Asianet Suvarna News Asianet Suvarna News

ಗ್ಯಾನವಾಪಿಯಲ್ಲಿ ಶಿವ ಮಂದಿರ ಕಟ್ಟುವ ದಿನ ದೂರವಿಲ್ಲ, ಮುಸ್ಲಿಂ ಅರ್ಜಿ ವಜಾ ಬೆನ್ನಲ್ಲೇ ವಕೀಲರ ಹೇಳಿಕೆ!

ಗ್ಯಾನವಾಪಿ ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಲು ಕೋರಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಯೋಗ್ಯ ಎಂದು ಕೋರ್ಟ್ ಹೇಳಿದೆ. ಇದರ ವಿರುದ್ಧ ಸಲ್ಲಿಕೆಯಾಗಿದ್ದ ಮುಸ್ಲಿಂ ಅರ್ಜಿಯನ್ನು ಅಲಹಬಾಬಾದ್ ಕೋರ್ಟ್ ತರಿಸ್ಕರಿಸಿದೆ. ಇದರ ಬೆನ್ನಲ್ಲೇ  ಹಿಂದೂ ಮಹಿಳೆಯರ ಪರ ವಾದ ಮಂಡಿಸುತ್ತಿರುವ ವಕೀಲರ ಹೇಳಿಕೆ ವೈರಲ್ ಆಗಿದೆ.

will construct a grand Shiv temple in gyanvapi says advocate after Allahabad HC upholding maintainability suit ckm
Author
First Published May 31, 2023, 6:20 PM IST

ಅಲಬಾಹಾದ್(ಮೇ.31): ಗ್ಯಾನವಾಪಿ ಮಸೀದಿ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ತಿರಸ್ಕರಿಸು ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.  ಅಂಜುಮನ್ ಇಂತೆಜಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ಹಿಂದೂ ಸಮುದಾಯಕ್ಕೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪರ ಅರ್ಜಿಯನ್ನು ತರಿಸ್ಕರಿಸಿದ ಬೆನ್ನಲ್ಲೇ ಹಿಂದೂಗಳ ಪರ ವಾದ ಮಂಡಿಸುತ್ತಿರುವ ವಕೀಲ ಹರಿ ಶಂಕರ್ ಜೈನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕಾಶಿ ವಿಶ್ವನಾಥ ಮಂದಿರ ಒಂದು ಭಾಗವನ್ನು ಮಸೀದಿಯನ್ನಾಗಿ ಮಾಡಲಾಗಿದೆ. ಆದರೆ ಇದೇ ಜಾಗದಲ್ಲಿ ಭವ್ಯ ಶಿವ ದೇವಸ್ಥಾನ ಕಟ್ಟುವ ದಿನ ದೂರವಿಲ್ಲ ಎಂದು ಹರಿ ಶಂಕರ್ ಜೈನ್ ಹೇಳಿದ್ದಾರೆ.

ಕಾಶಿ ವಿಶ್ವನಾಥ ಮಂದಿರ ಒಂದು ಭಾಗ ಕೆಡವಿ ಅದೇ ಗೋಡೆಯಲ್ಲಿ ಗ್ಯಾನವಾಪಿ ಮಸೀದಿ ನಿರ್ಮಿಸಲಾಗಿದೆ. ಇದು ಸತ್ಯ. ಇದೀಗ ಈ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎತ್ತಿಹಿಡಿದೆ. ಇಷ್ಟೇ ಅಲ್ಲ ಇದರ ವಿರುದ್ಧ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಗ್ಯಾನವಾಪಿ ಮಸೀದಿ ಜಾಗದಲ್ಲೇ ಭವ್ಯ ಶಿವ ಮಂದಿರ ಕಟ್ಟುವ ದಿನ ದೂರವಿಲ್ಲ ಅನ್ನೋ ವಿಶ್ವಾಸವಿದೆ ಎಂದು ಹರಿ ಶಂಕರ್ ಜೈನ್ ಹೇಳಿದ್ದಾರೆ.

ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮುಸ್ಲಿಂ ಸಮಿತಿ ವಾರಣಾಸಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಈ ಅರ್ಜಿಯಲ್ಲಿ ಐವರು ಹಿಂದೂಗಳು ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು. ಯಥಾಸ್ಥಿತಿ ಕಾಪಾಡಲು ಹಿಂದೂಗಳ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಲಾಗಿತ್ತು. ಆದರೆ 2022ರ ಸೆಪ್ಟೆಂಬರ್ 12 ರಂದು ವಾರಣಾಸಿ ಕೋರ್ಟ್, ಮುಸ್ಲಿಮರ ಈ ಅರ್ಜಿಯನ್ನು ತರಿಸ್ಕರಿಸಿತ್ತು. 

 

 

ಇದರ ವಿರುದ್ಧ ಮುಸ್ಲಿಂ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಕೂಡ ಮುಸ್ಲಿಂ ಅರ್ಜಿಯನ್ನು ತಿರಸ್ಕರಿಸಿದೆ. ಆದರೆ ಇದರ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಮುಸ್ಲಿಂ ಸಮಿತಿ ಹೇಳಿದೆ. ಇದು ಹಿಂದೂಗಳ ಗೆಲುವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ಮುಸ್ಲಿಂ ಸಮಿತಿ ಹೇಳಿದೆ.

ಜ್ಞಾನವಾಪಿ ಕುರಿತಾದ ಎಲ್ಲಾ ಕೇಸ್‌ಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ವಾರಣಾಸಿ ಕೋರ್ಟ್‌ ನಿರ್ಧಾರ!

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಗ್ಯಾನವ್ಯಾಪಿ ಮಸೀದಿ ಹಿಂದೆ ದೇಗುಲವೇ ಆಗಿತ್ತು. ಆದರೆ 1969ರಲ್ಲಿ ದೇಗುಲವನ್ನು ಒಡೆದು ಔರಂಗಜೇಬ್‌ ಮಸೀದಿ ನಿರ್ಮಿಸಿದ್ದ. ಮಸೀದಿ ಆವರಣದ ಗೋಡೆಯಲ್ಲಿ ಶೃಂಗಾರ ಗೌರಿ ಮುಂತಾದ ಹಿಂದು ದೇವರ ವಿಗ್ರಹಗಳು ಈಗಲೂ ಇವೆ. 1947ಕ್ಕೂ ಮುನ್ನ ಹಾಗೂ ನಂತರ ಶೃಂಗಾರಗೌರಿಗೆ ಹಿಂದೂಗಳಿಂದ ನಿತ್ಯ ಪೂಜೆ ನಡೆಯುತ್ತಿತ್ತು. 1993ರ ನಂತರ ವರ್ಷಕ್ಕೆ ಒಮ್ಮೆ ಮಾತ್ರ ಪೂಜೆಗೆ ಅವಕಾಶ ಸಿಗುತ್ತಿದೆ. ನಿತ್ಯ ಪೂಜೆಗೆ ಅವಕಾಶ ಕೊಡಬೇಕು ಎಂದು ಐವರು ಹಿಂದು ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಬಗ್ಗೆ ನ್ಯಾಯಾಲಯ ಸಮೀಕ್ಷೆ ನಡೆಸಲು ಸೂಚಿಸಿತ್ತು. ಮಸೀದಿಯಲ್ಲಿ ನಮಾಜ್‌ ಸಲ್ಲಿಸುವ ಮುನ್ನ ಮುಸಲ್ಮಾನರು ತಮ್ಮನ್ನು ಶುಚಿಗೊಳಿಸಿಕೊಳ್ಳುವ ನೀರಿನ ತೊಟ್ಟಿ‘ವಜೂಖಾನಾ’ ಬಳಿ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದರು. ಆದರೆ ಅದು ಶಿವಲಿಂಗವಲ್ಲ, ನೀರಿನ ಚಿಲುಮೆಯ ಒಂದು ತುಂಡು ಎಂದು ಮುಸ್ಲಿಮರು ವಾದಿಸಿದ್ದರು. ಈ ಮಧ್ಯೆ ಶಿವಲಿಂಗ ಪತ್ತೆಯಾದ ಸ್ಥಳ ರಕ್ಷಣೆಗೆ ಸುಪ್ರೀಂಕೋರ್ಚ್‌ ಸೂಚಿಸಿತ್ತು.

Follow Us:
Download App:
  • android
  • ios