Asianet Suvarna News Asianet Suvarna News

'ಹೆಂಡತಿಯ ಆಶೀರ್ವಾದ' ಮಂಗಳಮುಖಿಯನ್ನು ಮದುವೆಯಾದ ವಿವಾಹಿತ

ಒಡಿಶಾ: ವಿವಾಹಿತ ವ್ಯಕ್ತಿಯೊಬ್ಬ ಹೆಂಡತಿಯ ಸಮ್ಮತಿ ಪಡೆದು ಮಂಗಳಮುಖಿಯೊಬ್ಬರನ್ನು ವಿವಾಹವಾದ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ. ಈ ವಿಚಾರ ಈಗ ಕಾಲಹಂದಿ ಜಿಲ್ಲೆಯಲ್ಲಿ ಟಾಕ್ ಆಫ್ ದ ಟೌನ್ ಆಗಿದೆ.

Wifes Blessing, Married man from Odisha weds Trans woman in temple at Kalahandi akb
Author
First Published Sep 14, 2022, 3:52 PM IST

ಒಡಿಶಾ: ವಿವಾಹಿತ ವ್ಯಕ್ತಿಯೊಬ್ಬ ಹೆಂಡತಿಯ ಸಮ್ಮತಿ ಪಡೆದು ಮಂಗಳಮುಖಿಯೊಬ್ಬರನ್ನು ವಿವಾಹವಾದ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ. ಈ ವಿಚಾರ ಈಗ ಕಾಲಹಂದಿ ಜಿಲ್ಲೆಯಲ್ಲಿ ಟಾಕ್ ಆಫ್ ದ ಟೌನ್ ಆಗಿದೆ.

ಕಾಲಹಂದಿ ಜಿಲ್ಲೆಯ ನರ್ಲಾ ಬ್ಲಾಕ್‌ನ ಧುರ್ಕುಟಿ ಗ್ರಾಮದ ಮಂಗಳಮುಖಿ (Trans woman) ಮಹಿಳೆ ಸಂಗೀತಾ ಎಂಬುವವರು ಇದೇ ಗ್ರಾಮದ ಫಕೀರ್ ನಿಯಾಲ್ ಎಂಬ ವಿವಾಹಿತ ಯುವಕನನ್ನು ಆತನ ಪತ್ನಿ ಹಾಗೂ ಕುಟುಂಬಸ್ಥರ ಸಮ್ಮತಿಯ ಮೇರೆಗೆ ಮದುವೆಯಾಗಿದ್ದಾರೆ. 30 ವರ್ಷದ ಫಕೀರ್‌ಗೆ ಐದು ವರ್ಷದ ಹಿಂದೆ ಒಂದು ಮದುವೆಯಾಗಿದ್ದು, ಫಕೀರ್ ಹಾಗೂ ಪತ್ನಿ ಕುನಿ ದಾಂಪತ್ಯದಲ್ಲಿ ಒಂದು ಮಗು ಕೂಡ ಇದೇ ಈ ಮಧ್ಯೆ ಫಕೀರ್‌ಗೆ ಮಂಗಳಮುಖಿ ಸಂಗೀತಾ ಮೇಲೆ ಪ್ರೇಮಾಂಕುರವಾಗಿದೆ. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಕುಟುಂಬವನ್ನು ಒಪ್ಪಿಸುವುದೇ ಇವರಿಬ್ಬರಿಗೆ ದೊಡ್ಡ ಚಿಂತೆ ಆಗಿತ್ತು. ಈ ಮಧ್ಯೆ ಫಕೀರ್ ತನಗೆ ಮಂಗಳಮುಖಿ ಸಂಗೀತಾ ಮೇಲೆ ಪ್ರೀತಿ (Love) ಮೊಳಕೆಯಾಗಿರುವುದನ್ನು ತನ್ನ ಪತ್ನಿ (Wife) ಕುನಿಗೆ ಹೇಳಿದ್ದಾನೆ.

ಈ ವೇಳೆ ಆಕೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸುವ ಬದಲು ಸಮ್ಮತಿ ಸೂಚಿಸಿದ್ದಾರೆ. ಮಹಿಳೆಯರು ತಮ್ಮ ಪತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಪತಿಯ ವಿಚಾರದಲ್ಲಿ ವಿಶೇಷವಾಗಿ ಭಾರತೀಯ ಮಹಿಳೆಯರು ಸಾಕಷ್ಟು ಪೊಸೆಸಿವ್ (possessive) ಆಗಿರುತ್ತಾರೆ. ಆದಾಗ್ಯೂ ಕುನಿ ತನ್ನ ಗಂಡನಿಗೆ (Husband) ತಾನೇ ಮುಂದೆ ನಿಂತು ಇನ್ನೊಂದು ಮದುವೆಗೆ (Wedding) ಒಪ್ಪಿಗೆ ಸೂಚಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. 

ನಂತರ ನರ್ಲಾದಲ್ಲಿರುವ ಬೊಹುಛೋರಿ ದೇಗುಲದಲ್ಲಿ (Bohuchori temple) ಮಂಗಳಮುಖಿ ಸಮುದಾಯದ ಸಂಪ್ರದಾಯದಂತೆ ಫಕೀರಾ ಹಾಗೂ ಸಂಗೀತಾ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ಸ್ವತಃ ಫಕೀರ್ ಪತ್ನಿ ಹಾಜರಿದ್ದರು ಎಂದು ತಿಳಿದು ಬಂದಿದೆ. ಈ ನವ ದಂಪತಿಗೆ ಮಂಗಳಮುಖಿ ಸಂಘಟನೆಯಾದ ಕಾಮಿನಿ ಕಿನರ್ (Kamini Kinar) ಹಾಗೂ ಇತರರು ಆಶಿರ್ವಾದಿಸಿದ್ದಾರೆ. ಈಗ ಸಂಗೀತಾ ಕೂಡ ಫಕೀರ ಜೊತೆ ಫಕೀರ ಮನೆಯಲ್ಲಿ ಮೊದಲ ಪತ್ನಿಯ ಜೊತೆ ವಾಸ ಮಾಡುತ್ತಿದ್ದಾರೆ. ಫಕೀರನ ಕುಟುಂಬದವರು ನನ್ನನ್ನು ಸ್ವೀಕರಿಸಿರುವುದರಿಂದ ನನ್ನ ಬಯಕೆ ಈಡೇರಿದೆ.

Follow Us:
Download App:
  • android
  • ios