ಬಾಯ್ಕಾಟ್‌ ಟರ್ಕಿ ಅಭಿಯಾನದ ಜೊತೆ ನಟ ಅಮೀರ್‌ ಖಾನ್‌ ಹೆಸರು ಥಳಕು ಹಾಕಿಕೊಂಡಿ ಬೆನ್ನಲ್ಲೇ, ಅಮೀರ್‌ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಜಾಲತಾಣಗಳ ಮುಖಪುಟದಲ್ಲಿ ಇದ್ದಕ್ಕಿದ್ದಂತೆ ಭಾರತದ ರಾಷ್ಟ್ರಧ್ವಜದ ಚಿತ್ರ ಪ್ರದರ್ಶಿಸಿದೆ. 

ನವದೆಹಲಿ (ಮೇ.18): ಬಾಯ್ಕಾಟ್‌ ಟರ್ಕಿ ಅಭಿಯಾನದ ಜೊತೆ ನಟ ಅಮೀರ್‌ ಖಾನ್‌ ಹೆಸರು ಥಳಕು ಹಾಕಿಕೊಂಡಿ ಬೆನ್ನಲ್ಲೇ, ಅಮೀರ್‌ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಜಾಲತಾಣಗಳ ಮುಖಪುಟದಲ್ಲಿ ಇದ್ದಕ್ಕಿದ್ದಂತೆ ಭಾರತದ ರಾಷ್ಟ್ರಧ್ವಜದ ಚಿತ್ರ ಪ್ರದರ್ಶಿಸಿದೆ. 

ಸಂಸ್ಥೆ ತನ್ನ ಅಧಿಕೃತ ಲಾಂಛನ ಚಿತ್ರ ತೆಗೆದು ಅಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರ ಹಾಕಿದೆ. ಸಂಸ್ಥೆಯು ತನ್ನ ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಾಗ್ರಾಮ್‌ ಖಾತೆಗಳ ಮುಖಪುಟ ಬದಲಿಸಿದೆ. 

ಆಪರೇಷನ್‌ ಸಿಂದೂರಕ್ಕೆ ತಡವಾಗಿ ಬೆಂಬಲ ಘೋಷಿಸಿದ್ದಕ್ಕೆ ಮತ್ತು ಟರ್ಕಿಯ ಅಧ್ಯಕ್ಷರ ಜೊತೆಗಿನ ಅಮಿರ್‌ ಹಳೆಯ ಫೋಟೊ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಅಮೀರ್‌ರ ಹೊಸ ಚಿತ್ರ ಬಹಿಷ್ಕರಿಸಬೇಕು ಎಂದು ಕರೆಕೊಟ್ಟಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿದ್ದ Aamir Khan! ಈ ಪಾಕಿಸ್ತಾನ ಬೆಂಬಲಿತ ರಾಷ್ಟ್ರಕ್ಕೆ ಕಾಲಿಡಲ್ಲ ಎಂದ ಗಾಯಕ

ಸೀತಾರೆ ಜಮೀನ್ ಪರ್ ಬಹಿಷ್ಕಾರದ ಬಿಸಿ:

 ಸೀತಾರೆ ಜಮೀನ್ ಪರ್ ಬಹಿಷ್ಕಾರ ಕರೆಗಳ ನಡುವೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಪ್ರೊಫೈಲ್ ಚಿತ್ರವನ್ನು ಭಾರತೀಯ ಧ್ವಜಕ್ಕೆ ಬದಲಾಯಿಸುವುದ್ದಾರೆ ಎನ್ನಲಾಗಿದೆ.

'ಸೀತಾರೆ ಜಮೀನ್ ಪರ್' ಬಹಿಷ್ಕಾರದ ಕರೆಗಳ ನಡುವೆ ಆಮೀರ್ ಖಾನ್ ಪ್ರೊಡಕ್ಷನ್ಸ್ ಪ್ರೊಫೈಲ್ ಚಿತ್ರವನ್ನು ಭಾರತೀಯ ಧ್ವಜಕ್ಕೆ ಬದಲಾಯಿಸಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ, ಭಾರತೀಯ ಸೇನೆಗೆ ಆಮಿರ್ ಅವರ ಬೆಂಬಲವನ್ನು ಎತ್ತಿ ತೋರಿಸುತ್ತಾರೆ ಎಂದಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು, ಜೂನ್ 20 ರಂದು ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿದೆ.