ಇಲ್ಲೊಬ್ಬರು ಮಹಿಳೆ ಅಪಾಯವನ್ನು ಲೆಕ್ಕಿಸದೇ ಮನೆಯ ಮೂರನೇ ಮಹಡಿಯಲ್ಲಿರುವ ಕಿಟಕಿಯನ್ನು ಕಿಟಕಿ ಪಕ್ಕ ಇರುವ ಕಿರಿದಾದ ಜಾಗದಲ್ಲಿ ನಿಂತುಕೊಂಡು ಸ್ವಚ್ಛಗೊಳಿಸುತ್ತಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಪಾವಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲು ಮನೆ ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಹಬ್ಬ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಪಾತ್ರ ಪಗಡಿಗಳಿಂದ ಪ್ರತಿಯೊಂದನ್ನು ಸ್ವಚ್ಚಗೊಳಿಸಲು ಮನೆ ಮಂದಿ ಮುಂದಾಗುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಅಪಾಯವನ್ನು ಲೆಕ್ಕಿಸದೇ ಮನೆಯ ಮೂರನೇ ಮಹಡಿಯಲ್ಲಿರುವ ಕಿಟಕಿಯನ್ನು ಕಿಟಕಿ ಪಕ್ಕ ಇರುವ ಕಿರಿದಾದ ಜಾಗದಲ್ಲಿ ನಿಂತುಕೊಂಡು ಸ್ವಚ್ಛಗೊಳಿಸುತ್ತಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಟಿ ಮಂದಿ ತಮ್ಮ ಮನೆಯ ಒಳಗೆ ಹಬ್ಬಕ್ಕೂ ಮೊದಲು ಸ್ವಚ್ಛಗೊಳಿಸುತ್ತಾರೆ. ಆದರೆ ಮಲೆನಾಡು(Malenadu) ಕರಾವಳಿಯ (Costal village) ಹಳ್ಳಿಗಳ ಕಡೆಯಾದರೆ ಮಳೆಗಾಲವಿಡೀ ಸುರಿದ ಮಳೆಗೆ ಹುಲ್ಲು(Grass) ಬೆಳೆದು ನಿಂತಿರುವ ದೊಡ್ಡದಾದ ಅಂಗಳವನ್ನು ಕೆತ್ತಿ ಸ್ವಚ್ಛಗೊಳಿಸುವುದರಿಂದ ಆರಂಭಿಸಿ ಮನೆಯ ಪ್ರತಿಯೊಂದು ಮೂಲೆ ಮೂಲೆಗಳು ಮಂಚದ ಕೆಳಭಾಗ, ಮೇಲಿರುವ ಸಜ್ಜೆಯ ಧೂಳು ಹೊಡೆದು ಸ್ವಚ್ಛಗೊಳಿಸಬೇಕು. ಅಡುಗೆ ಮನೆಯಲ್ಲಿರುವ ಎಲ್ಲಾ ಪಾತ್ರ ಸಮಾನು ಡಬ್ಬಿಗಳನ್ನು, ಚಾಪೆ ಬೆಡ್‌ಶಿಟ್ ಹೀಗೆ ಪ್ರತಿಯೊಂದನ್ನು ಸ್ವಚ್ಛಗೊಳಿಸಿ ಲಕ್ಷ್ಮಿ ಬರುವ ಬೆಳಕಿನ ಹಬ್ಬಕ್ಕೆ ಮನೆಯನ್ನು ಮನೆ ಮಂದಿ ಸ್ವಚ್ಛಗೊಳಿಸುತ್ತಾರೆ. ಈ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮನೆ ಹೆಂಗಳೆಯರ ಸೊಂಟ ಅರ್ಧ ಬಿದ್ದಿರುತ್ತದೆ. 

Scroll to load tweet…

ಲಕ್ಷ್ಮಿ ಪೂಜೆ ವೇಳೆ ಈ ಟ್ರಿಕ್ಸ್ ಬಳಸಿದ್ರೆ ಹಣದ ಹೊಳೆ ಹರಿಯುತ್ತೆ!

ಅದೇ ರೀತಿ ಇಲ್ಲೊಬ್ಬಳು ಹುಡುಗಿ ಮನೆಯ ಕಿಟಕಿಯನ್ನು ಕಿಟಕಿ(Window) ಪಕ್ಕದ ಕಿರಿದಾದ ಜಾಗದಲ್ಲಿ ನಿಂತು ಬಟ್ಟೆಯಿಂದ ಉಜ್ಜಿ ಉಜ್ಜಿ ಸ್ವಚ್ಛಗೊಳಿಸುತ್ತಿದ್ದಾಳೆ (Cleaning). ಸ್ವಲ್ಪ ಆಯತಪ್ಪಿದರೂ ಆಕೆ ಮೂರನೇ ಮಹಡಿಯಿಂದ ರಸ್ತೆಗೆ ಬಿದ್ದು ಅಪಾಯಕ್ಕೆ ಒಳಗಾಗುವುದು ಪಕ್ಕಾ. ಆದರೂ ತಲೆಕೆಡಿಸಿಕೊಳ್ಳದ ಆಕೆ ಧೈರ್ಯವಾಗಿ ಆ ಕಿರಿದಾದ ಜಾಗದಲ್ಲಿ ನಿಂತು ಕಿಟಕಿಯ ಹೊರಭಾಗವನ್ನು ಸ್ವಚ್ಛಗೊಳಿಸುತ್ತಿದ್ದಾಳೆ.

14 ಸೆಕೆಂಡ್‌ಗಳ ಈ ವಿಡಿಯೋವನ್ನು ಸಾಗರ್ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್‌ (Twitter Post) ಮಾಡಿದ್ದು ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇವಳ ಮನೆಗೆ ಲಕ್ಷ್ಮಿ ಬಂದಿಲ್ಲ ಎಂದಾದರೆ ಬೇರೆ ಇನ್ಯಾರ ಮನೆಗೂ ಲಕ್ಷ್ಮಿ ಬರಲು ಸಾಧ್ಯ ಇಲ್ಲ ಎಂದು ಈ ವಿಡಿಯೋ ಪೋಸ್ಟ್ ಮಾಡಿ ಅವರು ಬರೆದುಕೊಂಡಿದ್ದಾರೆ. 

ದೀಪಾವಳಿಯಲ್ಲಿ ಲಕ್ಷ್ಮಿ ಜೊತೆ ಏಕೆ ನಡೆಯಲ್ಲ ವಿಷ್ಣುವಿಗೆ ಪೂಜೆ?

ಇನ್ನು ಈ ವಿಡಿಯೋ ನೋಡಿದ ಅನೇಕರು ವಿವಿಧ ಕಾಮೆಂಟ್ ಮಾಡಿದ್ದಾರೆ. ನನಗೆ ಇಲ್ಲಿ ಲಕ್ಷ್ಮಿ ಕಾಣಿಸುತ್ತಿಲ್ಲ. ಯಮರಾಜ ಕಾಣಿಸುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತೊಬ್ಬರು ದೀಪಾವಳಿ ಹಬ್ಬದಲ್ಲಿ ಸ್ವಚ್ಛತೆ ಕಾರ್ಯದಿಂದ ಮಹಿಳೆಯರು ಹೇಗೆ ಕಷ್ಟಪಡುತ್ತಿದ್ದಾರೆ ಎಂದು ಹಿಂದಿ ಬಿಬಿಸಿಯಲ್ಲಿ ಬರೆದ ವರದಿಯೊಂದನ್ನು ಉಲ್ಲೇಖಿಸಿದ ಬಳಕೆದಾರರೊಬ್ಬರು, ಈಕೆ ಬಿಬಿಸಿಯ ವರದಿಯನ್ನು ನಿಜ ಮಾಡಲು ಹೊರಟಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

Scroll to load tweet…