ಮಹಿಳಾ ಬೈಕರ್ ಹಿಂಬಾಲಿಸಿದ ಕಾರಿನಲ್ಲಿದ್ದ ಗುಂಪು ಆಕೆ ಬಳಿ ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ತನ್ನ ಪಾಡಿಗೆ ತೆರಳಿದ ಮಹಿಳಾ ಬೈಕರ್ ಚೇಸ್ ಮಾಡಿ ಹಿಟ್ ಆ್ಯಂಡ್ ರನ್ ಮಾಡಿದ ಘಟನೆ ನಡೆದಿದೆ. ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.

ಗುರುಗಾಂವ್ (ಸೆ.14) ಸ್ನೇಹಿತರ ಜೊತೆ ಬೈಕ್ ರೈಡಿಂಗ್ ಹೊರಟ ಮಹಿಳಾ ಬೈಕರ್‌ನ್ನು ಹಿಂಬಾಲಿಸಿಕೊಂಡ ಬಂದ ಕಾರು ಕಿರುಕುಳ ನೀಡಲು ಆರಂಭಿಸಿದೆ. ಬೈಕ್ ಹತ್ತಿರಕ್ಕೆ ಕಾರು ಚಲಾಸಿಕೊಂಡು ಬಂದು ನಿಲ್ಲಿಸಲು ಸೂಚಿಸಿದ್ದಾರೆ. ತನ್ನ ಪಕ್ಕ ಬರದಂತೆ ಸೂಚನೆ ನೀಡಿದ ಮಹಿಳಾ ಬೈಕರ್ ಹೊರಟು ಹೋಗಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಾರಿನಲ್ಲಿದ್ದ ಗುಂಪು, ಮಹಿಳಾ ಬೈಕರ್ ಚೇಸ್ ಮಾಡಿದೆ. ಬಳಿಕ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಗುರುಗಾಂವ್‌ನ ಗಾಲ್ಫ್ ಕೋರ್ಸ್ ರಸ್ತೆ ಬಳಿ ನಡೆದಿದೆ.

ಏನಿದು ಮಹಿಳಾ ಬೈಕರ್ ಚೇಸಿಂಗ್ ಘಟನೆ?

ಮಹಿಳಾ ಬೈಕರ್ ಸಿಯಾ ತನ್ನ ಸ್ನೇಹಿತರ ಜೊತೆ ಬೈಕ್ ರೈಡಿಂಗ್ ತೆರಳಿದ್ದಾಳೆ. ಎಪ್ರಿಲಿಯಾRS 457 ಬೈಕ್ ಮೂಲಕ ರೈಡಿಂಗ್ ಆರಂಭಿಸಿದ್ದಾಳೆ. ಸುಂದರ ಯುವತಿ ಮಹಿಳೆಯೊಬ್ಬರು ರೇಸ್ ಬೈಕ್ ರೀತಿಯ ಬೈಕ್ ರೈಡಿಂಗ್ ಮಾಡುತ್ತಿರುವುದು ಗಮನಿಸಿದ ಕಾರಿನಲ್ಲಿದ್ದ ನಾಲ್ವರ ಗುಂಪು ಆಕೆಯನ್ನು ಹಿಂಬಾಲಿಸಲು ಆರಂಬಿಸಿದೆ. ಇದೇ ವೇಳೆ ಯುವತಿಯ ಸ್ನೇಹಿತ ತಕ್ಷಣವೇ ನೆರವಿಗೆ ಧಾವಿಸಿದ್ದಾನೆ. ಮಹಿಳೆಯ ಪಕ್ಕದಲ್ಲೇ ತನ್ನ ಬೈಕ್ ರೈಡ್ ಮಾಡುತ್ತಾ ಸಾಗಿದ್ದಾನೆ. ಇದರಿಂದ ಕಾರಿನಲ್ಲಿದ್ದ ಗುಂಪು ಮತ್ತಷ್ಟು ಆಕ್ರೋಶಗೊಂಡಿದೆ.

ಕಾರನ್ನು ಆಕೆಯ ಬೈಕ್ ಪಕ್ಕದಲ್ಲೇ ಚಲಾಯಿಸಿ ನಿಲ್ಲಿಸಲು ಸೂಚಿದ್ದಾರೆ. ಆದರೆ ಮಹಿಳಾ ಬೈಕರ್ ವಾಹನ ನಿಲ್ಲಿಸಲಿಲ್ಲ. ಬದಲಾಗಿ ಹತ್ತಿರ ಬರದಂತೆ ಕೈ ಸನ್ನೆ ಮೂಲಕ ಸೂಚಿಸಿದ್ದಾಳೆ. ಹತ್ತಿರ ಬಂದರೆ ಡಿಕ್ಕಿಯಾಗುವ ಸಾಧ್ಯತೆ ಇದೆ. ಅಪಾಯ ಎದುರಾಗಲಿದೆ ಎಂದು ಸೂಚಿಸಿದ್ದಾಳೆ. ಕೈ ಸನ್ನೆ ಮೂಲಕ ಸೂಚನೆ ನೀಡಿದ ಮಹಿಳೆ ವೇಗವಾಗಿ ಬೈಕ್ ಚಲಾಯಿಸಿ ಸಾಗಿದ್ದಾಳೆ. ಆದರೆ ಕಾರಿನಲ್ಲಿದ್ದ ಗುಂಪು ಅದಕ್ಕಿಂತ ವೇಗವಾಗಿ ಕಾರು ಚಲಾಸಿಕೊಂಡು ಬಂದಿದ್ದಾರೆ. ಯುವತಿ ರಸ್ತೆಯ ಎಡಭಾಗದಲ್ಲಿ ಚಲಿಸುತ್ತಿದ್ದರೆ, ವೇಗವಾಗಿ ಬಂದ ಕಾರು ರಸ್ತೆಯ ಬಲಭಾಗದಲ್ಲಿ ಸಾಗುತ್ತಿತ್ತು.

ಸಡನ್ ಕಟ್ ಮಾಡಿ ಬೈಕ್‌ಗೆ ಹಿಟ್ ಆ್ಯಂಡ್ ರನ್

ಬಲಭಾಗದಲ್ಲಿದ್ದ ಕಾರು ಸಡನ್ ಕಟ್ ಮಾಡಿ ಬೈಕ್‌ನತ್ತ ಬಂದು ಕಾರಿಗೆ ಡಿಕ್ಕಿ ಮಾಡಿದ್ದಾನೆ. ಅಪಘಾತದ ಪರಿಣಾಮ ಮಹಿಳಾ ಬೈಕರ್ ರಸ್ತೆ ಮೇಲೆ ಬಿದ್ದಿದ್ದಾಳೆ. ಬೈಕ್ ರಸ್ತೆಯಲ್ಲಿ ಉಜ್ಜಿಕೊಂಡು ಕಿಲೋಮೀಟರ್ ದೂರ ಸಾಗಿದೆ. ಮಹಿಳಾ ಬೈಕರ್ ಗಾಯಗೊಂಡಿದ್ದಾಳೆ. ಇತ್ತ ಸ್ನೇಹತ ಕಾರನ್ನು ಫಾಲೋ ಮಾಡಿದ್ದಾನೆ. ಕಾರು ನಿಲ್ಲಿಸಿ ಬೈಕ್‌ನಿಂದ ಇಳಿದು ತೆರಳಿದಾಗ ಮತ್ತೆ ಕಾರು ಸ್ಥಳದಿಂದ ಪರಾರಿಯಾಗಿದೆ. ಸಂಪೂರ್ಣ ಘಟನೆಯ ವಿಡಿಯೋ ಸೆರೆಯಾಗಿದೆ. ಬೈಕ್‌ನಲ್ಲಿಟ್ಟಿದ್ದ ಕ್ಯಾಮೆರಾ, ಹೆಲ್ಮೆಟ್ ಮೇಲಿನ ಕ್ಯಾಮೆರಾ ಮೂಲಕ ಪ್ರತಿ ಘಟನೆಗಳು ಸೆರೆಯಾಗಿದೆ.

ಕಾರಿನಲ್ಲಿದ್ದ ಗುಂಪು ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದೆ. ಮಹಿಳಾ ಬೈಕರ್ ಗುರುಗಾಂವ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಮಾಹಿತಿ ನೀಡಿದ್ದಾರೆ. ಗುರುಗಾಂವ್ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಮಹಿಳಾ ಬೈಕರ್ ಸುರಕ್ಷತೆ ಕುರಿತು ಪ್ರಶ್ನಿಸಿದ್ದಾರೆ. ಹಾಡಹಗಲೇ ಫಾಲೋ ಮಾಡಿ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ. ಈ ಬಾರಿ ನಾನು ಗಾಯಗೊಂಡಿದ್ದೇನೆ, ಆದರೆ ಸುರಕ್ಷಿತವಾಗಿದ್ದೇನೆ. ರಜಾ ದಿನವಾಗಿದ್ದ ಕಾರಣ ಹೆಚ್ಚಿನ ವಾಹನಗಳು ರಸ್ತೆಯಲ್ಲಿ ಇರಲಿಲ್ಲ. ಹೆಚ್ಚಿನ ವಾಹನಗಳಿದ್ದರೆ ಅಪಾಯದ ತೀವ್ರತೆ ಹೆಚ್ಚಾಗುತ್ತಿತ್ತು ಎಂದು ಮಹಿಳಾ ಬೈಕರ್ ಹೇಳಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಗುರುಗಾಂವ್ ಪೊಲೀಸ್, ದೆಹಲಿ ಪೊಲೀಸ್ ಹಾಗೂ ಹರ್ಯಾಣ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹಿಟ್ ಆ್ಯಂಡ್ ರನ್ ಕೇಸ್ ಮಾತ್ರವಲ್ಲ, ಮಹಿಳೆಗೆ ರಸ್ತೆಯಲ್ಲಿ ಕಿರುಕುಳ ನೀಡಿದ ಪ್ರಕರಣವೂ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆತನ ಬೇಡಿಕೆ ಈಡೇರದ್ದಕ್ಕೆ ಉದ್ದೇಶಪೂರ್ವಕವಾಗಿ ಮಾಡಿದ ಘಟನೆ. ಹೀಗಾಗಿ ಗಂಭೀರ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ.

View post on Instagram