ಬೆಡ್ ರೂಂನಲ್ಲಿ ಪತಿ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ ಹೆಂಡತಿ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದು ಅತ್ತೆ ಓಡೋಡಿ ಬಂದರೂ ಮನೆಯೊಳಗೆ ಪ್ರವೇಶಕ್ಕೂ ಅವಕಾಶ ಸಿಗಲಿಲ್ಲ.
ಅಲಿಘಡ (ಜ.24) ಈಗ ಏನಿದ್ದರು ಸೋಶಿಯಲ್ ಮೀಡಿಯಾ ಜಮಾನ. ಮದುವೆ, ಹನಿಮೂನ್‌ನಲ್ಲಿ ಜೋಡಿಗಳು ಎಷ್ಟುು ಖುಷಿಯಾಗಿದ್ದಾರೆ ಅನ್ನೋದಕ್ಕಿಂತ ಸೋಶಿಯಲ್ ಮೀಡಿಯಾದಲ್ಲಿನ ಪ್ರಸೆನ್ಸ್ ಮುಖ್ಯವಾಗುತ್ತದೆ. ಲೈಕ್ಸ್, ಕಮೆಂಟ್ಸ್ ಎಷ್ಟಿದೆ ಅನ್ನೋದು ಅದಕ್ಕಿಂತ ಮುಖ್ಯ. ಇದೀಗ ಪತ್ನಿ ಹಾಗೂ ಪತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪತಿಯ ಎರಡೂ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಲಾಗಿದೆ. ಪತಿ ಮಂಚದಿಂದ ಏಳುವ ಹಾಗಿಲ್ಲ. ಕೈಗಳನ್ನು ಮೇಲಕ್ಕೆತ್ತಿ ಕಟ್ಟಿ ಹಾಕಲಾಗಿದೆ. ಕೆಲ ಗಂಟೆಗಳಲ್ಲಿ ಪತಿ ಸುಸ್ತಾಗಿದ್ದಾನೆ. ಇತ್ತ ಮಾಹಿತಿ ತಿಳಿದು ಪತಿಯ ತಾಯಿ ಸ್ಥಳಕ್ಕೆ ಆಗಮಿಸಿದರೂ ಪತ್ನಿ ಕ್ಯಾರೆ ಎಂದಿಲ್ಲ. ಈ ಘಟನೆ ಉತ್ತರ ಪ್ರದೇಶದ ಅಲಿಘಡದ ಹಮೀದ್‌ಪುರ್ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?
ಈ ವೈರಲ್ ವಿಡಿಯೋದಲ್ಲಿ ಪತಿ ಪ್ರದೀಪ್ ಮಂಚದ ಮೇಲೆ ಮಲಗಿದ್ದಾನೆ. ಆತನ ಕೈಗಳನ್ನು ಪತ್ನಿ ಸೋನಿ ಮಂಚಕ್ಕೆ ಕಟ್ಟಿ ಹಾಕಿದ್ದಾರೆ. ಕಾರಣ ಪತಿ ಪದೇ ಪದೇ ಮದ್ಯ ಸೇವಿಸುತ್ತಾರೆ. ಮದ್ಯ ಸೇವಿಸಿ ಹಲ್ಲೆ ಮಾಡುತ್ತಾರೆ, ಕಿರುಕುಳ ನೀಡುತ್ತಾರೆ. ಹಲವು ತಿಂಗಳಿನಿಂದ ಸಹಿಸಿಕೊಂಡಿದ್ದೇನೆ. ಆದರೆ ಇನ್ನು ಸಾಧ್ಯವಿಲ್ಲ ಎಂದು ಪತ್ನಿ ಮದ್ಯ ಸೇವಿಸಿ ಬಂದು ಮಲಗಿದ್ದ ವೇಳೆ ಪತಿಯ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ್ದೇನೆ ಎದು ಪತ್ನಿ ಸೋನಿ ಆರೋಪಿಸಿದ್ದಾಳೆ.
ಸ್ಥಳಕ್ಕೆ ಧಾವಿಸಿದ ಪತಿಯ ತಾಯಿ
ಮಾಹಿತಿ ತಿಳಿದು ಪತಿ ತಾಯಿ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಗನ ಕಟ್ಟಿದ ಕೈಗಳನ್ನು ಬಿಡಿಸಲು ಪ್ರಯತ್ನಿಸಿದ್ದಾಳೆ. ಈ ವೇಳೆ ಆಕ್ರೋಶಗೊಂಡ ಪತ್ನಿ, ಗಂಡನ ಕೈಗಳಿಗೆ ಕಟ್ಟಿದ ಹಗ್ಗ ಬಿಚ್ಚಲು ಅವಕಾಶ ನೀಡುವುದಿಲ್ಲ. ನೀವು ಪೊಲೀಸ್ ಅಥವಾ ಯಾರನ್ನೇ ಕರೆಯಿರಿ. ನಾನು ಹೆದರುವುದಿಲ್ಲ ಎಂದು ಗದರಿಸಿದ್ದಾಳೆ. ಏನೇ ಮಾಡಿದರೂ ಅತ್ತೆಗೆ ಕೋಣೆಗೆ ಪ್ರವೇಶ ನೀಡಲು ನಿರಾಕರಿಸಿದ್ದಾಳೆ. ಪರಿಣಾಮ ರಂಪಾಟ, ಚೀರಾಟ, ಹಾರಾಟಗಳು ಶುರುವಾಗಿದೆ. ಹೀಗಾಗಿ ಸ್ಥಳೀಯರು ಆಗಮಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರದೀಪ್ ತಾಯಿ
ಸೊಸೆಯ ಆಕ್ರೋಶ ಹಾಗೂ ದರ್ಪ ನೋಡಿದ ಪ್ರದೀಪ್ ತಾಯಿ ಬೇರೆ ದಾರಿ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿಡಿಯೋವನ್ನು ಪೊಲೀಸರಿಗೆ ತೋರಿಸಿ ದೂರು ನೀಡಿದ್ದಾಳೆ. 4 ವರ್ಷದ ಹಿಂದೆ ನಮ್ಮ ಮಗ ಪ್ರದೀಪ್ ಸೋನಿಯನ್ನು ಮದುವೆಯಾಗಿದ್ದಾನೆ. ಆದರೆ ಕಳೆದರೆಡು ವರ್ಷದಿಂದ ಸೋನಿ ತನ್ನ ಮಗನಿಗೆ ಕಿರುಕುಳ ನೀಡುತ್ತಿದ್ದಾಳೆ. ಪಿಸ್ತೂಲ್ ತೋರಿಸಿ ಬೆದರಿಕೆ ಹಾಕುತ್ತಿದ್ದಾಳೆ. ಇದೀಗ ಕೈಗಳನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಯವಿಟ್ಟು ಮಗನ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರ ಆಗಮಿಸಿದ್ದಾರೆ. ಬಳಿಕ ಸೋನಿಗೆ ಖಡಕ್ ವಾರ್ನಿಂಗ್ ನೀಡಿ ಪ್ರದೀಪ್ ಕಟ್ಟಿದ ಕೈಗಳನ್ನು ಬಿಚ್ಚಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸದ್ಯ ಪರಿಸ್ಥಿತಿ ಪೊಲೀಸ್ ಠಾಣೆ ಮೆಟ್ಟೇಲೇರಿದೆ. ಪ್ರದೀಪ್ ಹಾಗೂ ಆತನ ತಾಯಿ ಪತ್ನಿ ಸೋನಿ ವಿರುದ್ದ ದೂರು ನೀಡಿದ್ದಾರೆ.ಇತ್ತ ಪತ್ನಿ ಸೋನಿ, ಪತಿಯ ಮದ್ಯ ಸೇವನೆ ಅಭ್ಯಾಸದಿಂದ ತನ್ನ ಜೀವನವೇ ಅಯೋಮಯವಾಗಿದೆ ಎಂದು ದೂರಿದ್ದಾಳೆ.


