ಮುಕೇಶ್ ಅಂಬಾನಿ ಅವರ 15,000 ಕೋಟಿ ರೂಪಾಯಿ ಮೌಲ್ಯದ ಅಂಟಿಲಿಯಾ ಕಟ್ಟಡ ಖಾಲಿ ಮಾಡ್ತಾರಾ? ಈ ನಿಯಮದಿಂದ ಅಂಬಾನಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ವಸತಿ ಕಟ್ಟಡ ಅಂಟಿಲಿಯಾ ಮುಂಬೈನಲ್ಲಿದೆ. 15,000 ಕೋಟಿ ರೂಪಾಯಿ ಮೌಲ್ಯದ ಆಂಟಿಲಿಯಾದಲ್ಲಿ ಮುಕೇಶ್ ಅಂಬಾನಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ. ದೇಶದ ಅತ್ಯಂತ ವಿಲಾಸಿಮಯ ವಸತಿ ಕಟ್ಟಡಗಳಲ್ಲಿ ಅಂಟಿಲಿಯಾ ಒಂದಾಗಿದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಪೃಥ್ವಿ ಅಂಬಾನಿ ಮತ್ತು ವೇದಾ ಅಂಬಾನಿ ವಾಸಿಸುತ್ತಿದ್ದಾರೆ. ಇದೀಗ ಅಂಬಾನಿ ಕುಟುಂಬ ಈ ವಿಲಾಸಿಮ ಅಂಟಿಲಿಯಾ ಖಾಲಿ ಮಾಡ್ಯಾರಾ ಅನ್ನೋ ಪ್ರಶ್ನೆ ಎದುರಾಗಿದೆ.
ಇತ್ತೀಚೆಗಷ್ಟೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಕೊಂಡ ವಕ್ಫ್ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಡೆತನ ಅಂಟಿಲಿಯಾ ಕಟ್ಟಡ ವಕ್ಫ್ ಒಡೆತನದ ಭೂಮಿಯಲ್ಲಿ ನಿರ್ಮಾಣವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿಶ್ವದ ದುಬಾರಿ ಮತ್ತು ವಿಲಾಸಿಮಯ ಕಟ್ಟಡಗಳಲ್ಲಿ ಒಂದಾಗಿರುವ ಅಂಟಿಲಿಯಾ ಕಟ್ಟಡ ಮುಂಬೈನ ಪರೇಡ್ ರಸ್ತೆಯ ಏರಿಯಾದಲ್ಲಿದೆ. ಟಿವಿ9 ಹಿಂದಿ ವರದಿಯ ಪ್ರಕಾರ, ಮುಂಬೈನ ಪರೇಡ್ ರಸ್ತೆಯಲ್ಲಿರುವ 4.5 ಲಕ್ಷ ಚದರಮೀಟರ್ ಭೂಮಿಯನ್ನು 21 ಕೋಟಿ ರೂಪಾಯಿ ನೀಡಿ ವಕ್ಫ್ ಬೋರ್ಡ್‌ನಿಂದ ಮುಕೇಶ್ ಅಂಬಾನಿ ಖರೀದಿಸಿದ್ದರು. ಈ ಜಮೀನು ಖರೀದಿಸಿದ ಬಳಿಕ ಸುಮಾರು 15,000 ಕೋಟಿ ರೂಪಾಯಿ ಮೌಲ್ಯದ ಅಂಟಿಲಿಯಾ ಕಟ್ಟಡ ತಲೆಯೆತ್ತಿತ್ತು. ಆದರೆ ಇದೀಗ ಈ ಭೂಮಿಯ ಸುತ್ತ ಹೊಸ ವಿವಾದಗಳು ಸುತ್ತಿಕೊಂಡಿವೆ.
ವಕ್ಫ್ ಮಂಡಳಿಯ ಆಸ್ತಿಯನ್ನು ಖಾಸಗಿ ಬಳಕೆಗೆ ಅಥವಾ ಖಾಸಗಿ ವ್ಯಕ್ತಿಗೆ ಮಾರಾಟ ಮಾಡುವಂತಿಲ್ಲ ಎಂಬ ಅಂಶವುಳ್ಳ ಆಕ್ಷನ್ ಟೇಕನ್ ವರದಿಯನ್ನು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ವರದಿಯಿಂದಾಗಿ ಅಂಟಿಲಿಯಾ ಕಟ್ಟಡವಿರೋ ಈ ಭೂಮಿ ವಿವಾದಕ್ಕೆ ಒಳಗಾಗಿದೆ. ಈ ಹಿಂದೆ ಈ ಜಮೀನು/ನಿವೇಶನವನ್ನು ಕರೀಂ ಭಾಯಿ ಇಬ್ರಾಹಿಂ ಎಂಬವರು ಧಾರ್ಮಿಕ ಶಿಕ್ಷಣಕ್ಕಾಗಿ ಮತ್ತು ಅನಾಥಾಶ್ರಮವನ್ನು ನಿರ್ಮಿಸಲು ವಕ್ಫ್ ಬೋರ್ಡ್‌ಗೆ ದಾನವಾಗಿ ನೀಡಿದ್ದರು. ಆದ್ರೆ ಈ ಮಾಹಿತಿ ವ್ಯವಹಾರದ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ₹15,000 ಕೋಟಿ ಆ್ಯಂಟಿಲಿಯಾ ಮಾತ್ರವಲ್ಲ, ಅಂಬಾನಿ ಬಳಿ ಇದೆ 5ಕ್ಕೂ ಹೆಚ್ಚು ದುಬಾರಿ ಮನೆ
ಇದೇ ಭೂಮಿಯನ್ನು 2002ರಲ್ಲಿ 21 ಕೋಟಿ ರೂಪಾಯಿ ನೀಡಿ ಮುಕೇಶ್ ಅಂಬಾನಿ ಖರೀದಿಸಿದ್ದರು. ಸದ್ಯ ಈ ಪ್ರಕರಣ ದೀರ್ಘಕಾಲದಿಂದಲೂ ಸುಪ್ರೀಂಕೋರ್ಟ್‌ನಲ್ಲಿದೆ. ಒಂದು ವೇಳೆ ಅಂಬಾನಿ ಕುಟುಂಬದ ವಿರುದ್ಧ ತೀರ್ಪು ಪ್ರಕಟವಾದ್ರೆ ಅಂಟಿಲಿಯಾ ಕಟ್ಟಡವಿರೋ ಸ್ಥಳವನ್ನು ಮುಕೇಶ್ ಅಂಬಾನಿ ಖಾಲಿ ಮಾಡಬೇಕಾಗುತ್ತದೆ.
ಏಪ್ರಿಲ್ 3, 2025 ರಂದು ಬೆಳಗಿನ ಜಾವ 1:56 ರ ಸುಮಾರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಒಂದು ಮಹತ್ವದ ಘೋಷಣೆ ಮಾಡಿದರು. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡಿದ್ದರೆ, ವಿರುದ್ಧವಾಗಿ 232 ಮತಗಳು ಚಲಾಯಿತು ಎಂದು ಅವರು ಘೋಷಿಸಿದರು.
ಇದನ್ನೂ ಓದಿ: ಅಂಬಾನಿಯ 15 ಸಾವಿರ ಕೋಟಿಯ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಎಷ್ಟಿತ್ತು?
