ಖಾರ್ಗೋನ್‌ನಲ್ಲಿ ಮನೆ ಧ್ವಂಸಗೊಂಡವರಿಗೆ ಮನೆ: ಬುಲ್ಡೋಜರ್ ಬಳಕೆಗೆ ಸಿಎಂ ಸಮರ್ಥನೆ
- ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಹಿಂಸಾಚಾರ ಪ್ರಕರಣ
- ಮನೆ ಧ್ವಂಸಗೊಮಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು
- ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ
ಭೋಪಾಲ್: ರಾಮನವಮಿಯ ಶೋಭಾಯಾತ್ರೆಯ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮನೆಯನ್ನು ಕಳೆದುಕೊಂಡ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಭರವಸೆ ನೀಡಿದ್ದಾರೆ. ಖಾರ್ಗೋನ್‌ನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ಮಧ್ಯಪ್ರದೇಶದ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಲಾಗಿದೆ. ಬಡವರ ಮನೆಗೆ ಬೆಂಕಿ ಹಚ್ಚಲಾಗದೆ. ಬಡವರಿಗೆ ತೊಂದರೆ ನೀಡುವ ಇಂತಹ ದುಷ್ಕರ್ಮಿಗಳ ವಿರುದ್ಧ ಬುಲ್ಡೋಜರ್ ಚಲಾಯಿಸಬೇಕಾಯಿತು. ರಾಜ್ಯದಲ್ಲಿ ಇಂತಹ ಅಪರಾಧಿಗಳನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಚೌಹಾಣ್ ಹೇಳಿದರು.
ಆದರೆ ಮನೆ ಕಳೆದುಕೊಂಡವರು ಚಿಂತಿಸಬೇಕಾದ ಅಗತ್ಯವಿಲ್ಲ. ಮಾಮಾ (ಶಿವರಾಜ್ ಸಿಂಗ್ ಚೌಹಾಣ್) ಅವರ ಮನೆಯನ್ನು ನಿರ್ಮಿಸಿಕೊಡಲಿದ್ದಾರೆ ಎಂದು ಆಶ್ವಾಸನೆ ನೀಡಿದರು. ಖಾರ್ಗೋನ್‌ನಲ್ಲಿ ರಾಮನವಮಿಯಂದು ನಡೆದ ಹಿಂಸಾಚಾರದಲ್ಲಿ 4 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಗಲಭೆಯ ಹಿನ್ನೆಲೆಯಲ್ಲಿ ಕರ್ಫ್ಯೂ ಘೋಷಿಸಲಾಗಿತ್ತು. ಬಳಿಕ ಶಂಕಿತ ಆರೋಪಿಗಳ ಮನೆಯನ್ನು ಸರ್ಕಾರ ಬುಲ್ಡೋಜರ್ ಬಳಸಿ ಧ್ವಂಸ ಮಾಡಿತ್ತು.
MP Ram Navami Clash: ಹಿಂಸಾಚಾರಕ್ಕೂ ಮೊದಲೇ ಜೈಲಿನಲ್ಲಿದ್ದವರ ವಿರುದ್ಧ ಕೇಸ್, ಈಗ ಮನೆಯೂ ಧ್ವಂಸ!
ಯೋಗಿ ಆದಿತ್ಯನಾಥ್ (Yogi Adityanath) ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬುಲ್ಡೋಜರ್ ಬಾಬಾ ಎಂಬ ಹೆಸರು ಗಳಿಸಿದ್ದರು. ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬುಲ್ಡೋಜರ್‌ಗಳು ಬಿಜೆಪಿಯ ಚಿಹ್ನೆ ಕಮಲದಷ್ಟೇ ಪ್ರಸಿದ್ಧಿ ಪಡೆದಿದ್ದವು. ಈಗ ಪಕ್ಕದ ಮಧ್ಯಪ್ರದೇಶಕ್ಕೂ ಬುಲ್ಡೋಜರ್‌ಗಳ ಮೇಲಿನ ಪ್ರೀತಿ ಹಬ್ಬಿದಂತಿದೆ.
ಮಧ್ಯಪ್ರದೇಶದ ರೈಸನ್‌ನಲ್ಲಿ ನಡೆದ ಹಿಂಸಾಚಾರದ ನಂತರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಸರಕಾರವು ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರಕಾರದಿಂದ ಸೂಚನೆ ಬಂದ ನಂತರ ಸ್ಥಳೀಯ ಜಿಲ್ಲಾಡಳಿತ ಕ್ರಮ ಕೈಗೊಂಡು ಅಕ್ರಮ ಮನೆ, ಅಂಗಡಿಗಳನ್ನು ನೆಲಸಮಗೊಳಿಸಿದೆ.
ಯುಪಿ ಗೆದ್ದ ಬೆನ್ನಲ್ಲೇ ಮಧ್ಯಪ್ರದೇಶ ಗೆಲ್ಲಲು ಬಿಜೆಪಿ ರಣತಂತ್ರ!
ಇಲ್ಲಿಯವರೆಗೆ, ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರಕಾರವು ಅಪರಾಧಿಗಳು ನಿರ್ಮಿಸಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ತ್ವರಿತ ಕ್ರಮಕ್ಕೆ ಹೆಸರುವಾಸಿಯಾಗಿದೆ. ಈಗ ಶಿವರಾಜ್ ಸಿಂಗ್ ಚೌಹಾಣ್ ಅವರ 'ಬುಲ್ಡೋಜರ್ ಮಾಮ'(Bulldozer Mama) ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ. ಈ ಹೆಸರಿನೊಂದಿಗೆ ಅಭಿನಂದಿಸುವ ಪೋಸ್ಟರುಗಳನ್ನೂ ಇವರ ಪಕ್ಷದ ಬೆಂಬಲಿಗರು ಅಲ್ಲಲ್ಲಿ ಹಾಕಿದ್ದಾರೆ. ಶಿಯೋಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದ ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಾದ ಮೊಹ್ಸಿನ್, ರಿಯಾಜ್ ಮತ್ತು ಸೆಹ್ವಾಜ್ ಅವರ ಅಕ್ರಮ ಮನೆಗಳನ್ನು ಸರಕಾರ ನೆಲಸಮಗೊಳಿಸಿದೆ.