Asianet Suvarna News Asianet Suvarna News

ಹಿಂದೂ ಎಲ್ಲಿ ಹಿಂದೂ... ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವ ನೆಟ್ಟಿಗರು

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಫೋಟೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋವನ್ನು ಇಟ್ಟುಕೊಂಡು ಟ್ವಿಟ್ಟರ್ ಬಳಕೆದಾರರು ((twitter User) ರಾಹುಲ್ ಗಾಂಧಿಯನ್ನು ಹಿಂದೂ ಎಲ್ಲಿ ಹಿಂದೂ ಎಂದು ಪ್ರಶ್ನಿಸುತ್ತಿದ್ದಾರೆ.

where is Hindu, indian  twitter users asks Congress leader Rahul gandhi, after he walking with, christian muslim sikh leader in Bharat jodo akb
Author
First Published Dec 11, 2022, 6:30 PM IST

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಪ್ರಸ್ತುತ ಈ ಯಾತ್ರೆ ರಾಜಸ್ತಾನದಲ್ಲಿ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭಾರತದ ಶಿಖರ ಜಮ್ಮು ಕಾಶ್ಮೀರವನ್ನು ತಲುಪಲಿದೆ. ದೇಶಾದ್ಯಂತ ನೂರಾರು ನಾಯಕರು ಯಾತ್ರೆ ಸಾಗುವ ಮಾರ್ಗದಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಯಾತ್ರೆಯ ವೇಳೆ ನಡೆದ ಕೆಲವು ಘಟನೆಗಳು ವಿವಾದಕ್ಕೆ ಕಾರಣವಾಗಿದ್ದವು. ಇದರ ಜೊತೆಗೆ ಕೆಲ ದಿನಗಳ ಹಿಂದೆ ರಾಹುಲಾ ಗಾಂಧಿ ಯಾತ್ರೆಯ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿ ಬಂದಿದ್ದು,ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಫೋಟೋವೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಫೋಟೋವೊಂದನ್ನು ಇಟ್ಟುಕೊಂಡು ಟ್ವಿಟ್ಟರ್ ಬಳಕೆದಾರರು ((twitter User) ರಾಹುಲ್ ಗಾಂಧಿಯನ್ನು ಹಿಂದೂ ಎಲ್ಲಿ ಹಿಂದೂ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ಆ ಫೋಟೋದಲ್ಲಿ ಇರುವುದಾದರೂ ಏನು ಎಂಬ ಕುತೂಹಲ ನಿಮಗೂ ಇರಬಹುದು. ಅಂದಹಾಗೆ ಭಾರತ್ ಜೋಡೋ ಯಾತ್ರೆಯ ಫೋಟೋ ಇದಾಗಿದ್ದು, ಫೋಟೋದಲ್ಲಿ ಕಾಣಿಸುವಂತೆ ರಾಹುಲ್ ಗಾಂಧಿ ಒಬ್ಬರು ಕ್ರಿಶ್ಚಿಯನ್ ಧರ್ಮಗುರು ಮತ್ತೊಬ್ಬರು ಮುಸಲ್ಮಾನ ವ್ಯಕ್ತಿ ಹಾಗೂ ಮತ್ತೊಬ್ಬ ಸಿಖ್ ಸಮುದಾಯದ ವ್ಯಕ್ತಿಯೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಈ ಫೋಟೋ ನೋಡಿದ್ದೆ ತಡ ಅನೇಕರು ರಾಹುಲ್ ಗಾಂಧಿಯನ್ನು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಲು ಶುರು ಮಾಡಿದ್ದು, ಎಲ್ಲಿ ಹಿಂದೂ ಎಂದು ಪ್ರಶ್ನಿಸ ತೊಡಗಿದ್ದಾರೆ.

#WhereisHindu ಎಂದು ಹ್ಯಾಷ್‌ಟ್ಯಾಗ್ ಜೊತೆ ಜನ ರಾಹುಲ್ ಗಾಂಧಿಯನ್ನು ಪ್ರಶ್ನಿಸಲು ಶುರು ಮಾಡಿದ್ದು, ಇದು ಟ್ವಿಟ್ಟರ್‌ನಲ್ಲೀಗ ಟ್ರೆಂಡ್ ಆಗಿದೆ. ಇದು ಸರಿಯದ ಫೋಟೋವೇ ಆಗಿದೆ. ಕಾಂಗ್ರೆಸ್‌ನ ಇಂಡಿಯಾದಲ್ಲಿ ಹಿಂದೂಗಳಿಗೆ ಜಾಗ ಇಲ್ಲ ಎಂಬುದು ಈ ಫೋಟೋದ ಅರ್ಥ ಎಂದು ಅನೇಕರು ಕೆಂಡಕಾರುತ್ತಿದ್ದಾರೆ. ಇದು ಗಾಂಧಿ ಕುಟುಂಬದ ನಾಟಕ ಎಂದು ಕೆಲವರು ಬೈದಾಡಿದ್ದಾರೆ. ಅವರ ಫೋಟೋದಲ್ಲಿ ಹಿಂದೂ ಇರಲು ಸಾಧ್ಯವಿಲ್ಲ. ಹಲವು ಜಮಾನದಿಂದಲೂ ಅವರಿಗೆ ಹಿಂದೂ ಶತ್ರುಗಳಾಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಿಂದೂ ವಿರೋಧಿಗಳೆಲ್ಲಾ ಒಂದಾಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಏನು ಎಂಬುದು ಇವತ್ತು ನಿಜವಾಗಿಯೂ ಅರ್ಥವಾಗುತ್ತಿದೆ ದಯಮಾಡಿ ಹಿಂದೂಗಳೆ ಇನ್ನಾದರೂ ಎಚ್ಚರಗೊಳ್ಳಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಜನರು ಇಲ್ಲಿ ಹಿಂದೂ ಎಲ್ಲಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್‌ನ ಧೀರ್ಘಾವಧಿಯ ಯೋಜನೆಯನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ಧೀರ್ಘಾವಧಿಯಲ್ಲಿ ಭಾರತದಲ್ಲಿ ಹಿಂದೂಗಳನ್ನು ಕಾಣದಂತೆ ಮಾಡುವುದೇ ಅವರ ಉದ್ದೇಶ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ಫೋಟೋದಿಂದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಅಂದಹಾಗೆ ಈ ಫೋಟೋವನ್ನು ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ವೇದಿಕೆಗಳ ಮುಖ್ಯಸ್ಥೆ ಸುಪ್ರಿಯಾ ಶ್ರೀನಾತೆ ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿದ್ದರು. ಬಟ್ಟೆಯಿಂದ ಗುರುತಿಸುವವರು ನೋಡಿ ಇದು ನನ್ನ ಭಾರತ (India) ಎಂದು ಅವರು ಈ ಫೋಟೋ ಪೋಸ್ಟ್ ಮಾಡಿ ಬರೆದುಕೊಂಡಿದ್ದರು. 

 

ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಬರ್ತಿದ್ದಾರೆ, ಇದು ಒಳ್ಳೆಯದು: ಎಚ್.ವಿಶ್ವನಾಥ್

ಮೋದಿ ಮೋದಿ ಘೋಷಣೆ ಕೂಗಿದವರಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಉಡುಗೊರೆ! 

ರಾಹುಲ್ ಗಾಂಧಿ ಯಾತ್ರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ವಿಡಿಯೋ ಬಹಿರಂಗ ಪಡಿಸಿದ ಬಿಜೆಪಿ!

Follow Us:
Download App:
  • android
  • ios