Asianet Suvarna News

ದೇಶದಲ್ಲಿ ದಾಖಲೆಯ 5 700 ಜನರಿಗೆ ಕೊರೋನಾ ಸೋಂಕು..!

ಒಂದೇ ದಿನ ದೇಶದಲ್ಲಿ 5700 ಕೋವಿಡ್ 19 ಪ್ರಕರಣಗಳು ದಾಖಲಾಗುವ ಮೂಲಕ ಭಾರತ ಹೊಸ ದಾಖಲೆ ಬರೆದಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,16 ಲಕ್ಷದ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

With 5700 new COVID 19 Cases India Stands at 1,16,295 on May 21st
Author
New Delhi, First Published May 22, 2020, 6:21 AM IST
  • Facebook
  • Twitter
  • Whatsapp

ನವದೆಹಲಿ(ಮೇ.22): ಹಂತಹಂತವಾಗಿ ಲಾಕ್‌ಡೌನ್‌ ತೆರವಾಗುತ್ತಲೇ, ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಂಪ್ರದಾಯ ಮುಂದುವರೆದಿದೆ.

ಗುರುವಾರ ಒಂದೇ ದಿನ 5700 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,16,295ಕ್ಕೆ ತಲುಪಿದೆ. ಇದೇ ವೇಳೆ ಮತ್ತೆ 139 ಜನ ವೈರಸ್‌ಗೆ ಬಲಿಯಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 3494ಕ್ಕೆ ಮುಟ್ಟಿದೆ.

ಈ ನಡುವೆ ಸತತ 5ನೇ ದಿನವೂ ಮಹಾರಾಷ್ಟ್ರದಲ್ಲಿ 2000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬುಧವಾರ ಮಹಾರಾಷ್ಟ್ರದಲ್ಲಿ 2161 ಹೊಸ ಕೇಸು ಪತ್ತೆಯಾಗಿದ್ದು, 65 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 776, ದೆಹಲಿಯಲ್ಲಿ 571, ಗುಜರಾತ್‌ 371, ಮಧ್ಯಪ್ರದೇಶ 246, ಉತ್ತರ ಪ್ರದೇಶದಲ್ಲಿ 181 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇನ್ನು ಈವರೆಗೆ ದೇಶದಲ್ಲಿ 47487 ಜನ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಇಡೀ ಜಗತ್ತೇ ಭಾರತಕ್ಕೆ ಶರಣು, ಮೋದಿ ಬಂಟನ ಕೈಯಲ್ಲಿ ಚೀನಾ ಭವಿಷ್ಯ!

ಒಂದೇ ಆಸ್ಪತ್ರೆಯಲ್ಲಿ 750ರ ಪೈಕಿ 351 ಕೊರೋನಾ ಸಾವು!

ಅಹಮದಾಬಾದ್‌: ಕೊರೋನಾ ವೈರಸ್‌ನಿಂದ ಗುಜರಾತ್‌ನಲ್ಲಿ ಉಂಟಾಗಿರುವ ಒಟ್ಟು ಸಾವಿನ ಸಂಖ್ಯೆಯಲ್ಲಿ ಸುಮಾರು ಶೇ.50ರಷ್ಟುಸಾವುಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಉಂಟಾಗಿದೆ. ಆ ಮೂಲಕ ಈ ಆಸ್ಪತ್ರೆ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ. ಈವರೆಗೆ ಗುಜರಾತ್‌ನಲ್ಲಿ ಕೊರೋನಾಗೆ 749 ಮಂದಿ ಬಲಿಯಾಗಿದ್ದು, ಇದರಲ್ಲಿ 351 ಸಾವು ಈ ಆಸ್ಪತ್ರೆಯಲ್ಲೇ ಉಂಟಾಗಿದೆ.

ಈವರೆಗೆ ಈ ಆಸ್ಪತ್ರೆಯಿಂದ 338 ಕೋವಿಡ್‌ ಬಾಧಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶ ಮಾಡಬೇಕು ಎಂದು ಅಹಮದಾಬಾದ್‌ ಶಾಸಕ ಗ್ಯಾಸುದ್ದೀನ್‌ ಶೇಖ್‌ ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios