ಮಹಿಳೆಯೊಬ್ಬರು ತೀವ್ರ ಹೃದಯಾಘಾತದಿಂದ ನರಳಾಡುತ್ತಿದ್ದರೆ, ಕರ್ತವ್ಯದಲ್ಲಿದ್ದ ವೈದ್ಯ ಇನ್‌‌ಸ್ಟಾಗ್ರಾಂ ರೀಲ್ಸ್ ನೋಡುತ್ತಾ ಕುಳಿತ್ತಿದ್ದಾನೆ. ಇದರ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಲಖನೌ(ಜ.29) ವೈದ್ಯರ ಸೇವೆಯನ್ನು ಅತ್ಯಂತ ಗೌರವದಿಂದ ಕಾಣುವ ದೇಶ ಭಾರತ. ಪ್ರಾಣ ಉಳಿಸುವ ವೈದ್ಯರನ್ನು ನಾರಾಯಣನಿಗೆ ಹೋಲಿಸುತ್ತಾರೆ. ಆದರೆ ಕೆಲವು ಬಾರಿ ವೈದ್ಯರಿಗೆ ಅಪಮಾನ ಎಂಬಂತೆ ಹಲವು ಘಟನೆಗಳು ನಡದಿದೆ. ಇದೀಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಮಹಿಳೆಯೊಬ್ಬರಿಗೆ ತೀವ್ರ ಹೃದಯಾಘಾತವಾಗಿದೆ. ಕರ್ತವ್ಯದಲ್ಲಿರುವ ವೈದ್ಯ ಕುರ್ಚಿ ಮೇಲೆ ಕುಳಿತು ಇನ್‌ಸ್ಟಾಗ್ರಾಂ ರೀಲ್ಸ್ ನೋಡುತ್ತಾ ಕುಳಿತಿದ್ದಾನೆ. ಎದ್ದು ಬಂದು ಮಹಿಳೆಗೆ ಚಿಕಿತ್ಸೆ ನೀಡುವ ಗೋಜಿಗೂ ಹೋಗಿಲ್ಲ. ಇದರ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಉತ್ತರ ಪ್ರದೇಶ ಮೈನ್‌ಪುರಿಯಲ್ಲಿ ನಡೆದಿದೆ.

ಮಹಾರಾಜ ತೇಜ್ ಜಿಲ್ಲಾ ಆಸ್ಪತ್ರೆಯ ವೈದ್ಯನ ನಿರ್ಲಕ್ಷ್ಯದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. 60 ವರ್ಷದ ಮಹಿಳೆ ಪ್ರವೇಶ್ ಕುಮಾರಿ ತೀವ್ರ ಎದೆನೋವಿನಿಂದ ಬಳಲಿದ್ದಾರೆ. ಮನೆಯಲ್ಲಿದ್ದ ಪ್ರವೇಶ್ ಕುಮಾರಿ ಎದೆನೋವಿನಿಂದ ಬಳಲಿದ ಕಾರಣ ಆಕೆಯ ಪುತ್ರ ಗುರುಶರಣ್ ಸಿಂಗ್ ವಾಹನದ ಮೂಲಕ ತಾಯಿಯನ್ನು ಆಸ್ಪತ್ರೆ ಕರೆ ತಂದಿದ್ದಾನೆ. ಮಹಾರಾಜ್ ತೇಜ್ ಜಿಲ್ಲಾ ಆಸ್ಪತ್ರೆಗೆ ವೇಗವಾಗಿ ಕರೆ ತರಲಾಗಿದೆ.

2 ವರ್ಷದ ಮಗುವಿನ ಮೇಲೆ ಬಿದ್ದ ಕಾಲೇಜು ವಿದ್ಯಾರ್ಥಿ, ನಿರ್ಲಕ್ಷ್ಯಕ್ಕೆ ಪುಟ್ಟ ಕಂದ ಬಲಿ!

ಈ ವೇಳೆ ವೈದ್ಯ ಡಾ. ಆದರ್ಶನ್ ಸೆಂಗಾರ್ ಕರ್ತವ್ಯದಲ್ಲಿದ್ದರು. ಆದರ್ಶ್ ಸೆಂಗಾರ್ ತಮ್ಮ ಕುರ್ಚಿಯಲ್ಲಿ ಕುಳಿತಿದ್ದರು. ಗಾಬರಿಯಲ್ಲಿದ್ದ ಗುರುಶರಣ್ ವೈದ್ಯರ ಬಳಿ ಬಂದು ತಕ್ಷಣ ತುರ್ತು ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾನೆ. ತಾಯಿಯನ್ನು ವೈದ್ಯರ ಎದುರಿಗಿದ್ದ ಬೆಡ್ ಮೇಲೆ ಮಲಗಿಸಲಾಗಿದೆ. ಆದರೆ ವೈದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ದೂರದಲ್ಲಿದ್ದ ನರ್ಸ್ ಕರೆದು ನೋಡುವಂತೆ ಸೂಚಿದ್ದಾರೆ. ಬಳಿಕ ವೈದ್ಯ ಮೊಬೈಲ್ ಮೂಲಕ ರೀಲ್ಸ್ ನೋಡುತ್ತಾ ಕುಳಿತಿದ್ದಾರೆ ಎಂದು ಪುತ್ರ ಗುರುಶರಣ್ ಸಿಂಗ್ ಆರೋಪಿಸಿದ್ದಾರೆ.

ಇಷ್ಟೊತ್ತಿಗೆ ನನ್ನ ತಾಯಿಯ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹೃದಯಾಘಾತದಿಂದ ನರಳಾಡುತ್ತಿದ್ದ ತಾಯಿಗೆ ವೈದ್ಯರಿದ್ದರು ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಮತ್ತೆ ವೈದ್ಯರಲ್ಲಿ ಮನವಿ ಮಾಡಿದೆ. ಬಳಿಕ ಏರು ಧ್ವನಿಯಲ್ಲಿ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೆ. ವೈದ್ಯ ಸೆಂಗಾರ್ ಆಕ್ರೋಶದಲ್ಲಿ ಮೇಲೆದ್ದು ತಾಯಿ ಮಲಗಿಸಿದ್ದ ಬೆಡ್ ಬಳಿ ಬಂದಿದ್ದಾರೆ. ಬಳಿಕ ತಾಯಿಗೆ ಚಿಕಿತ್ಸೆ ನೀಡುವ ಬದಲು ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಾಯಿ ಆರೋಗ್ಯದ ಕಾಳಜಿಯಿಂದ ವೈದ್ಯರ ಬಳಿ ಮನವಿ ಮಾಡಿಕೊಂಡೆ. ಅಷ್ಟೊತ್ತಿಗೆ ತಾಯಿ ಮೃತಪಟ್ಟಿದ್ದರು. ವೈದ್ಯರು ಬಂದು ಪರಿಶೀಲಿಸಿದಾಗ ತಾಯಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. 

Scroll to load tweet…

ಸೂಕ್ತ ಚಿಕಿತ್ಸೆ ತಕ್ಕ ಸಮಯದಲ್ಲಿ ಸಿಕ್ಕಿದ್ದರೆ ತಾಯಿ ಬದುಕುಳಿಯುವ ಸಾಧ್ಯತೆ ಇದೆ. ಆದರೆ ತಾಯಿಗೆ ಚಿಕಿತ್ಸೆ ಸಿಗಲಿಲ್ಲ. ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗುರುಶರಣ್ ಸಿಂಗ್ ಆರೋಪಿಸಿದ್ದಾರೆ. ತಾಯಿ ಮೃತಪಟ್ಟ ಬೆನ್ನಲ್ಲೇ ಗುರುಶರಣ್ ಸಿಂಗ್ ಕುಟುಂಬಸ್ಥರು ಆಪ್ತರು ಆಸ್ಪತ್ರೆಗೆ ಆಗಮಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಭಾರಿ ಗದ್ದಲ, ಪ್ರತಿಭಟನೆ ನಡೆದಿದೆ. ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಲುಪಿದೆ. ಪ್ರತಿಭಟನೆ ಕಾವು ಪಡೆದುಕೊಂಡಿದೆ. ಈ ವೇಳೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದಾರೆ.

ಪ್ರತಿಭಟನಕಾರರನ್ನು ನಿಯಂತ್ರಿಸಿದ್ದಾರೆ. ಮೆಡಿಕಲ್ ಸೂಪರಿಡೆಂಟ್ ಮದನ್ ಲಾಲ್ ಸ್ಥಳಕ್ಕೆ ಆಗಮಿಸಿದ್ದಾರೆ. ಗುರುಶರಣ್ ಸಿಂಗ್ ಆರೋಪ ಆಲಿಸಿದ ಮದನ್ ಲಾಲ್ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಯುವಕನ ಆರೋಪದಂತೆ ವೈದ್ಯರು ನಿರ್ಲಕ್ಷ್ಯ ವಹಿಸಿರುವುದು ಪತ್ತೆಯಾಗಿದೆ. ಈ ಕುರಿತು ಗುರುಶರಣ್ ಹಾಗೂ ಕುಟುಂಬಸ್ಥರಿಗೆ ವೈದ್ಯರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ವಶಪಡಿಸಿ ತನಿಖೆ ಆರಂಭಿಸಿದ್ದಾರೆ. 

ಗರ್ಭಿಣಿ ಅಶ್ವಿನಿ ಸಾವು; ಮೃತ್ಯು ಕೂಪವಾದ ಸರ್ಕಾರಿ ಆಸ್ಪತ್ರೆಗಳು!