ತಂದೆಯ ದಾಖಲೆ ಮುರಿದು ಮೋದಿ ಸಂಪುಟದ ಕಿರಿಯ ಸಚಿವರಾದ ಸಂಸದ ಇವರೇ ನೋಡಿ
36 ವರ್ಷದ ರಾಮಮೋಹನ್ ನಾಯ್ಡು ಸತತವಾಗಿ ಮೂರನೇ ಬಾರಿ ಅಂಧ್ರಪ್ರದೇಶದ ಶ್ರೀಕಾಕುಳಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾ (Srikakulam Lok Sabha constituency, Andhra Pradesh) ಬಂದಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ (PM Nareendra Modi Cabinet) ತೆಲುಗು ದೇಶಂ ಪಕ್ಷದ (Telugu Desam Party) ಸಂಸದ ರಾಮಮೋಹನ್ ನಾಯ್ಡು ಕಿಂಜರಾಪು (36) (Kinjarapu Ram Mohan Naidu) ಸೇರ್ಪಡೆಯಾಗಿದ್ದಾರೆ. ಇಂದು ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಕೇಂದ್ರ ಸಚಿವ ಯರ್ರಾನ್ ನಾಯ್ಡು ಅವರ ಪುತ್ರರಾಗಿರುವ ರಾಮಮೋಹನ್ ನಾಯ್ಡು ಮೋದಿ ಸಂಪುಟದ ಕಿರಿಯ ಸಚಿವರಾಗಲಿದ್ದಾರೆ.
36 ವರ್ಷದ ರಾಮಮೋಹನ್ ನಾಯ್ಡು ಸತತವಾಗಿ ಮೂರನೇ ಬಾರಿ ಅಂಧ್ರಪ್ರದೇಶದ ಶ್ರೀಕಾಕುಳಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾ (Srikakulam Lok Sabha constituency, Andhra Pradesh) ಬಂದಿದ್ದಾರೆ. ಶ್ರೀಕಾಕುಳಂ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆದಿತ್ತು. ತಮ್ಮ ವಿರುದ್ಧ ಸ್ಪರ್ಧಿಸಿದ್ದ ವೈಎಸ್‌ಆರ್‌ಸಿಪಿ ಅಭ್ಯರ್ಥಿ ತಿಲಕ್ ಪೆರಡಾ ಅವರನ್ನು 3.2 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ. ಇದೀಗ ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ಸಂಪುಟದ ಭಾಗವಾಗಿದ್ದಾರೆ.
ತಂದೆಯ ದಾಖಲೆ ಮುರಿದ ರಾಮಮೋಹನ್ ನಾಯ್ಡು
ರಾಮಮೋಹನ್ ನಾಯ್ಡು ಅವರ ತಂದೆ ಯರ್ರಾನ್ ನಾಯ್ಡು 1996ರಲ್ಲಿ 39ನೇ ವಯಸ್ಸಿನಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2024ರಲ್ಲಿ 36ನೇ ವಯಸ್ಸಿನಲ್ಲಿ ಕೇಂದ್ರ ಸಂಪುಟ ಸೇರ್ಪಡೆಯಾಗುವ ಮೂಲಕ ತಂದೆಯ ದಾಖಲೆಯನ್ನು ಮುರಿದಿದ್ದಾರೆ.
ಪದಗ್ರಹಣ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಗಣ್ಯರ ಹಾಜರಿ
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶ ವಿದೇಶಗಳ ಹಲವು ಗಣ್ಯರು ಆಗಮಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ, ಮಾರಿಷಸ್ ಪ್ರಧಾನಿ, ಭೂತಾನ್ ಪ್ರಧಾನಿ ತ್ಸಷರಿಂಗ್ ತೊಬ್‌ಗೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಡಿವೈ ಚಂದ್ರಚೂಡ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಇನ್ನು ಬಾಲಿವುಡ್ ನಟ-ನಟಿಯರು, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಗಣ್ಯರು ಸೇರಿದ್ದರು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ, 2019ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ 2ನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 10 ವರ್ಷದ ಆಡಳಿತದ ಬಳಿಕ ಮತ್ತೆ ಮೋದಿ ಸರ್ಕಾರ ರಚನೆಗೊಂಡಿದೆ. ಸತತ 3ನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಜವಾಹರ್‌ಲಾಲ್ ನೆಹರೂ ದಾಖಲೆ ಸರಿಗಟ್ಟಿದ್ದಾರೆ.
NDA ప్రభుత్వం లో నేడు కేంద్ర మంత్రిగా ప్రమాణ స్వీకారం చేశాను.
— Ram Mohan Naidu Kinjarapu (@RamMNK) June 9, 2024
నాకు ఈ అవకాశం కల్పించిన @narendramodi గారికి, @ncbn గారికి,@PawanKalyan గారికి నన్ను పార్లమెంట్ కు పంపిన నా శ్రీకాకుళం జిల్లా ప్రజలకు నా హృదయపూర్వక శుభాకాంక్షలు. pic.twitter.com/Zf9Bs3dlwD