ಕಸಿನ್ ಜೊತೆ ಕದ್ದು ಮುಚ್ಚಿ ಪ್ರೀತಿ, ಮದುವೆಯಾದ ನಾಲ್ಕೇ ದಿನಕ್ಕೆ ಗಂಡನಿಗೆ ಗತಿ ಕಾಣಿಸಿದ ಪತ್ನಿ!

ಕಿಸನ್ ಜೊತೆ ಗಾಢ ಪ್ರೀತಿಯಲ್ಲಿರುವಾಗಲೇ ಕುಟುಂಬಸ್ಥರು ಬೇರೊಬ್ಬನ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆಯಾಗಿ ಮನೆಗೆ ಬಂದ ಪತ್ನಿ ನಾಲ್ಕೇ ದಿನಕ್ಕೆ ಗಂಡನಿಗೆ ಮುಹೂರ್ತ ಫಿಕ್ಸ್ ಮಾಡಿದ ಭಯಾನಕ ಘಟನೆ ನಡೆದಿದೆ.

Wife kills Husband in just 4 days after marriage in Gujarat truth shocks police ckm

ಗಾಂಧಿನಗರ(ಡಿ.15) ಪ್ರೀತಿ, ಮದುವೆ, ಸಂಬಂಧಗಳ ಕುರಿತು ಹಲವು ಭಯಾನಕ ಘಟನೆಗಳು ನಡೆದಿದೆ. ಇದೀಗ ಮದುವೆಯಾದ ಖುಷಿಯಲ್ಲಿದ್ದ ಭವಿಕ್ ಅನ್ನೋ ಯುವಕ ನಾಲ್ಕೇ ದಿನಕ್ಕೆ ಶವವಾಗಿ ಪತ್ತೆಯಾಗಿದ್ದಾನೆ. ಈತನ ಸಾವಿನ ಕಾರಣ ಹುಡುಕಿ ಹೋದ ಪೊಲೀಸರಿಗೆ ಅಚ್ಚರಿ ಮಾಹಿತಿ ಬಯಲಾಗಿದೆ. ಮದುವೆಯಾಗಿ ಬಂದ ಪತ್ನಿ ನಾಲ್ಕೇ ದಿನಕ್ಕೆ ಸುಪಾರಿ ಕೊಟ್ಟು ಪತಿಯನ್ನು ಮುಗಿಸಿದ ಘಟನೆ ಗುಜರಾತ್‌ನ ಗಾಂಧಿ ನಗರದಲ್ಲಿ ನಡೆದಿದೆ. 

ಮದುವೆಯಾದ ಖುಷಿ ಕೇವಲ ನಾಲ್ಕೇ ದಿನಕ್ಕೆ ಅಂತ್ಯಗೊಂಡ ಘಟನೆ ನಡೆದಿದೆ. ಯಾವಾ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲ ಈಕತೆ. ಅಹಮ್ಮದಾಬಾದ್‌ನ ವತ್ವಾದ 24 ವರ್ಷದ ಭವಿಕ್ ಹಾಗೂ ಕೋಟೇಶ್ವರದ ಪಾಯಲ್ ಮದುವೆ ಡಿಸೆಂಬರ್ 10ಕ್ಕೆ ಅದ್ದೂರಿಯಾಗಿ ನಡೆದಿದೆ. ಇದು ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆಯಿಂದ ಮಾಡಿದ ಅರೇಂಜ್ ಮ್ಯಾರೇಜ್. ಹೆಣ್ಣು ನೋಡಿ ಇಬ್ಬರಿಗೂ ಒಕೆಯಾಗಿ ಮದುವೆಯಾಗಿದೆ.

ಮದುವೆಯಾದ 2ನೇ ದಿನಕ್ಕೆ ಪತ್ನಿ ಪಾಯಲ್‌ಗೆ ಈ ಮದುವೆ ಇಷ್ಟವಿರಲಿಲ್ಲ ಅನ್ನೋ ಸೂಚನೆ ಪತಿ ಭವಿಕ್‌ಗೆ ಸಿಕ್ಕಿದೆ. ಆದರೆ ಮದುವೆಯಾಗಿದೆ. ಹೊಂದಾಣಿಕೆಯಿಂದ ಹೋಗಬೇಕು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದ ಭವಿಕ್ ಕೊನೆಗೆ ದುರಂತ ಅಂತ್ಯಕಂಡಿದ್ದಾನ. ಡಿಸೆಂಬರ್ 10ಕ್ಕೆ ಮದುವೆಯಾದರೆ, ಪತ್ನಿ ಪಾಯಲ್ ಡಿಸೆಂಬರ್ 12ಕ್ಕೆ ಶಾಸ್ತ್ರದ ಹೆಸರು ಹೇಳಿ ತವರು ಮನೆಗೆ ತೆರಳಿದ್ದಾಳೆ. ಹೀಗಾಗಿ ಡಿಸೆಂಬರ್ 13ರಂದು ಪಾಯಲ್ ಕರೆದುಕೊಂಡು ಬರಲು ಭವಿಕ್ ತೆರಳಿದ್ದಾನೆ.

8 ವರ್ಷದ ಪ್ರೀತಿ, 15 ದಿನ ಹಿಂದಷ್ಟೇ ಮದುವೆ, ಹನಿಮೂನ್ ಮುಗಿಸಿ ಬಂದ ನವದಂಪತಿ ದುರಂತ ಅಂತ್ಯ!

ಪತ್ನಿಯನ್ನು ಕರೆದುಕೊಂಡು ಬರಲು ಮನೆಯಿಂದ ಹೊರಡುವಾಗ ಭವಿಕ್ ತನ್ನ ತಂದೆ  ಕನ್ಹಯ್ಯಲಾಲ್ ಜೊತೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾನೆ. ಪತ್ನಿ ಪಾಯಲ್‌ಗೆ ಈ ಮದುವೆ ಇಷ್ಟವಿಲ್ಲದಂತೆ ಕಾಣಿಸುತ್ತಿದೆ. ಆಕೆಯ ಮಾತುಗಳು, ನಡತೆ ಎಲ್ಲವೂ ಸ್ಪಷ್ಟಪಡಿಸುತ್ತಿದೆ. ಆಕೆ ಒತ್ತಾಯದಿಂದ ಮದುವೆಯಾದಂತೆ ಕಾಣಿಸುತ್ತಿದೆ ಎಂದಿದ್ದಾನೆ. ಆದರೆ ಮಗನಿಗೆ ಧೈರ್ಯ ತುಂಬಿದ್ದ ತಂದೆ, ಪತ್ನಿಯನ್ನು ಕರೆದುಕೊಂಡು ಬಂದು ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದಾನೆ.

ತಂದೆ ಮಾತಿನಂತೆ ಸ್ಕೂಟರ್ ಮೂಲಕ ಪಾಯಲ್ ಕರೆದುಕೊಂಡು ಬರಲು ತೆರಳಿದ ಭವಿಕ್ ನಾಪತ್ತೆಯಾಗಿದ್ದಾನೆ. ಅತ್ತ ಪತ್ನಿಯ ಮನೆ ತಲುಪಿಲ್ಲ, ಇತ್ತ ಮನೆಗೂ ವಾಪಸ್ ಬಂದಿಲ್ಲ. ಹೀಗಾಗಿ ಹುಡುಕಾಟ ಆರಂಭಗೊಂಡಿತ್ತು. ಭವಿಕ್ ಆಪ್ತರು, ಗೆಳೆಯರ ಬಳಗ ತೀವ್ರ ಹುಡುಕಾಟ ನಡೆಸಿದಾಗ ಕೋಟೇಶ್ವರ್ ದೇವಸ್ಥಾನದ ಬಳಿಕ ಸ್ಕೂಟರ್ ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯರಲ್ಲಿ ಮಾಹಿತಿ ಕೇಳಿದಾಗ ಭವಿಕ್‌ಗೆ ಅಪಘಾತವಾಗಿರುವ ಮಾಹಿತಿ ಸಿಕ್ಕಿದೆ.

ಇತ್ತ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಇನ್ನೋವಾ ಕಾರೊಂದು ಭವಿಕ್‌ಗೆ ಡಿಕ್ಕಿಯಾಗಿರುವ ಮಾಹಿತಿ ಸಿಕ್ಕಿದೆ. ಭವಿಕ್ ಆಸ್ಪತ್ರೆ ಸೇರಿಸುವುದಾಗಿ ಕರೆದುಕೊಂಡು ಹೋಗಿರುವುದಾಗಿ ಹೇಳಿದ್ದಾರೆ.ಈ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಇದು ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತ ಅನ್ನೋದು ಬಯಲಾಗಿದೆ. ಕಾರಣವೇನು ಅನ್ನೋದು ಹುಡುಕಿದಾಗ ಪತ್ನಿ ಪಾಯಲ್ ಹೆಸರು ಪತ್ತೆಯಾಗಿದೆ. ತನ್ನ ಸಂಬಂಧಿ ಜೊತೆ ಪ್ರೀತಿಯಲ್ಲಿದ್ದ ಪಾಯಲ್‌‌ನ ಭವಿಕ್ ಜೊತೆ ಮದುವೆ ಮಾಡಿಸಲಾಗಿತ್ತು. ಯಾವುದೇ ಮಾಹಿತಿ ಗೊತ್ತಿರದ ಭವಿಕ್ ಸಂಭ್ರಮದಿಂದ ಮದುವೆಯಾಗಿದ್ದಾನೆ. ಆದರೆ ತನ್ನ ಪ್ರೀತಿಯ ಕಸಿನ್ ಜೊತೆ ಪಲಾಯನ ಮಾಡಲು ಭವಿಕ್ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಭವಿಕ್ ಕತೆ ಮುಗಿಸಿದ್ದಾಳೆ. 

ಆಪ್ತರಿಗೆ ಒಂದಷ್ಟು ದುಡ್ಡು ನೀಡಿ ಪ್ಲಾನ್ ಮಾಡಿದ್ದಾಳೆ. ಅಪಘಾತ ಮಾಡಿ ಭವಿಕ್ ಕತೆ ಮುಗಿಸಲು ಐಡಿಯಾ ಕೊಟ್ಟಿದ್ದಾಳೆ. ಇದರಂತೆ ಎಲ್ಲವೂ ಮಾಡಿ ಭವಿಕ್ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾಳೆ. ವಿಚಾರಣೆ ವೇಳೆ ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ.
 

Latest Videos
Follow Us:
Download App:
  • android
  • ios