ಭೇದಿಸಿರುವ ತುಂಗಾ, 35 ಕ್ಕೂ ಹೆಚ್ಚು ದರೋಡೆ ಕೇಸ್ ಬೇಧಿಸಿದ್ದಾಳೆ. ಆಕೆಗೆ ಅನೇಕ ಪ್ರಶಸ್ತಿಗಳು ಲಭಿಸಿದೆ.
ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!
ಈಕೆ 19-08-2009ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದು, ಡಾಬರ್ ಮ್ಯಾನ್ ಜಾತಿಗೆ ಸೇರಿದ್ದಾಳೆ. 12 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದಾಳೆ. ಈಕೆ ಪತ್ತೆ ಹಚ್ಚಿದ ಕೇಸ್ ನಲ್ಲಿ 2 ಗಲ್ಲು ಮತ್ತು 4 ಜೀವಾವಧಿ ಶಿಕ್ಷೆ ಆಗಿರುವ ಪ್ರಕರಣ ಕೂಡ ಇದೆ. ಈಕೆ ಸದ್ಯ ದಾವಣೆಗೆರೆಯಲ್ಲಿ ಪೋಸ್ಟಿಂಗ್ ನಲ್ಲಿದ್ದರೂ ಈಕೆಯ ಮೂಲ ಬೆಂಗಳೂರು. 11 ತಿಂಗಳು ಟ್ರೈನಿಂಗ್ ಕೂಡ ಬೆಂಗಳೂರಿನಲ್ಲೇ ಆಗಿದೆ. ಈ ತುಂಬಾ ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದೆ.
ಆಕೆಯ ಲೇಟೆಸ್ಟ್ ಪ್ರಕರಣ ಭೇಧಿಸಿರುವ ಕಥೆಯೇ ರೋಚಕವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೇಬೆನ್ನೂರು ಸಮೀಪ ಗಾರೆ ಕೆಲಸಗಾರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜುಲೈ 15 ರಾತ್ರಿ ನಡೆದಿತ್ತು. ಘಟನೆ ನಡೆದ 6 ಗಂಟೆಗಳಲ್ಲೇ ಪೊಲೀಸ್ ಶ್ವಾನ ತುಂಗಾ ಸಹಾಯದಿಂದ ಆರೋಪಿಯನ್ನು ಹಡೆಮುರಿ ಕಟ್ಟಲಾಗಿದೆ.
ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!
ಮಚ್ಚಿನಿಂದ ನಡೆದಿತ್ತು ಬರ್ಬರ ಹತ್ಯೆ: ಗ್ರಾಮದ ಸಂತೋಷ (36) ಕೊಲೆಯಾದ ಗಾರೆ ಕೆಲಸಗಾರ. ಚನ್ನಾಪುರದ ಪಂಚರ್ ಹಾಕುವ ಕೆಲಸಗಾರ ರಂಗಸ್ವಾಮಿ (32) ಹಂತಕನಾಗಿದ್ದಾನೆ. ಗ್ರಾಮದ ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಹಿಂದುಸ್ಥಾನ್ ಪೆಟ್ರೋಲಿಯಂ ಪಂಪ್ ಎದುರಿನ ರಸ್ತೆಯಲ್ಲಿ ಸಂತೋಷ್‌ನನ್ನು ಮಚ್ಚಿನಿಂದ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ವಿಷಯ ಸಂತೇಬೆನ್ನೂರು ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು.
ತುಂಗಾ-2 ಎಂಟ್ರಿ: ಕೊಲೆಗೀಡಾದ ಸಂತೋಷ್ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಕೋಪಗೊಂಡು ಹತ್ಯೆ ಮಾಡಿದ್ದಾಗಿ ಆರೋಪಿ ರಂಗಸ್ವಾಮಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸಂತೋಷನನ್ನು ಕೊಲೆ ಮಾಡಿದ ನಂತರ ತನ್ನ ಹೆಂಡತಿಯ ಕೊಲೆಗೂ ರಂಗಸ್ವಾಮಿ ಸಂಚು ರೂಪಿಸಿದ್ದು, ಹೀಗಾಗಿ ರಂಗಸ್ವಾಮಿ, ಸಂತೋಷನ ಕೊಲೆ ಬಳಿಕ ತನ್ನ ಹೆಂಡತಿಯನ್ನು ದೊಣ್ಣೆಯಿಂದ ಹೊಡೆದು ಕೊಲ್ಲಬೇಕು ಅನ್ನುವಷ್ಟರಲ್ಲಿ ತುಂಗಾ ಅಲ್ಲಿಗೆ ತಲುಪಿ ಆ ಮಹಿಳೆಯನ್ನು ಕಾಪಾಡಿದೆ.
ಕೊಲೆ ಪ್ರಕರಣ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ, ಚನ್ನಗಿರಿ ಡಿವೈಎಸ್‌ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ತಂಡವು ಅಪರಾಧ ಪತ್ತೆ ಶ್ವಾನ (ಕ್ರೈಂ ಡಾಗ್) ತುಂಗಾ-2 ಜೊತೆಗೆ ಶ್ವಾನದಳ ಹಾಗೂ ಸುಕೋ ತಂಡದೊಂದಿಗೆ ಲಭ್ಯವಿರುವ ಸಾಕ್ಷ್ಯಾಧಾರ ಕಲೆ ಹಾಕಲು ಶುರುಮಾಡಿತು.
ಕೊಲೆಗಾರನಿಗಾಗಿ ಮಳೆಯಲ್ಲೇ 8 ಕಿಮೀಟರ್ ಓಡಿದ ತುಂಗಾ: ಆಗ ಕ್ರೈಂ ಡಾಗ್ ತುಂಗಾ-2 ಇದ್ದಕ್ಕಿದ್ದಂತೆಯೇ ಮಳೆಯನ್ನೂ ಲೆಕ್ಕಿಸದೆ 8 ಕಿಮೀಟರ್ ಓಡಿ ನೇರವಾಗಿ ರಂಗಸ್ವಾಮಿ ಮನೆಗೆ ಪ್ರವೇಶಿಸಿದೆ. ಪೊಲೀಸರು ಮನೆಗೆ ಬಂದಾಗ ರಂಗಸ್ವಾಮಿ ಹೆಂಡತಿಯನ್ನು ಥಳಿಸುತ್ತಿರುವುದು ಬೆಳಕಿಗೆ ಬಂದಿದೆ. ಪುಣ್ಯಕ್ಕೆ ಆಲೆಯ ಜೀವ ಈ ತುಂಗಾಳಿಂದ ಉಳಿಸಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಯಾದ ಚನ್ನಾಪುರ ಗ್ರಾಮದ ಪಂಚರ್ ಕೆಲಸಗಾರ ರಂಗಸ್ವಾಮಿಯನ್ನು ಕೃತ್ಯಕ್ಕೆ ಬಳಸಿದ ಮಚ್ಚಿನೊಂದಿಗೆ ಪೊಲೀಸರು ಬಂಧಿಸಿದ್ದು, ತುಂಗಾಳ ಸಾಧನೆಗೆ ಪೊಲೀಸ್ ಇಲಾಖೆ ಮತ್ತು ಇಡೀ ಊರೇ ತಲೆಬಾಗಿದೆ. ಶ್ವಾನ ತುಂಗಾ ಜೊತೆಗೆ ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದರಿಂದ ಇನ್ನೊಂದು ಕೊಲೆ ಘಟಿಸೋದು ತಡೆದಂತಾಗಿದೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.