ಗುರುವಾರ ದೇಶದಲ್ಲಿ ದಾಖಲೆಯ 69612 ಕೊರೋನಾ ಕೇಸ್, 1010 ಸಾವು..!

ದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ನಿನ್ನೆ ಅಂದರೆ ಗುರುವಾರ ದೇಶದಲ್ಲಿ ದಾಖಲೆಯ 69,612 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಇದರೊಂದಿಗೆ 24,56,073ಕ್ಕೆ ಏರಿಕೆಯಾಗಿದ್ದು, ಶುಕ್ರವಾರ 25 ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

With 69612 New Coronavirus Cases India stands at 2456073 on August 13th

ನವದೆಹಲಿ(ಆ.14): ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು, ಗುರುವಾರ 69,612 ಕೇಸ್‌ ದಾಖಲಾಗಿವೆ. ಇದು ಇದುವರೆಗೆ ದಾಖಲಾದ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 24,56,073ಕ್ಕೆ ಏರಿಕೆಯಾಗಿದ್ದು, ಶುಕ್ರವಾರ 25 ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ.

ಇದೇ ವೇಳೆ ಕೊರೋನಾಕ್ಕೆ 1010 ಮಂದಿ ಬಲಿಯಾಗಿದ್ದಾರೆ. 2ನೇ ಬಾರಿ ಕೊರೋನಾ ದೈನಂದಿನ ಮರಣ ಸಂಖ್ಯೆ 1 ಸಾವಿರ ಗಡಿ ದಾಟಿದೆ. ಈ ಮೂಲಕ ಮೃತರ ಸಂಖ್ಯೆ 48,078ಕ್ಕೆ ತಲುಪಿದ್ದು, 50 ಸಾವಿರದತ್ತ ಸಾಗುತ್ತಿದೆ.

ಈ ಮುನ್ನ ಆ.8ರಂದು 64,973 ಕೇಸ್‌ ದಾಖಲಾಗಿದ್ದು, ಈವರೆಗಿನ ದೈನಂದಿನ ಗರಿಷ್ಠ ಎನಿಸಿಕೊಂಡಿತ್ತು. ಗಮನಾರ್ಹ ಸಂಗತಿಯೆಂದರೆ 196 ದಿನಗಳ ಅಂತರದಲ್ಲಿ 24 ಲಕ್ಷ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು 1ರಿಂದ 1 ಲಕ್ಷ ತಲುಪಲು 139 ದಿನಗಳು ಬೇಕಾಗಿದ್ದವು. ಈಗ ಕೇವಲ ಎರಡು ದಿನಗಳ ಅಂತರದಲ್ಲೇ 1 ಲಕ್ಷಕ್ಕೂ ಅಧಿಕ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿವೆ.

ರಾಜ್ಯದಲ್ಲಿ 2 ಲಕ್ಷಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ..!

ಇದೇ ವೇಳೆ ಕೊರೋನಾದಿಂದ ಒಂದೇ ದಿನ 56,888 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 17,42,063ಕ್ಕೆ ಏರಿಕೆ ಆಗಿದೆ. ಈ ಮಧ್ಯೆ ಮಹಾರಾಷ್ಟ್ರದಲ್ಲಿ 11,813 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 5,60,126ಕ್ಕೆ ಏರಿಕೆ ಆಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್‌ 3,20,355ಕ್ಕೆ ತಲುಪಿದೆ.

Latest Videos
Follow Us:
Download App:
  • android
  • ios