ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದ ನಿತೀಶ್ ಕುಮಾರ್ ಸರ್ಕಾರ..!
ಈ ನಾಯಿಗಳು ಸಾಮಾನ್ಯವಾಗಿ ಮಹಿಳೆಯರ ಮೇಲೆ ದಾಳಿ ಮಾಡುತ್ತವೆ ಮತ್ತು ಪ್ರದೇಶದಲ್ಲಿ ಸುಮಾರು 10 ಮಹಿಳೆಯರನ್ನು ಕೊಂದಿವೆ ಎಂದು ವರದಿಯಾಗಿದೆ.
ಬಿಹಾರದಲ್ಲಿ (Bihar) ಬೀದಿ ನಾಯಿಗಳ (Stray Dogs) ಹಾವಳಿ (Menace) ಹೆಚ್ಚಾಗಿದ್ದು, ಇದನ್ನು ತಡೆಯಲು ಅಲ್ಲಿನ ರಾಜ್ಯ ಸರ್ಕಾರ (State Government) ಬೀದಿ ನಾಯಿಗಳನ್ನೇ ಗುಂಡಿಕ್ಕಿ (Shoot) ಕೊಲ್ಲುವ ಆದೇಶ ನೀಡಿದೆ. ಬಿಹಾರ ಸರ್ಕಾರದ ಆದೇಶದ ನಂತರ ಅಲ್ಲಿನ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ (Begusarai District) ಶೂಟರ್‌ಗಳ (Shooter) ತಂಡವು ಕನಿಷ್ಠ 30 ಬೀದಿ ನಾಯಿಗಳನ್ನು ಕೊಂದು ಹಾಕಲಾಗಿದೆ ಎಂದು ತಿಳಿದುಬಂದಿದೆ. ಬೇಗುಸರಾಯ್‌ನಲ್ಲಿ ನರಭಕ್ಷಕ ನಾಯಿಗಳ ಹಾವಳಿಯನ್ನು ಕೊನೆಗೊಳಿಸಲು ಪಾಟ್ನಾದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ತಂಡವೊಂದನ್ನು ರಚಿಸಲಾಗಿದೆ. ಈ ಪ್ರದೇಶದಲ್ಲಿ ಕಾಡು ನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಾಟ್ನಾದಿಂದ ಆಗಮಿಸಿದ ತಂಡ ಮಂಗಳವಾರ 16 ಉಗ್ರ ಬೀದಿನಾಯಿಗಳನ್ನು ಮತ್ತು ಬುಧವಾರ 14 ಬೀದಿ ನಾಯಿಗಳನ್ನು ಕೊಂದು ಹಾಕಿದೆ ಎಂದು ವರದಿಯಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆಯ ಬೇಟೆಗಾರ (Hunter) ಶಕ್ತಿ ಕುಮಾರ್ ಎಂಬಾತ ತನ್ನ ತಂಡದ ಸದಸ್ಯರೊಂದಿಗೆ ಬಹಿಯಾರದ ಬಚ್ವಾರಾ, ಕದರಾಬಾದ್, ಅರ್ಬಾ, ಭಿಖಮ್‌ಚಕ್ ಮತ್ತು ರಾಣಿ ಪಂಚಾಯತ್‌ಗಳ ಆಗಮಿಸಿ ಬೀದಿನಾಯಿಗಳನ್ನು ಕೊಂದು ಹಾಕಿದ್ದಾರೆ.
ಇದನ್ನು ಓದಿ: 2 ಗಂಟೆಯಲ್ಲಿ 40ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಯ ಮಾರಕ ದಾಳಿ
ಬೇಟೆಗಾರರಿಗೆ ಸ್ಥಳೀಯರ ಸಹಾಯ..!
ಇನ್ನು, ಸ್ಥಳೀಯ ಜನರು ಬೀದಿ ನಾಯಿಗಳನ್ನು ಪತ್ತೆಹಚ್ಚಲು ಮತ್ತು ಕೊಲ್ಲಲು ಬೇಟೆಗಾರರಿಗೆ ಸಹಾಯ ಮಾಡಿದರು. ಈ ನಾಯಿಗಳು ಗ್ರಾಮದಲ್ಲಿ ಜನರನ್ನು ಕೊಂದು ಹಾಕುತ್ತಿವೆ ಎಂದು ತಿಳಿದುಬಂದಿದೆ. 2022 ರಲ್ಲಿ, ಸುಮಾರು 10 ಜನರು ನರಭಕ್ಷಕ ನಾಯಿಗಳಿಂದ ದಾಳಿಗೊಳಗಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಂಡು ಬೀದಿನಾಯಿಗಳನ್ನು ಸಾಯಿಸುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.
ಈ ನಾಯಿಗಳು ಸಾಮಾನ್ಯವಾಗಿ ಮಹಿಳೆಯರ ಮೇಲೆ ದಾಳಿ ಮಾಡುತ್ತವೆ ಮತ್ತು ಪ್ರದೇಶದಲ್ಲಿ ಸುಮಾರು 10 ಮಹಿಳೆಯರನ್ನು ಕೊಂದಿವೆ ಎಂದು ವರದಿಯಾಗಿದೆ. ಅಲ್ಲದೆ, ಕೆಲ ಉಗ್ರ ಬೀದಿ ನಾಯಿಗಳಿಂದ ರಕ್ಷಿಸಲು ಈ ಪ್ರದೇಶದಲ್ಲಿ ಹೆಚ್ಚಿನ ಅಭಿಯಾನಗಳನ್ನು ನಡೆಸಬೇಕು ಎಂದೂ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಾಯಿಗಳಿಂದ ರಕ್ಷಿಸಿಕೊಳ್ಳಲು ಎಟಿಎಂಗೆ ನುಗ್ಗಿದ್ದ ಜಿಂಕೆ
ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ತೇಘ್ರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಬಚ್ವಾರಾ ಬ್ಲಾಕ್‌ನ ವಿವಿಧ ಪಂಚಾಯಿತಿಗಳಲ್ಲಿ ಮಹಿಳೆಯರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯಲ್ಲಿ ನೋಂದಾಯಿತ ಶೂಟರ್‌ಗಳ ತಂಡವನ್ನು ಜಿಲ್ಲಾಡಳಿತ ನಿಯೋಜಿಸಿದೆ ಎಂದು ಬುಧವಾರ ತಿಳಿಸಿದ್ದಾರೆ.
ಬೀದಿ ನಾಯಿಗಳ ದಾಳಿಗೆ ಸ್ಥಳೀಯ ಸದರ್ ಆಸ್ಪತ್ರೆಯಲ್ಲಿ ಭಾನುವಾರ ಒಬ್ಬರು ಮಹಿಳೆ ಬಲಿಯಾದರು. ಅಲ್ಲದೆ, ಸೋಮವಾರ, ಬೀದಿನಾಯಿಗಳ ಗುಂಪೊಂದು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇತರೆ ಮೂವರು ಮಹಿಳೆಯರ ಮೇಲೆ ದಾಳಿ ಮಾಡಿದೆ. ಅವರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Shivamogga: ಬೀದಿನಾಯಿಗಳಿಗೆ ಕಡಿವಾಣ ಎಂದು?
ಶೂಟರ್‌ಗಳ ತಂಡವು ಕಳೆದ ವಾರ ಈಗಾಗಲೇ ಸುಮಾರು 12 ಬೀದಿ ನಾಯಿಗಳನ್ನು ಹೊಡೆದುರುಳಿಸಿತ್ತು. ಆದರೂ, ಒಂದು ದಿನದ ಕಾರ್ಯಾಚರಣೆಯು ಬೀದಿನಾಯಿಗಳನ್ನು ತಡೆಯಲು ವಿಫಲವಾಗಿದ್ದು, ಅವುಗಳು ಮತ್ತೆ ದಾಳಿಗಳನ್ನು ಮಾಡಿವೆ ಎಂದೂ ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಇನ್ನೊಂದೆಡೆ, ಕಳೆದ 1 ವರ್ಷದಲ್ಲಿ ಬೀದಿ ನಾಯಿಗಳು ಒಟ್ಟು 9 ಮಹಿಳೆಯರನ್ನು ಕೊಂದಿವೆ ಮತ್ತು ಹನ್ನೆರಡು ಮಹಿಳೆಯರು ಮತ್ತು ಮಕ್ಕಳನ್ನು ಗಾಯಗೊಳಿಸಿವೆ ಎಂದೂ ಬಚ್ವಾರಾ ಬ್ಲಾಕ್ ಮುಖಿಯ ಅಸೋಸಿಯೇಶನ್‌ನ ಅಧ್ಯಕ್ಷ ಪ್ರಭಾತ್ ಕುಮಾರ್ ಹೇಳಿದ್ದಾರೆ. ಈ ಬ್ಲಾಕ್ ವ್ಯಾಪ್ತಿಯ ಕನಿಷ್ಠ 7 ಪಂಚಾಯಿತಿಗಳ ಗ್ರಾಮಸ್ಥರು ಈ ಬೀದಿನಾಯಿಗಳಿಂದ ಭಯಭೀತರಾಗಿ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ: ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್