Asianet Suvarna News Asianet Suvarna News

ಭಾರತಕ್ಕೆ ನೆರವು ನಿಲ್ಲಿಸಿ ಎಂದ ಯುಕೆ ಪತ್ರಕರ್ತೆ; ಕೊಹಿನೂರ್ ವಜ್ರ, 45 ಟ್ರಿಲಿಯನ್ ಡಾಲರ್ ವಾಪಸ್‌ ಕೊಡಿ ಎಂದ ನೆಟ್ಟಿಗರು

ನಾವು ನಮ್ಮ ಹಣವನ್ನು ಮರಳಿ ಪಡೆಯುವ ಸಮಯ ಎಂದು ಯುಕೆ ಪತ್ರಕರ್ತೆ ಟ್ವೀಟ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯರು ಕೊಹಿನೂರ್ ವಜ್ರ ಹಾಗೂ 45 ಟ್ರಿಲಿಯನ್ ಡಾಲರ್ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. 

why chandrayaan 3 landing made 45 trillion dollar trend on social media ash
Author
First Published Aug 24, 2023, 7:50 PM IST

ನವದೆಹಲಿ (ಆಗಸ್ಟ್ 24, 2023): ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಕಾಲಿಟ್ಟಿರುವುದು ಅಂತಾರಾಷ್ಟ್ರಯ ಮಟ್ಟದಲ್ಲಿ ಗಮನ ಸೆಳೆದಿದೆ. ಇದುವರೆಗೆ ಅಸಾಧ್ಯವೆಂದು ಭಾವಿಸಿದ್ದನ್ನು ಸಾಧಿಸಿದ್ದಕ್ಕಾಗಿ ಅನೇಕ ದೇಶಗಳು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುತ್ತವೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ, ಯುಕೆ ಭಾರತಕ್ಕೆ ಕಳುಹಿಸುವ ನೆರವಿನ ಸುತ್ತ ಪತ್ರಕರ್ತರೊಬ್ಬರ ಕಾಮೆಂಟ್‌ ಚರ್ಚೆಯನ್ನು ಪ್ರಾರಂಭಿಸಿದೆ.

ಭಾರತ ಸುಧಾರಿತ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಂದಿರುವುದರಿಂದ ಯುಕೆ ನೆರವು ಕಳುಹಿಸಬಾರದು ಎಂದು ಸೋಫಿ ಕೊರ್ಕೊರಾನ್ ಎಂಬ ಪತ್ರಕರ್ತೆ X (ಹಿಂದೆ ಟ್ವಿಟ್ಟರ್‌) ನಲ್ಲಿನ ಪೋಸ್ಟ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. "ನಾವು ನಮ್ಮ ಹಣವನ್ನು ಮರಳಿ ಪಡೆಯುವ ಸಮಯ" ಎಂದೂ ಅವರು ಹೇಳಿದರು. ಈ ಪೋಸ್ಟ್‌ ಶೀಘ್ರದಲ್ಲೇ ವೈರಲ್‌ ಆಗಿದ್ದು, ಸಾಕಷ್ಟು ರೀಪೋಸ್ಟ್‌ ಹಾಗೂ ಕಾಮೆಂಟ್‌ಗಳಿಗೆ ಸಾಕ್ಷಿಯಾಗಿದೆ. 

ಇದನ್ನು ಓದಿ; Chandrayaan - 3 ಯಶಸ್ಸಿಗಾಗಿ ಉಪವಾಸ ಮಾಡಿದ ಪಾಕ್‌ ಮಹಿಳೆ ಸೀಮಾ ಹೈದರ್‌

ಪತ್ರಕರ್ತೆಯ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು, ಯುಕೆ ಭಾರತದಿಂದ ಲೂಟಿ ಮಾಡಿದ ಹಣವನ್ನು ಹಿಂದಿರುಗಿಸಬೇಕೆಂದು ತಕ್ಷಣ ರಿಪ್ಲೈ ಮಾಡಿದ್ದಾರೆ. ಅಲ್ಲದೆ, ಈ ಮೊತ್ತವು 45 ಟ್ರಿಲಿಯನ್ ಡಾಲರ್‌ ಎಂದೂ ಅವರು ಹೇಳಿಕೊಂಡರು. ನಂತರ, ಶೀಘ್ರದಲ್ಲೇ X ನಲ್ಲಿ ಟ್ರೆಂಡ್‌ಗೆ '45 ಟ್ರಿಲಿಯನ್' ಕಾರಣವಾಯಿತು. 1765 ರಿಂದ 1938 ರ ಅವಧಿಯಲ್ಲಿ ಬ್ರಿಟನ್ ಭಾರತದಿಂದ ಸುಮಾರು 45 ಟ್ರಿಲಿಯನ್ ಡಾಲರ್‌ ಮೊತ್ತವನ್ನು ಲೂಟಿ ಮಾಡಿದೆ ಎಂದು ಅರ್ಥಶಾಸ್ತ್ರಜ್ಞ ಉತ್ಸಾ ಪಟ್ನಾಯಕ್ ಮತ್ತು ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಸಂಶೋಧನೆಯ ನಂತರ ಈ ಅಂಕಿ ಅಂಶವು ಮೊದಲು ಬೆಳಕಿಗೆ ಬಂದಿದೆ.

ಇದು ನಿಜಕ್ಕೂ ದೊಡ್ಡ ಮೊತ್ತವಾಗಿದ್ದು, ಈ ಮೊತ್ತವು ಇಂದು UK ಯ GDPಗಿಂತ 15 ಪಟ್ಟು ಹೆಚ್ಚು ಎಂಬುದು ಗಮನಹರಿಸಬೇಕಾದ ವಿಚಾರ. ಉತ್ಸಾ ಪಟ್ನಾಯಕ್ ಅವರು ತೆರಿಗೆ ಮತ್ತು ವ್ಯಾಪಾರದ ಕುರಿತು ಸುಮಾರು ಎರಡು ಶತಮಾನಗಳ ವಿವರವಾದ ಡೇಟಾವನ್ನು ವಿಶ್ಲೇಷಿಸಿದ ನಂತರ ಈ ಮೊತ್ತವನ್ನು ಲೆಕ್ಕ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Chandrayaan - 3: 'ಶಶಿ' ಸ್ಪರ್ಶಿಸಿದ ಇಸ್ರೋ: ವಿಜ್ಞಾನಿಗಳಿಗೆ ಅಭಿನಂದಿಸಲು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

ಈ ವರ್ಷದ ಮಾರ್ಚ್‌ನಲ್ಲಿ ದಿ ಗಾರ್ಡಿಯನ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ, ಭಾರತವು ತನಗೆ ಬೇಡವೆಂದು ಹೇಳಿದ ನಂತರ ಭಾರತಕ್ಕೆ ಯುಕೆ ನೀಡುತ್ತಿದ್ದ ನೆರವನ್ನು 2015 ರಲ್ಲಿ ನಿಲ್ಲಿಸಬೇಕಿತ್ತು. ಆದರೆ 2016 ಮತ್ತು 2021 ರ ನಡುವೆ ಯುಕೆ ಸುಮಾರು 2.3 ಬಿಲಿಯನ್‌ ಪೌಂಡ್‌ (23,000 ಕೋಟಿ ರೂ.) ಭಾರತಕ್ಕೆ ನೆರವು ನೀಡಿದೆ ಎಂದು ಇಂಡಿಪೆಂಡೆಂಟ್ ಕಮಿಷನ್ ಫಾರ್ ಏಡ್ ಇಂಪ್ಯಾಕ್ಟ್‌ನ ವಿಮರ್ಶೆಯು ಹೇಳಿದೆ. ಮುಖ್ಯವಾಗಿ ಸಣ್ಣ ಕಂಪನಿಗಳಿಗೆ ಸರ್ಕಾರ ನಡೆಸುವ ಬ್ರಿಟಿಷ್ ಇಂಟರ್‌ನ್ಯಾಶನಲ್ ಇನ್ವೆಸ್ಟ್‌ಮೆಂಟ್‌ನಿಂದ ಸಾಲಗಳನ್ನು ಒದಗಿಸುವುದು ಇದರಲ್ಲಿ ಸೇರಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್‌ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ

Follow Us:
Download App:
  • android
  • ios