Global Leader Approval: ಬಿಡೆನ್, ಜಾನ್ಸನ್‌ರನ್ನೇ ಹಿಂದಿಕ್ಕಿ ಸತತ ಮೂರನೇ ವರ್ಷ ಮೋದಿ ವಿಶ್ವದ ನಂ.1 ನಾಯಕ!

72% ರೇಟಿಂಗ್‌ನೊಂದಿಗೆ, ಪ್ರಧಾನಿ ಮೋದಿ ಮತ್ತೊಮ್ಮೆ 'ಗ್ಲೋಬಲ್ ಲೀಡರ್ ಅಪ್ರೂವಲ್' ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

With 72 percent Rating PM Narendra Modi Again Tops Global Leader Approval List 2022 Morning Consult Report mnj

ನವದೆಹಲಿ (ಫೆ. 07): ಪ್ರಧಾನಿ ಮೋದಿಯವರು ತಮ್ಮ ಜನಪ್ರಿಯತೆ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ (Morning Consult) ಬಿಡುಗಡೆ ಮಾಡಿದ ಇತ್ತೀಚಿನ ಪಟ್ಟಿಯ ಪ್ರಕಾರ ಜಾಗತಿಕ ನಾಯಕರಾದ ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೊಮ್ಮೆ 'ಗ್ಲೋಬಲ್ ಲೀಡರ್ ಅಪ್ರೂವಲ್' ರೇಟಿಂಗ್ ಪಟ್ಟಿಯಲ್ಲಿ ಶೇ.72 ರ ಅತ್ಯಧಿಕ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 

ಗ್ಲೋಬಲ್ ಲೀಡರ್ ಅಪ್ರೂವಲ್ ಲಿಸ್ಟ್ 2022 ಅನ್ನು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದೆ, ಇದು ಜಗತ್ತಿನಾದ್ಯಂತ ಬದಲಾಗುತ್ತಿರುವ ರಾಜಕೀಯ ಬದಲಾವಣೆಗಳ ಒಳನೋಟವನ್ನು ಪಡೆಯಲು ಜಗತ್ತಿನಾದ್ಯಂತ ಹಲವಾರು ದೇಶಗಳ ಅನುಮೋದನೆ ಮತ್ತು ಜನಪ್ರಿಯತೆಯ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾಗಿದೆ.

ಇದನ್ನೂ ಓದಿ: 1 ಕೋಟಿ ಸಬ್‌ಸ್ಕ್ರೈಬರ್‌ ಗಳಿಸಿದ ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್

ಪಟ್ಟಿಯ ಪ್ರಕಾರ, 13 ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ 64 ಪ್ರತಿಶತ, ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ 57 ಪ್ರತಿಶತ, ಫ್ಯೂಮಿಯೊ ಕಿಶಿಡಾ 47 ಪ್ರತಿಶತ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ 42 ಪ್ರತಿಶತ ಪಡೆಯುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ  41 ಪ್ರತಿಶತ ರೇಟಿಂಗ್ ಗಳಿಸಿದ್ದಾರೆ. 

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶೇ 37, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೇ 35 ಪಾಲು ಪಡೆದಿದ್ದಾರೆ. ಕಟ್ಟುನಿಟ್ಟಾದ ಕರೋನವೈರಸ್ ಲಾಕ್‌ಡೌನ್‌ಗಳ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ  ಸಿಬ್ಬಂದಿ ಜತೆ ಪಾರ್ಟಿ ನಡೆಸಿದ್ದಾರೆ ಎಂಬ ವರದಿಯ ನಂತರ ಬ್ರಿಟಿಷ್ ಪ್ರಧಾನಿ ತನ್ನ ರಾಜಕೀಯ ವೃತ್ತಿಜೀವನಕ್ಕಾಗಿ ಹೋರಾಡುತ್ತಿರುವುದರಿಂದ ಬೋರಿಸ್ ಜಾನ್ಸನ್ ಪಟ್ಟಿಯಲ್ಲಿ ಅತಿ ಕಡಿಮೆ ಅಂಕ ಗಳಿಸಿದ್ದಾರೆ. 

ಇದನ್ನೂ ಓದಿ: Statue of Equality : ಸಮಾನತೆಯ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಇದು ಸತತ ಮೂರನೇ ವರ್ಷವಾಗಿದ್ದು, ವಿಶ್ವದ ಇತರ ಎಲ್ಲ ನಾಯಕರಿಗಿಂತ ಹೆಚ್ಚಿನ ಅಂತರದೊಂದಿಗೆ ಪಿಎಂ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿ ನಾಯಕನನ್ನು ಟ್ರ್ಯಾಕ್‌ ಮಾಡಲು ಪ್ರಾರಂಭಿಸಿದ ಸಮಯದಿಂದ, ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಮೇ 2020 ರಲ್ಲಿ ಪಿಎಂ ಮೋದಿಯ ಅನುಮೋದನೆ ರೇಟಿಂಗ್ ಗರಿಷ್ಠ ಮಟ್ಟದಲ್ಲಿತ್ತು, ಆದರೆ ಕಳೆದ ವರ್ಷ  ಕೋವಿಡ್ ಎರಡನೇ ಅಲೆ ಸಮಯದಲ್ಲಿ ರೇಟಿಂಗ್‌ ಅದರ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿತ್ತು. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಜನವರಿಯಲ್ಲಿ ಬಿಡುಗಡೆಯಾಗಿದ್ದ ಸಮೀಕ್ಷೆಯಲ್ಲಿ ಮೋದಿ 71% ಅಂಕ ಪಡೆದಿದು ಅಗ್ರಸ್ಥಾನದಲ್ಲಿದ್ದರು. ಈಗ ಜನವರಿ 27 2022ರಿಂದ ಫೆಬ್ರವರಿ 2, 2022ರ ವರೆಗೆ ಸಂಗ್ರಹಿಸಲಾದ ಲೆಟೇಸ್ಟ್ ಮಾಹಿತಿ ಪ್ರಕಾರ ಶೇ.72 ರ ಅತ್ಯಧಿಕ ರೇಟಿಂಗ್‌ನೊಂದಿಗೆ ಮೋದಿ ಅಗ್ರಸ್ಥಾನದಲ್ಲಿದ್ದಾರೆ.

 

 

ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಕಂಪನಿಯು ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಅಮೆರಿಕಾದ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ. 

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಅನ್ನು 2014 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು  ಡೇಟಾ ಸಂಗ್ರಹಣೆ ತಂತ್ರಜ್ಞಾನ ವೇದಿಕೆಯನ್ನು ನಿರ್ಮಿಸಿದೆ. ವಾರ್ಷಿಕವಾಗಿ 100 ದೇಶಗಳಲ್ಲಿ 15 ದಶಲಕ್ಷಕ್ಕೂ ಹೆಚ್ಚು ಸಂದರ್ಶನಗಳನ್ನು ಸಂಗ್ರಹಿಸಲು ಇದು ಜಾಗತಿಕವಾಗಿ 100 ದಶಲಕ್ಷ ಜನರನ್ನು ಸಂಪರ್ಕಿಸುತ್ತದೆ.

Latest Videos
Follow Us:
Download App:
  • android
  • ios