Muslim Population: 2075ರ ವೇಳೆಗೆ ಕೆಲವು ದೇಶಗಳಲ್ಲಿ ಒಬ್ಬರೂ ಮುಸ್ಲಿಮರು ಇರುವುದಿಲ್ಲ ಎಂಬ ವದಂತಿಗಳಿವೆ. ಕೆಲವು ಚಿಕ್ಕ ದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಈಗಾಗಲೇ ಕಡಿಮೆಯಿದೆ.

ನವದೆಹಲಿ: ಇಸ್ಲಾಂ ವೇಗವಾಗಿ ಬೆಳವಣಿಗೆಯಾಗುತ್ತಿರುವ ಧರ್ಮವಾಗಿದೆ. ಇಡೀ ಜಗತ್ತಿನಲ್ಲಿ ಅಂದಾಜು 1.9 ಬಿಲಿಯನ್ ಮುಸ್ಲಿಮರಿದ್ದು, ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿದೆ. ಇಸ್ಲಾಂನಲ್ಲಿ 1.5 ಬಿಲಿಯನ್ ಸುನ್ನಿಗಳು ಮತ್ತು 25-35 ಕೋಟಿ ಕೋಟಿ ಶಿಯಾ ಮುಸ್ಲಿಮರಿದ್ದಾರೆ. ಕೆಲ ವರದಿಗಳ ಪ್ರಕಾರ, ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.51ರಷ್ಟು ಜನರು ಮುಸ್ಲಿಮರಿದ್ದು, ಹಂತಹಂತವಾಗಿ ಈ ಗಣತಿ ವೃದ್ದಿಯಾಗುತ್ತಿದೆ. ವಿಶ್ವದ ಮಧ್ಯ ಆಫ್ರಿಕಾದ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷಿಯಾ ಭಾಗದಲ್ಲಿ ಹೆಚ್ಚು ಮುಸ್ಲಿಮರು ವಾಸವಾಗಿದ್ದಾರೆ. ಈ ಭಾಗದಲ್ಲಿಯೇ ಪ್ರಪಂಚದ ಶೇ.90ರಷ್ಟು ಮುಸ್ಲಿಮರು ವಾಸವಾಗಿದ್ದು, ಇನ್ನುಳಿದ ಶೇ.10ರಷ್ಟು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. 

ಕೆಲವು ದೇಶಗಳಲ್ಲಿ ಒಬ್ಬರೇ ಒಬ್ಬ ಮುಸಲ್ಮಾನರೂ ಉಳಿದಿಲ್ಲ ಅಥವಾ ಇಲ್ಲಿ ಮುಸ್ಲಿಮರ ಸಂಖ್ಯೆ ತುಂಬಾ ವಿರಳವಾಗಲು ಸಾಧ್ಯನಾ ಎಂಬ ಪ್ರಶ್ನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತದೆ. 2075ರ ವೇಳೆಗೆ ಕೆಲವೊಂದು ದೇಶದಲ್ಲಿ ಸಂಪೂರ್ಣವಾಗಿ ಇಸ್ಲಾಂ ಪಾಲನೆ ಮಾಡುವ ಜನರು ಇರಲ್ಲ ಎಂದು ಹೇಳಲಾಗುತ್ತದೆ? ಇದು ನಿಜವಾದ್ರೆ, ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ. 

ಸಾಕಷ್ಟು ಭವಿಷ್ಯವಾಣಿಗಳು!
50 ವರ್ಷಗಳ ನಂತರ ಕೆಲವು ದೇಶಗಳಲ್ಲಿ ಮುಸ್ಲಿಮರೇ ಇರಲ್ಲ ಅಂದ್ರೆ ಆ ಪ್ರದೇಶ ಹೇಗಿರುತ್ತೆ ಎಂದು ಕಲ್ಪನೆ ಮಾಡಿಕೊಳ್ಳಿ. ವಲಸೆ, ಮತಾಂತರ, ಧಾರ್ಮಿಕ ನಂಬಿಕೆ, ಜನಸಂಖ್ಯೆ ಬೆಳವಣಿಗೆ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಮೇಲೆ ಇದು ಅವಲಂಬಿತವಾಗುತ್ತದೆ. ಈಗಾಗಲೇ ಕೆಲವರು ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ಆಧಾರದ ಮೇಲೆ ಹಲವರು ಭವಿಷ್ಯ ನುಡಿದಿದ್ದಾರೆ. ಇಂತಹ ಭವಿಷ್ಯವಾಣಿಗಳು, ಮುಂದಿನ 50 ವರ್ಷದ ನಂತರ ಅಂದ್ರೆ 2075ರಲ್ಲಿ ಮುಸ್ಲಿಮರ ಜೀವನ ಹೇಗಿರುತ್ತೆ ಎಂದು ಹೇಳಿವೆ.

ಪ್ಯೂ ರಿಸರ್ಚ್ ಸೆಂಟರ್ ವರದಿ
2015ರ ಪ್ಯೂ ರಿಸರ್ಚ್ ಸೆಂಟರ್ ವರದಿ ಪ್ರಕಾರ, ವಿಶ್ವದಲ್ಲಿ ಮುಸ್ಲಿಮರ ಜನಸಂಖ್ಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 2015ರಲ್ಲಿ 1.8 ಕೋಟಿ ಬಿಲಿಯನ್ ಆಗಿತ್ತು. 2050ರ ವೇಳೆಗೆ ಈ ಸಂಖ್ಯೆ ದ್ವಿಗುಣವಾಗಲಿದ್ದು, ಸರಿಸುಮಾರು 2.76 ಬಿಲಿಯನ್‌ಗೆ ತಲುಪಲಿದೆ. ಇದಕ್ಕೆ ಕಾರಣ ಧಾರ್ಮಿಕ ಪರಿವರ್ತನ, ಜನನ ದರದಲ್ಲಿ ಹೆಚ್ಚಳ ಮತ್ತು ಯುವ ಸಮುದಾಯದ ಏರಿಕೆಯಾಗಿದೆ. ಸದ್ಯದ ಪ್ರಕಾರ ಇಂತಹ ದೇಶದಲ್ಲಿ ಮುಸ್ಲಿಮರ ಇಲ್ಲದಂತಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 50 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಸಂಪೂರ್ಣವಾಗಿ ಕಣ್ಮರೆಯಾಗಬಹುದ ಅಥವಾ ಕೆಲವು ಸಂದರ್ಭಗಳಲ್ಲಿ ಈ ಸಂಖ್ಯೆಯು ನಗಣ್ಯವಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. 

50 ವರ್ಷದ ನಂತರ ಯಾವ ದೇಶದಲ್ಲಿರಲ್ಲ ಮುಸ್ಲಿಮರು?
ಕೆಲವು ಚಿಕ್ಕ ದೇಶಗಳಲ್ಲಿ ಧಾರ್ಮಿಕ ಪರಿವರ್ತನೆಯಿಂದಾಗಿ ಮುಸ್ಲಿಮರು ಇಲ್ಲದಂತಾಗಬಹುದು. ಉದಾಹರಣೆಗೆ ಮೈಕ್ರೋನೇಶಿಯಾ, ನಾಊರು, ತುವಾಲು ಅಂತಹ ದೇಶಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ ಇದೆ. ಇಂತಹ ದೇಶಗಳಲ್ಲಿ ಮುಸ್ಲಿಮರ ವಲಸೆ ಆಗದಿದ್ದಲ್ಲಿ ಅಥವಾ ಮೂಲವಾಸಿಗಳು ವಲಸೆ ಹೋದ್ರೆ ಅಥವಾ ಜನನ ದರ ಇಳಿಕೆಯಾದ್ರೆ ಅಥವಾ ಕ್ಷಿಪ್ರಕ್ರಾಂತಿಯಂತೆ ಧಾರ್ಮಿಕ ಪರಿವರ್ತನೆ ಉಂಟಾದ್ರೆ ಜನಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಬಹುದು.

ಇದನ್ನೂ ಓದಿ: ಬ್ರಿಟನ್ ಇಸ್ಲಾಂ ರಾಷ್ಟ್ರವಾಗುವ ದಿನ ದೂರವಿಲ್ಲ : ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ

ಚೆಕ್ ಗಣರಾಜ್ಯ ಮತ್ತು ಎಸ್ಟೋನಿಯಾ ದೇಶಗಳಲ್ಲಿ ವಾಸಿಸುವ ಮುಸ್ಲಿಮರ ಸಂಖ್ಯೆ ಶೇ.0.2ಕ್ಕಿಂತಲೂ ಕಡಿಮೆಯಾಗಿದೆ. ಇಲ್ಲಿಯ ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸದಿದ್ದರೆ ಅಥವಾ ಮುಸ್ಲಿಮರು ಇತರ ಧರ್ಮಗಳಲ್ಲಿ ಮದುವೆಯಾಗುತ್ತಿದ್ದರೆ ಸಂಪೂರ್ಣವಾಗಿ ಮುಂದಿನ 50 ವರ್ಷಕ್ಕೆ ಮುಸ್ಲಿಮರಿಲ್ಲದ ದೇಶಗಳಾಗಲಿವೆ ಎಂದು ವರದಿಯಾಗಿದೆ. 

ರಾಜಕೀಯ/ಸಾಮಾಜಿಕ ಒತ್ತಡ
ರಾಜಕೀಯ ಮತ್ತು ಸಾಮಾಜಿಕ ಒತ್ತಡ ಮುಸ್ಲಿಮರ ಅವನತಿಗೆ ಕಾರಣವಾಗುವ ಸಾಧ್ಯತೆಗಳಿವೆ. ಉದಾಹರಣೆಗೆ ಮಯನ್ಮಾರ್‌ನಂತ ದೇಶಗಳಲ್ಲಿ ರೋಹಿಂಗ್ಯಾ ಜನರು ಅಲ್ಪಸಂಖ್ಯಾತರಾಗಿದ್ದು, ಮೇಲ್ವರ್ಗದವರ ದಬ್ಬಾಳಿಕೆ ತುತ್ತಾಗುತ್ತಿದ್ದಾರೆ. ಭವಿಷ್ಯದಲ್ಲಿ ಇದು ಹೀಗೆಯೇ ಮುಂದುವರಿದ್ರೆ ಮ್ಯಾನ್ಮಾರ್‌ನಲ್ಲಿ ಬಹುತೇಕ ಮುಸ್ಲಿಮರೇ ಇಲ್ಲದಂತಾಗುತ್ತದೆ. ರಿಯಾ ಮತ್ತು ಯೆಮೆನ್‌ನಂತಹ ದೇಶಗಳಲ್ಲಿನ ಯುದ್ದಗಳಿಂದಾಗಿ ಇಲ್ಲಿಯ ಮುಸ್ಲಿಮರು ದೇಶ ತೊರೆದು ವಲಸೆ ಹೋಗುತ್ತಿದ್ದಾರೆ. ಈ ವಲಸೆ ಹೀಗೆಯೇ ಮುಂದುವರಿದ್ರೆ ಈ ದೇಶಗಳು ನಿರ್ಜನ ಪ್ರದೇಶಗಳಾಗಲಿವೆ. 

ಇದನ್ನೂ ಓದಿ: ನಮಾಜ್ ರಸ್ತೆಯಲ್ಲಿ ಮಾಡಿದ್ರೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ರದ್ದು, ಪೊಲೀಸ್ ಎಚ್ಚರಿಕೆ