Asianet Suvarna News Asianet Suvarna News

ಪಂಚಾಯ್ತಿ ಟು ಲೋಕಸಭೆ; ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದ ರಕ್ಷಾ ಕುರಿತ ಇಂಟರೆಸ್ಟಿಂಗ್ ಮಾಹಿತಿ

Revar MP Raksha Khadse: ರಕ್ಷಾ ಅವರ ಪತಿ ನಿಖಿಲ್ ಖಡ್ಸೆ 2013ರಲ್ಲಿ ನಿಧನರಾಗಿದ್ದು, ಗಂಡನ ಅಕಾಲಿಕ ಮರಣದ ಬಳಿಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ಷಾ ಖಡ್ಸೆ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಿಖಿಲ್ ಖಡ್ಸೆ ಆತ್ಮಹತ್ಯೆಗೆ ಶರಣಾಗಿದ್ದರು. 

Who is Raksha Khadse MP From revar Lok sabha Seat mrq
Author
First Published Jun 9, 2024, 9:27 PM IST

ನವದೆಹಲಿ: ಪಿಎಂ ನರೇಂದ್ರ ಮೋದಿ ಸಂಪುಟ (PM Narendra Modi Cabinet) ಸೇರಿರುವ ಮಹಾರಾಷ್ಟ್ರದ ರಕ್ಷಾ ಖಡ್ಸ್ (Raksha Khadse) ಬಗ್ಗೆ ಬಹುತೇಕರಿಗೆ ಗೊತ್ತಿರಲ್ಲ. ಮಹಾರಾಷ್ಟ್ರದ ರೇವರ್‌ ಲೋಕಸಭಾ ಕ್ಷೇತ್ರದಿಂದ (Maharashtra's Raver) ಮೂರನೇ ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ 3.Oಕ್ಕೆ ಸೇರ್ಪಡೆಯಾಗಿದ್ದಾರೆ. ಶರದ್ ಪವಾರ್ ಬಣದ ಎನ್‌ಸಿಪಿ ನಾಯಕ ಏಕನಾಥ್ ಖಡ್ಸೆ ಅವರ ಸೊಸೆಯಾಗಿರುವ ರಕ್ಷಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ಷಾ ಅವರ ಪತಿ ನಿಖಿಲ್ ಖಡ್ಸೆ 2013ರಲ್ಲಿ ನಿಧನರಾಗಿದ್ದು, ಗಂಡನ ಅಕಾಲಿಕ ಮರಣದ ಬಳಿಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ಷಾ ಖಡ್ಸೆ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಿಖಿಲ್ ಖಡ್ಸೆ ಆತ್ಮಹತ್ಯೆಗೆ ಶರಣಾಗಿದ್ದರು. 

ಮಧ್ಯಪ್ರದೇಶದ ಖೇತಿಯಾದಲ್ಲಿ ಜನಿಸಿರುವ ರಕ್ಷಾ ಖಡ್ಸೆ  ಕೊಥಾಡಿ ಗ್ರಾಮದ ಪಂಚಾಯ್ತಿ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರೇಖಾ ಖಡ್ಸೆ ರಾಜಕೀಯದಲ್ಲಿ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್ ಸಂಪುಟದಲ್ಲಿ ರಾಜ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

3ನೇ ಬಾರಿ ಪ್ರಧಾನಿಯಾದ ಮೋದಿ ತಿಂಗಳ ಸ್ಯಾಲರಿ ಎಷ್ಟು? ಸಿಗುವ ಸೌಲಭ್ಯವೇನು?

ರಕ್ಷಾ ಖಡ್ಸೆ ರಾಜಕೀಯ ಜೀವನ

ರಾಜಕೀಯ ಜೀವನದ ಆರಂಭದಲ್ಲಿ ಯಶಸ್ಸು ಕಾಣುತ್ತಲೇ ಬಂದಿರುವ ರಕ್ಷಾ ಖಡ್ಸೆ, 26ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ 37ನೇ ವಯಸ್ಸಿನಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಸಿಪಿಯ ಮನೀಶ್ ಜೈನ್ ಅವರನ್ನು 318,608 ಮತಗಳ ಅಂತರದಿಂದ ಸೋಲಿಸಿದ್ದರು. ಇದು ರಕ್ಷಾ ಖಡ್ಸೆ ರಾಜಕೀಯ ಜೀವನದ ಅತಿದೊಡ್ಡ ಗೆಲುವು ಆಗಿತ್ತು. 16ನೇ ಲೋಕಸಭೆ ಅತಿ ಚಿಕ್ಕ ವಯಸ್ಸಿನ ಸಂಸದರಾಗಿ ಹೀನಾ ಗವಿತ್ ಜೊತೆಯಲ್ಲಿ ರಕ್ಷಾ ಲೋಕಸದನ ಪ್ರವೇಶಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ರೇವರ್ ಕ್ಷೇತ್ರದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಉಲ್ಲಾಸ್ ಪಾಟೀಲ್ ಅವರನ್ನು 335,882 ಮತಗಳ ಅಂತರದಿಂದ ಸೋಲಿಸಿದ್ದರು. ಇದೀಗ ಮೂರನೇ ಬಾರಿ ರೇವರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ. 2024ರ ಚುನಾವಣೆಯಲ್ಲಿ ಎನ್‌ಸಿಪಿ-ಶರದ್ ಪವಾರ್ ಬಣದ ಅಭ್ಯರ್ಥಿಯನ್ನು 2,72,183 ಮತಗಳ ಅಂತರದಿಂದ ಸೋಲಿಸಿದ್ದಾರೆ. 

ತಂದೆಯ ದಾಖಲೆ ಮುರಿದು ಮೋದಿ ಸಂಪುಟದ ಕಿರಿಯ ಸಚಿವರಾದ ಸಂಸದ ಇವರೇ ನೋಡಿ

ರಕ್ಷಾ ಖಡ್ಸೆ ಮುಂದಿರೋ ಸವಾಲುಗಳೇನು?

ತಮ್ಮ ಎಕ್ಸ್ ಖಾತೆಯಲ್ಲಿ ಮಹಿಳಾ ಸಬಲೀಕರಣ, ಮಕ್ಕಳ ಶಿಕ್ಷಣ ಮತ್ತು ರೈತರ ಕಲ್ಯಾಣದ ಬಗ್ಗೆ ಉತ್ಸುಕರಾಗಿರೋದಾಗಿ ಬರೆದುಕೊಂಡಿದ್ದಾರೆ. ಮೂರನೇ ಬಾರಿ ಸಂಸದೆಯಾಗಿರುವ ರಕ್ಷಾ ಖಡ್ಸೆ ಮುಂದೆ ಜಲಗಾಂವ್ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ದೊಡ್ಡ ಸವಾಲು ಇದೆ. ಇದರ ಜೊತೆಗೆ ಕ್ಷೇತ್ರದ  ಮೂಲಸೌಕರ್ಯ ಮತ್ತು ಶಿಕ್ಷಣದ ಕುರಿತ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ ಎಂದು ಸ್ವತಃ ರಕ್ಷಾ ಖಡ್ಸೆ ಹೇಳಿಕೊಳ್ಳುತ್ತಾರೆ. ರೇವರ್ ಕ್ಷೇತ್ರದ ನೀರಾವರಿ ಸ್ಥಾವರದ ಭಾಗಶಃ ನಿಧಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios