ಜಿನೆವಾ(ಜ.03): ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ಎರಡು ಲಸಿಕೆಗೆ ಭಾರತದ ಡ್ರಗ್ ಕಂಟ್ರೋಲರ್ ಬಳಕೆಗೆ ಅನುಮತಿ ನೀಡಿದೆ. ಇದು ಭಾರಿ ಸಂಚಲನ ಸೃಷ್ಟಿಸಿದೆ. ಇಂಗ್ಲೆಂಡ್ ಇನ್ನೂ ಅಧೀಕೃತ ಅನುಮತಿ ನೀಡಿದ ಅಸ್ಟ್ರಾಝೆನಿಕಾ ಲಸಿಕೆಗೆ ಭಾರತ ಅನುಮತಿ ನೀಡಿದ್ದು ಯಾಕೆ ಎಂಬ ಪ್ರಶ್ನೆ ಒಂದೆಡಯಾದರೆ, ಭಾರತದ ಕೋವಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗದ ಮೊದಲೇ ಅನುಮತಿ ಯಾಕೆ ಎಂಬ ಪ್ರಶ್ನೆ ಇನ್ನೊಂದೆಡೆ ಉದ್ಭವಿಸಿದೆ. ಬೇಕು ಬೇಡಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ನಿರ್ಧಾರವನ್ನು ಸ್ವಾಗತಿಸಿದೆ.

ಭಾರತೀಯತೆಯಲ್ಲಿ ಕಾಂಗ್ರೆಸ್‌ಗೆ ಹೆಮ್ಮೆ ಇಲ್ಲ; ಲಸಿಕೆ ರಾಜಕೀಯಕ್ಕೆ ಜೆಪಿ ನಡ್ಡಾ ತಿರುಗೇಟು!.

ಭಾರತ ತೆಗೆದುಕೊಂಡ ದಿಟ್ಟ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸ ವ್ಯಕ್ತಪಡಿಸಿದೆ. ಭಾರತದ ಕೊರೋನಾ ಲಸಿಕೆ ಅನುಮತಿಯಿಂದ ಆಗ್ನೇಯಾ ಏಷ್ಯಾದಲ್ಲಿ ಕೊರೋನಾ ವೈರಸ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಲ್ಲದೇ, ಮತ್ತಷ್ಟು ಬಲಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕೊರೋನಾ ವಿರುದ್ಧದ ಹೋರಾಟ ನಿರಂತರವಾಗಿದೆ. ಈ ನಿಟ್ಟಿನಲ್ಲಿ ಭಾರತ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರಿಂದ ಕೊರೋನಾ ಹರಡುವ ತೀವ್ರತೆ ಕಡಿಮೆಯಾಗಲಿದೆ. ಕೊರೋನಾ ಮಕ್ತಗೊಳಿಸಲುವಲ್ಲಿ ಭಾರತ ದಿಟ್ಟ ಹೆಜ್ಜೆಯನ್ನು ಸ್ವಾಗತಿಸುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಭಾರತದಲ್ಲಿ ಇದೀಗ ಲಸಿಕೆ ಅನುಮತಿ ವಿಚಾರಕ್ಕೆ ರಾಜಕೀಯ ನಡೆಯುತ್ತಿದೆ. ಅಸ್ಟ್ರಾಝೆನಿಕಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಅನುಮತಿ ನೀಡಿಲ್ಲ. ಹೀಗಿರುವಾಗಿ ಭಾರತ ನೀಡಿದ್ದೇ ಹೇಗೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಶಶಿ ತರೂರ್, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೋವಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗದ ಮೊದಲೇ ಅನುಮತಿ ನೀಡಲಾಗಿದೆ. ಇದರ ಹಿಂದೆ ಡ್ರಗ್ ಲಾಬಿ ಇದೆ ಎಂದು ತರೂರ್ ಆರೋಪಿಸಿದ್ದಾರೆ.