ಮಹಾನಗರದಲ್ಲಿ ಕ್ಯಾಬ್ ಓಡಿಸುತ್ತಾ ತಮ್ಮ ಬದುಕು ಕಟ್ಟಿಕೊಂಡಿರುವ ಮಹಿಳಾ ಚಾಲಕಿಯೊಬ್ಬರ ಕತೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಪೂರ್ತಿ ತುಂಬುವಂತಿದೆ.
ಬೆಂಗಳೂರು: ಕೆಲ ದಿನಗಳ ಹಿಂದೆ ಝೋಮ್ಯಾಟೋ ಡೆಲಿವರಿ ಬಾಯ್ ಒಬ್ಬ ತನ್ನ ಪುಟ್ಟ ಮಗುವನ್ನು ಸೊಂಟದಲ್ಲಿರಿಸಿಕೊಂಡು ಆಹಾರ ಡೆಲಿವರಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಅಗಿತ್ತು. ಅದಕ್ಕೂ ಮೊದಲು ವಿಕಲಚೇತನ ವ್ಯಕ್ತಿಯೊಬ್ಬರು ಈ ಸ್ವಿಗ್ಗಿ ಮೂಲಕ ಆಹಾರ ಪೂರೈಸುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಂಡ ವಿಚಾರ ಸಾಕಷ್ಟು ವೈರಲ್ ಆಗಿತ್ತು. ಈಗ ಮಹಾನಗರದಲ್ಲಿ ಕ್ಯಾಬ್ ಓಡಿಸುತ್ತಾ ತಮ್ಮ ಬದುಕು ಕಟ್ಟಿಕೊಂಡಿರುವ ಮಹಿಳಾ ಚಾಲಕಿಯೊಬ್ಬರ ಕತೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಪೂರ್ತಿ ತುಂಬುವಂತಿದೆ.
ಸ್ಟಾರ್ಟ್ಅಪ್ ಒಂದರ ಸಹ ಸಂಸ್ಥಾಪಕ ರಾಹುಲ್ ಸಸಿ ಎಂಬುವವರು, ಈ ಮಹಿಳಾ ಕ್ಯಾಬ್ ಚಾಲಕಿ ಅದಕ್ಕಿಂತಲೂ ಹೆಚ್ಚು ಒಂದು ಮಗುವಿನ ತಾಯಿ, ಕಷ್ಟದ ನಡುವೆಯೂ ಕನಸುಗಳನ್ನು ಕಮರಿಸದೇ, ಸಾವಿರಾರು ಕನಸುಗಳನ್ನು ಹೊತ್ತು ಬದುಕು ಸಾಗಿಸುತ್ತಿರುವ ಮಹಿಳೆಯೊಬ್ಬರ ಕತೆಯನ್ನು ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಉದ್ಯಮಿ ರಾಹುಲ್ ಸಸಿ ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ಏನ್ ಹೇಳಿದ್ದಾರೆ ಅದರ ಸಾರಾಂಶ ಇಲ್ಲಿದೆ.
ನಿನ್ನೆ ನನ್ನ ಸ್ನೇಹಿತ ನನಗಾಗಿ ಉಬರ್ ಕ್ಯಾಬ್ ಬುಕ್ ಮಾಡಿದ್ರು. ಈ ವೇಳೆ ನನ್ನನ್ನು ಕರೆದುಕೊಂಡು ಹೋಗಲು ಡ್ರೈವರ್ ಆಗಿ ಮಹಿಳೆಯೊಬ್ಬರು ಬಂದರು. ಕಾರು ನನ್ನನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಮುಂಭಾಗದ ಸೀಟಿನಲ್ಲಿ ಮಗುವೊಂದು ಮಲಗಿರುವುದನ್ನು ಗಮನಿಸಿ ಆ ಮಹಿಳೆ ಬಳಿ ಮೇಡಂ ಇದು ನಿಮ್ಮ ಮಗುವೇ ಎಂದು ಕೇಳಿದೆ. ಆಗ ಮಾತು ಆರಂಭಿಸಿದ ಅವರು ಹೌದು ಸರ್, ನನ್ನ ಮಗಳು, ಅವಳಿಗೆ ಈಗ ಶಾಲೆಗೆ ರಜೆ ಇದೆ. ಹೀಗಾಗಿ ನಾನು ಕೆಲಸ ಹಾಗೂ ಮಗುವನ್ನು ನೋಡಿಕೊಳ್ಳುವ ಎರಡೆರಡು ಕಾರ್ಯವನ್ನು ಜೊತೆ ಜೊತೆಯಲ್ಲಿ ಮಾಡುತ್ತಿದ್ದೇನೆ. ಇದರಿಂದ ಕುತೂಹಲಕ್ಕೊಳಗಾದ ನಾನು ಆಕೆಯ ಬಗ್ಗೆ ಇನ್ನಷ್ಟು ತಿಳಿಯಲು ಆರಂಭಿಸಿ ಮಾತು ಮುಂದುವರಿಸಿದೆ.
ಬಂಡೆಗಲ್ಲುಗಳಿದ್ದ ಜಮೀನಾಯ್ತು ಹಸಿರು ಹೊತ್ತ ಭೂಮಿ, ಬಂಗಾರದಂಥಾ ಬೆಳೆ ಬೆಳೆದ ರೈತ ಸಾಧಕಿ
ಆ ಮಹಿಳಾ ಕಾರು ಚಾಲಕಿಯ ಹೆಸರು ನಂದಿನಿ, ಬೆಂಗಳೂರಿನಲ್ಲಿ ಉಬರ್ ಕ್ಯಾಬ್ ಚಾಲಕಿಯಾಗಿರುವ ಅವರು ಉದ್ಯಮಿಯಾಗಲು ಬಯಸಿದ್ದರು. ಹೀಗಾಗಿ ಕೋವಿಡ್ ಮೊದಲು ತಮ್ಮೆಲ್ಲಾ ಉಳಿತಾಯದೊಂದಿಗೆ ಆಹಾರದ ಉದ್ಯಮವನ್ನು ಆರಂಭಿಸಿದರು. ಪುಟ್ಟ ಗಾಡಿಯಲ್ಲಿ ಆಹಾರವಿಟ್ಟುಕೊಂಡು ಮಾರುವ ಉದ್ಯಮ. ಆದರೆ ನಂತರ ಬಂದ ಕೋವಿಡ್ ಎಲ್ಲವನ್ನು ಸರ್ವನಾಶಗೊಳಿಸಿತು. ವ್ಯವಹಾರ ಕೈ ಹಿಡಿಯದೇ ಹಾಕಿದ ದುಡ್ಡು ಕೈಗೆ ಬಾರದೇ ಅವರು ಎಲ್ಲವನ್ನು ಕಳೆದುಕೊಂಡರು. ನಂತರ ಬದುಕು ಮುನ್ನಡೆಸಲು ಉಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡಲು ಶುರು ಮಾಡಿದರು. ಪ್ರಸ್ತುತ ದಿನಕ್ಕೆ 12 ಗಂಟೆ ಕೆಲಸ ಶುರು ಮಾಡಿದ್ದು, ಇದಕ್ಕಿಂತಲೂ ಹೆಚ್ಚು ಕೆಲಸ ಮಾಡುವುದಕ್ಕೂ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಈ ಮೂಲಕ ಹಣವನ್ನು ಉಳಿಸಿ ತಾನು ಕಳೆದುಕೊಂಡಿದ್ದನ್ನೆಲ್ಲಾ ಮತ್ತೆ ಗಳಿಸುವ ಉತ್ಸಾಹದಲ್ಲಿದ್ದಾರೆ ನಂದಿನಿ. ಹೀಗೆ ಇವರೊಂದಿಗೆ ಈ ಪಯಣ ಕೊನೆಗೊಳ್ಳುತ್ತಿದಂತೆ ನಾನು ಅವರೊಂದಿಗೆ ಒಂದು ಸೆಲ್ಫಿ ಕೇಳಿದೆ. ಇದಕ್ಕೆ ಏಕೆ ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾನು ಮೇಡಂ ನಿಮ್ಮ ಕತೆ ಸ್ಪೂರ್ತಿದಾಯಕವಾಗಿದ್ದು,ಅನೇಕರು ಸಣ್ಣ ಪುಟ್ಟ ವಿಷಯಗಳಿಗೆ ಬದುಕಿನಲ್ಲಿ ವೈಫಲ್ಯ ಕಂಡಾಗ ನಿರಾಶೆಯಿಂದ ಬೇಸರಿಸುತ್ತಾರೆ. ಅದರೆ ನೀವು ಕಷ್ಟ ಸೋಲುಗಳಿಗೆ ಎದೆಗುಂದದೇ ಹೋರಾಡುತ್ತಿದ್ದೀರಿ. ನಿಮ್ಮ ಕತೆ ಅನೇಕರಿಗೆ ಸ್ಪೂರ್ತಿಯಾಗಬಹುದು. ಇದನ್ನು ನಾನು ಇತರರೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ ಎಂದಾಗ ಆಕೆ ಮುಗುಳ್ನಕ್ಕು ಒಪ್ಪಿಗೆ ಸೂಚಿಸಿದರು ಎಂದು ರಾಹುಲ್ ಬರೆದುಕೊಂಡಿದ್ದಾರೆ.
Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!
ಉಬರ್ ಓಲಾದಲ್ಲಿ ಚಾಲಕರಾಗಿ, ಝೋಮ್ಯಾಟೋ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್‌ಗಳಾಗಿ ಸಾವಿರಾರು ಜನ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಒಬ್ಬೊಬ್ಬರ ಕತೆ ಒಂದೊಂದು ರೀತಿ. ಎಲ್ಲರೂ ತಮ್ಮ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಬದುಕಿನ ಬಂಡಿ ಸಾಗಿಸುವುದಾಗಿ ಮಹಾನಗರದಲ್ಲಿ ಬಂದು ಬದುಕು ಕಟ್ಟಿಕೊಂಡವರು. ಇಂತಹವರ ಕತೆಗಳನ್ನು ಹೃದಯ ಶ್ರೀಮಂತಿಕೆಯನ್ನು ಗ್ರಾಹಕರಿಗೆ ಬಂದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅವರನ್ನು ಜನ ಗುರುತಿಸುವಂತೆ ಮಾಡಿದ್ದಾರೆ.
