ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಮಿನಿ ಗೂಡ್ಸ್ ಗಾಡಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಮಿನಿ ಗೂಡ್ಸ್ ಗಾಡಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆಯ ಅಪ್ರಾಪ್ತ ಮಗಳು ಹಾಗೂ ಮತ್ತೊಬ್ಬ ಮಹಿಳೆ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಹೈದರಾಬಾದ್‌ನ ಬಾಲಪುರ್ ಪೊಲೀಸ್ ಠಾಣೆ (Balapur police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ಅಪಘಾತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಾಹನ ಗುದ್ದಿದ್ದ ರಭಸಕ್ಕೆ ಮಹಿಳೆ ಮೀಟರ್‌ಗಳಷ್ಟು ಮೇಲೆ ಹಾರಿ ನಂತರ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ನಗರದಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನ ರಾಜೇಂದ್ರನಗರದಲ್ಲಿ(Rajendranagar) ಆಟೋ ರಿಕ್ಷಾ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ 32 ವರ್ಷದ ವ್ಯಕ್ತಿಯೊಬ್ಬರು ಬೈಕ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಈ ವಿಡಿಯೋ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಪ್ರಾಣಕ್ಕೂ ಸುರಕ್ಷಿತೆ ಇಲ್ಲವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬ್ರೇಕ್ ಡೌನ್ ಆಗಿ ಕಾರು ಅಪಘಾತ, ಸಿ.ಟಿ.ರವಿ ಕ್ಯಾಲೆಂಡರ್ ಜತೆ ಮದ್ಯದ ಬಾಟಲ್, ಲಾಂಗ್ ಪತ್ತೆ!
ಮತ್ತೊಂದು ಪ್ರಕರಣದಲ್ಲಿ ಶಂಶಾಬಾದ್‌ನಲ್ಲಿ (Shamshabad) ನಡೆದ ಅಪಘಾತದಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಂಡ್ಲಗುಡ್ಡದ ನಿವಾಸಿಯಾದ ಶ್ರೀಕಾಂತ್ ರೆಡ್ಡಿ (Srikanth Reddy) ಎಂಬುವವರು ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಅಪರಿಚಿತ ವಾಹನವೊಂದು ಇವರಿಗೆ ಡಿಕ್ಕಿಯಾಗಿ ಪರಾರಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಇವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಪ್ರಪಾತಕ್ಕೆ ಬಿದ್ದ ಶಬರಿಮಲೆ ಯಾತ್ರಿಗಳ ಬಸ್, 68 ಭಕ್ತರ ಪೈಕಿ ಹಲವರ ಸ್ಥಿತಿ ಗಂಭೀರ!
ಪವಿತ್ರ ಕ್ಷೇತ್ರ ಶಬರಿಮಲೆಗೆ ತೆರಳಿ ವಾಪಾಸ್ ಆಗುತ್ತಿದ್ದ ಯಾತ್ರಾರ್ಥಿಕರ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಕೇರಳದ ಪಣಂತಿಟ್ಟ ಜಿಲ್ಲೆಯ ನೀಲಕ್ಕಲ್ ಬಳಿ ಸಂಭವಿಸಿದೆ. 7 ಮಕ್ಕಳು ಸೇರಿದಂತೆ 68 ಶಬರಿಮಲೆ ಯಾತ್ರಾರ್ಥಿಕರನ್ನು ಹೊತ್ತ ಬಸ್ ತಮಿಳುನಾಡಿನಿಂದ ಶಬರಿಮಲೆ ಯಾತ್ರೆಗೆ ತೆರಳಿತ್ತು. ಇಂದು(ಮಾ.28) ಮಧ್ಯಾಹ್ನ 1.15ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪ್ರಪಾತಕ್ಕೆ ಬಿದ್ದಿದೆ. ಇದರ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಹಲವರ ಆರೋಗ್ಯ ಸ್ಥಿತಿ ಚಿತಾಂಕಜನಕವಾಗಿದೆ.
68 ಯಾತ್ರಾರ್ಥಿಕರ ಪೈಕಿ 62 ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸುವಲ್ಲಿ ವಿಳಂಭವಾಗಿದೆ. ಪಣಂತಿಟ್ಟ ಹಾಗೂ ಎರುಮಲೆ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಳುಗಳನ್ನು ದಾಖಲಿಸಲಾಗಿದೆ.
Saudi Arabia: ಮೆಕ್ಕಾಗೆ ಹೋಗುತ್ತಿದ್ದ ಬಸ್ ಭೀಕರ ಅಪಘಾತ: 20 ಯಾತ್ರಿಕರು ಬಲಿ, 29 ಮಂದಿಗೆ ಗಂಭೀರ ಗಾಯ
ತೀವ್ರವಾಗಿ ಗಾಯಗೊಂಡಿರುವ 20 ಮಂದಿಯನ್ನು ಕೋಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ದಳಕ್ಕೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪವಿತ್ರ ಕ್ಷೇತ್ರ ಸಂದರ್ಶಿಸಿ ಮರಳಿ ಬರುವಾಗ ಈ ಘಟನೆ ಸಂಭವಿಸಿದೆ. ಮಾರ್ಚ್ 26 ರಂದು ಶಬರಿಮಲೆ ಕ್ಷೇತ್ರದ ಬಾಗಿಲು ಭಕ್ತರಿಗೆ ತೆರೆದಿದೆ. ಉತ್ತರಂ ಉತ್ಸವ ಹಿನ್ನಲೆಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ.
