Asianet Suvarna News Asianet Suvarna News

Woman Got Penalty: ಬೀದಿ ನಾಯಿಗೆ ಆಹಾರ ನೀಡಿದ ಮಹಿಳೆಗೆ 8 ಲಕ್ಷ ದಂಡ

  • ಬೀದಿ ನಾಯಿಗೆ ಆಹಾರ ನೀಡಿದ ಮಹಿಳೆಗೆ  8 ಲಕ್ಷ ದಂಡ
  • ದಂಡ ವಿಧಿಸಿದ ಮುಂಬೈನ ವಸತಿ ಸಮುಚ್ಚಯ 
Woman Fined 8 Lakh For Feeding Stray Dogs in Mumbai
Author
Bangalore, First Published Dec 17, 2021, 6:54 PM IST

ಥಾಣೆ: ನವಿ ಮುಂಬೈನ ವಸತಿ ಸಮುಚ್ಚಯ (housing complex) ವೊಂದರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು, ವಸತಿ ಸೊಸೈಟಿಯ ಆವರಣದೊಳಗೆ ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ವಸತಿ ಸಮುಚ್ಚಯದ ಆಡಳಿತ ಮಂಡಳಿಯವರು ಸುಮಾರು ₹ 8 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆ ವಾಸಿಸುತ್ತಿರುವ ಎನ್‌ಆರ್‌ಐ ಕಾಂಪ್ಲೆಕ್ಸ್‌ ( NRI Complex) ವಸತಿ ಸಮುಚ್ಚಯವು 40 ಕ್ಕೂ ಹೆಚ್ಚು ಕಟ್ಟಡಗಳನ್ನು ಒಳಗೊಂಡಿದೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅಂಶು ಸಿಂಗ್(Anshu Singh)ಎಂಬ ಮಹಿಳೆ ಸಂಕೀರ್ಣದೊಳಗೆ ಬೀದಿನಾಯಿಗಳಿಗೆ ಆಹಾರ ನೀಡುವವರಿಗೆ ಹೌಸಿಂಗ್ ಸೊಸೈಟಿ ದಿನಕ್ಕೆ  5,000 ದಂಡ ವಿಧಿಸುತ್ತದೆ. ಇದನ್ನು ಕಸ ಹಾಕುವ ಶುಲ್ಕವಾಗಿ ವಿಧಿಸಲಾಗಿದೆ. ಇದುವರೆಗೆ ನನಗೆ ವಿಧಿಸಲಾದ ದಂಡದ ಮೊತ್ತ  8 ಲಕ್ಷಕ್ಕಿಂತ ಹೆಚ್ಚಿದೆ.  ಆವರಣದೊಳಗೆ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ದಂಡ ವಿಧಿಸಲು ಸೊಸೈಟಿಯ ವ್ಯವಸ್ಥಾಪಕ ಸಮಿತಿಯು ನಿರ್ಧಾರ ಕೈಗೊಂಡಿದೆ. ಇದು ಜುಲೈ 2021 ರಿಂದ ಆರಂಭವಾಗಿದೆ ಎಂದು ಅವರು ಹೇಳಿದರು. ಹಲವಾರು ಬೀದಿ ನಾಯಿಗಳು ಈ ಸಂಕೀರ್ಣದ ಒಳಗೆ ತಿರುಗುತ್ತಿರುವುದು ಮಾಮೂಲಿಯಾಗಿದೆ. 

Viral video: ನಾಯಿಯನ್ನು ಮೊದಲ ಬಾರಿ ನೋಡಿದ ಮಗುವಿನ ಕ್ಯೂಟ್‌ ರಿಯಾಕ್ಷನ್‌ ನೋಡಿ

ನನ್ನಂತೆಯೇ ಇಲ್ಲಿನ ಇನ್ನೋರ್ವ ನಿವಾಸಿಗೆ ವಿಧಿಸಲಾದ ಸಂಚಿತ ದಂಡದ ಮೊತ್ತ ಆರು ಲಕ್ಷ ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ನಿವಾಸಿ ಲೀಲಾ ವರ್ಮಾ (Leela Varma) ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ಸಮಿತಿ ದಂಡವನ್ನು ಲೆಕ್ಕಾಚಾರ ಮಾಡುತ್ತದೆ ಎಂದು ಹೇಳಿದರು.

ಆದರೆ, ವಸತಿ ಸಮುಚ್ಚಯದ ಕಾರ್ಯದರ್ಶಿ ವಿನಿತಾ ಶ್ರೀನಂದನ್ (Vinita Srinandan) ಮಾತನಾಡಿ ಮಕ್ಕಳು ಟ್ಯೂಷನ್‌ಗೆ ಹೋಗುವಾಗ ಬೀದಿ ನಾಯಿಗಳು ಅವರನ್ನು ಓಡಿಸುತ್ತವೆ. ಇದರಿಂದ ಇಲ್ಲಿ ಸಣ್ಣ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಬೀದಿ ನಾಯಿಗಳ ಭಯದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು  ಮಾಧ್ಯಮಗಳಿಗೆ ತಿಳಿಸಿದರು.

Feeding black Dog : ಸಮಸ್ಯೆಗಳಿಂದ ದೂರವಾಗಲು ನಾಯಿಗೆ ಆಹಾರ ನೀಡಿ

ಅಲ್ಲದೇ ನಾಯಿಗಳು ಪಾರ್ಕಿಂಗ್‌ ಸ್ಥಳ  ಮತ್ತು ಇತರ ಪ್ರದೇಶಗಳಲ್ಲಿ ಕೊಳಕು ಮಾಡುತ್ತವೆ. ನಾಯಿಗಳಿಂದಾಗಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ. ಜೊತೆಗೆ ನಾಯಿಗಳು ರಾತ್ರಿಯಿಡೀ ಕೂಗುವುದರಿಂದ ನಿವಾಸಿಗಳು ಸರಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಹೌಸಿಂಗ್ ಸೊಸೈಟಿಯು ನಾಯಿಗಳಿಗಾಗಿಯೇ ಒಂದು ಆವರಣವನ್ನು ನಿರ್ಮಿಸಿದೆ. ಆದರೆ ಇಲ್ಲಿನ ಕೆಲವು ಸದಸ್ಯರು ಈ ಪ್ರಾಣಿಗಳಿಗೆ ತೆರೆದ ಸ್ಥಳದಲ್ಲಿ ಆಹಾರವನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬೀದಿ ನಾಯಿಗಳಿಗೆ ಆಹಾರ ಹಾಕುವುದು ಉತ್ತಮ ಕೆಲಸ ಆದರೆ, ಹಸಿದ ನಾಯಿಗಳಿಗೆ ಯಾರು ಆಹಾರ ಹಾಕದೇ ಇದ್ದಾಗ ಅವುಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಎಂದು ಇದೇ ಕಟ್ಟಡದಲ್ಲಿರುವ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಹಾಗಾದರೆ ಬೀದಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬಾಹಿರವೇ ಎಂಬ ಪ್ರಶ್ನೆ ಎದುರಾಗುತ್ತದೆ. ಇನ್ನು 2011ರಲ್ಲಿ ದೆಹಲಿ ಹೈಕೋರ್ಟ್ ಬೀದಿ ನಾಯಿಗಳಿಗೆ ಆಹಾರ ನೀಡಲು ಅನೇಕ ನಿಯಮಗಳನ್ನು ವಿಧಿಸಿತ್ತು.

ಈ ನಿಯಮಗಳ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲದೇ ಇದ್ದರೆ ಆಹಾರವನ್ನು ಹಾಕಬಹುದು. ಸಾರ್ವಜನಿಕ ಬೀದಿಗಳು, ಪುಟ್​ಪಾತ್, ಪಾದಚಾರಿ ಮಾರ್ಗಗಳು, ಇನ್ನು, ಅಪಾರ್ಟ್​ಮೆಂಟ್​ನ ಪ್ರವೇಶ ದ್ವಾರಗಳ ಹೊರಗಿನ ಸಾಮಾನ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನಾಯಿ ಪ್ರಿಯರು ನೀಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Follow Us:
Download App:
  • android
  • ios