ರಾಂಚಿ [ಮಾ.03] : ಉನ್ನತ ಹುದ್ದೆಯಲ್ಲಿರುವವ ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡೋದು ಇಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ರೂ ಸರ್ಕಾರಿ ಆಸ್ಪತ್ರೆ ಮಾತ್ರ ಬೇಡವಾಗಿರುತ್ತೆ. ಆದರೆ ಇಲ್ಲೋರ್ವ ಜಿಲ್ಲಾಧಿಕಾರಿ ಇದಕ್ಕೆ ತದ್ವಿರುದ್ಧವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. 

ಜಾರ್ಖಂಡ್ ಗೊಡ್ಡಾ ಪ್ರದೇಶದ ಮಹಿಳಾ ಐಎಸ್ ಅಧಿಕಾರಿ  ಕಿರಣ್ ಕುಮಾರ್ ಪಾಸಿ ಇಲ್ಲಿನ ಸರ್ದಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ, ನೀಡಿದ್ದಾರೆ. ಅಲ್ಲದೇ ಅಧಿಕಾರಿಗೆ ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!

ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಇಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದು, ಇದರಿಂದ ಸಾಮಾನ್ಯರಲ್ಲಿಯೂ ಸರ್ಕಾರಿ ವ್ಯವಸ್ಥೆ ಬಗ್ಗೆ ವಿಶ್ವಾಸ ಹೆಚ್ಚಲು ಸಹಕಾರಿಯಾಗಿದೆ  ಎಂದು ಆಸ್ಪತ್ರೆಯ ವೈದ್ಯರಾದ ಎಸ್.ಪಿ ಮಿಶ್ರಾ ಹೇಳಿದ್ದಾರೆ. 

ದರ್ಜಿಯ ಮಗ ಐಎಎಸ್ ಆದ ಕತೆ: ನಿರೀಶ್ ಹೇಳ್ತಾರೆ ದಿಗ್ವಿಜಯದ ರಹಸ್ಯ!...

ಇನ್ನು ಕಿರಣ್ ಅವರನ್ನು ಹಲವು ಅಧಿಕಾರಿಗಳು ಆಸ್ಪತ್ರೆಗೆ ಬಂದು ಭೇಟಿ ಮಾಡಿ ತಾಯಿ ಮಗುವಿನ ಯೋಗ ಕ್ಷೇಮ ವಿಚಾರಿಸಿದ್ದಲ್ಲೇ ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. 

ಇನ್ನು IAS ಅಧಿಕಾರಿ ಕಿರಣ್ ಕುಮಾರ್ ಅವರ ಮಗುವಿನೊಂದಿಗೆ ಇರುವ ಫೊಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.