Asianet Suvarna News Asianet Suvarna News

ರಾಹುಲ್‌ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾದ್ರೆ ವಿರೋಧ ಇಲ್ಲ: ನಿತೀಶ್‌ ಕುಮಾರ್

ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶನಿವಾರ ನಿತೀಶ್‌ ಕುಮಾರ್‌ ಹೇಳಿದ್ದಾರೆ.

no problem if congress pitches rahul gandhi as pm candidate ash
Author
First Published Jan 1, 2023, 8:01 PM IST

ರಾಹುಲ್‌ ಗಾಂಧಿ (Rahul Gandhi) ವಿರೋಧ ಪಕ್ಷಗಳ (Opposition Parties) ಪ್ರಧಾನಿ ಅಭ್ಯರ್ಥಿ (Prime mInisterial Candidate) ಎಂದು ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ (Congress Leader Kamal Nath) ಇತ್ತೀಚೆಗೆ ಹೇಳಿಕೆ ನೀಡಿದ್ರು. ಈ ಬಗ್ಗೆ ಬಿಹಾರ (Bihar) ಸಿಎಂ ಹಾಗೂ ಮಹಾಘಟಬಂಧನದಲ್ಲಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌ (Nitish Kumar) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶನಿವಾರ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಹುದ್ದೆಗೆ ತಾನು ಆಕಾಂಕ್ಷಿಯಲ್ಲ ಎಂದೂ ಬಿಹಾರ ಸಿಎಂ ಪುನರುಚ್ಛರಿಸಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್‌ ಸಹ ಜೆಡಿಯು - ಆರ್‌ಜೆಡಿ ಮಹಾಘಟಬಂಧನ ಮೈತ್ರಿಕೂಟದ ಭಾಗವಾಗಿದೆ.

ಆದರೂ, ಈ ವಿಷಯದ ಬಗ್ಗೆ ಎಲ್ಲಾ ಸಮಾನ ಮನಸ್ಕ ಪಕ್ಷಗಳಲ್ಲಿ ಒಮ್ಮತದ ಅಗತ್ಯ ಇದೆ ಎಂದೂ 5 ತಿಂಗಳ ಹಿಂದೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡ ಜೆಡಿಯು ನಾಯಕ ಸ್ಪಷ್ಟನೆ ನೀಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ ಕೆಲ ದಿನಗಳ ನಂತರ, "ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದರು.

ಇದನ್ನು ಓದಿ: ನವ ಭಾರತದ 'ರಾಷ್ಟ್ರಪಿತ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಧಾನಿಯನ್ನು ವ್ಯಂಗ್ಯವಾಡಿದ ನಿತೀಶ್‌

ಎಲ್ಲಾ ಪಕ್ಷಗಳೊಂದಿಗೆ ಸರಿಯಾದ ಚರ್ಚೆಯ ನಂತರ ಅವರು (ಕಾಂಗ್ರೆಸ್) ಕರೆ ತೆಗೆದುಕೊಳ್ಳಬೇಕು. ಸದ್ಯ ಅವರು ಭಾರತ್ ಜೋಡ್ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಮುಂದಿನ ಬೆಳವಣಿಗೆಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಬಿಹಾರ ಮುಖ್ಯಮಂತ್ರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇನ್ನು, ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯ ಶಿಕ್ಷಣ ಇಲಾಖೆಯ ನೂರಾರು ನೇಮಕಾತಿ ಪತ್ರಗಳನ್ನು ವಿತರಿಸಿದ ಸಮಾರಂಭದ ಮಧ್ಯೆ, ಸುದ್ದಿಗಾರರೊಂದಿಗೆ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಹಾಘಟಬಂಧನ್‌ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುವ ಭರವಸೆಗೆ ಅನುಗುಣವಾಗಿ ಈ ಕಾರ್ಯಕ್ರಮ ನಡೆದಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ನಿತೀಶ್ ಕುಮಾರ್, ತಲ್ಲಣ ಸೃಷ್ಟಿಸಿದ ಪ್ರಶಾಂತ್ ಕಿಶೋರ್!

ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ ನಿತೀಶ್‌ ಕುಮಾರ್‌
ಭಾರತಕ್ಕೆ ಇಬ್ಬರು ರಾಷ್ಟ್ರಪಿತರಿದ್ದಾರೆ. ಒಬ್ಬರು ಮಹಾತ್ಮ ಗಾಂಧೀಜಿ ಹಾಗೂ ನವ ಭಾರತದ ರಾಷ್ಟ್ರಪಿತ ಪ್ರಧಾನಿ ಮೋದಿ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ವ್ಯಂಗ್ಯವಾಡಿದ್ದು, ನವ ಭಾರತದ ರಾಷ್ಟ್ರಪಿತನ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.  'ನವ ಭಾರತ'ದ 'ಹೊಸ ಪಿತಾಮಹ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ ಎಂದು ಶನಿವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಅಮೃತಾ ಫಡ್ನವೀಸ್‌ ಹೇಳಿಕೆಯನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ. ಡಿಸೆಂಬರ್ 21 ರಂದು ಪ್ರಧಾನಿ ಮೋದಿಯನ್ನು 'ನವ ಭಾರತದ ರಾಷ್ಟ್ರಪಿತ' ಎಂದು ಅಮೃತಾ ಫಡ್ನವೀಸ್ ಅವರು ಕರೆದಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಬಿಹಾರ ಸಿಎಂ ನಿತೀಶ್‌ ಕುಮಾರ್, "ಸ್ವಾತಂತ್ರ್ಯದ ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ, ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ. ನಾವು 'ರಾಷ್ಟ್ರದ ಹೊಸ ಪಿತಾಮಹ' ಎಂಬ ಹೇಳಿಕೆಯ ಬಗ್ಗೆ ಓದಿದ್ದೇವೆ. 'ನವ ಭಾರತ'ದ 'ಹೊಸ ಪಿತಾಮಹ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ?" ಎಂದೂ ಪ್ರಶ್ನೆ ಮಾಡಿದ್ದರು. 

Follow Us:
Download App:
  • android
  • ios