Republic Day: ಪರೇಡ್‌ ಎಷ್ಟು ಗಂಟೆಗೆ ಆರಂಭ, ಈ ಬಾರಿಯ ವಿಶೇಷತೆ ಏನು, ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ವತಂತ್ರ ರಾಷ್ಟ್ರವಾದ ಬಳಿಕ 1950ರ ಜನವರಿ 26ರಂದು ಭಾರತ ತನ್ನ ಸಂವಿಧಾನವನ್ನು ಒಪ್ಪಿಕೊಂಡಿತು. ಅಂದಿನಿಂದ ಜನವರಿ 26ರನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಕರ್ತವ್ಯಪಥದಲ್ಲಿ (ಈ ಹಿಂದೆ ರಾಜಪಥ) ಭಾರತೀಯ ಸೇನಾಶಕ್ತಿಯ ಆಕರ್ಷಕ ಪರೇಡ್‌ ನಡೆಯುತ್ತದೆ. ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಅರೆಸೇನಾ ಪಡೆ ಸಿಬ್ಬಂದಿ ಇದರಲ್ಲಿ ಭಾಗಿಯಾಗುತ್ತಾರೆ. ಈ ಬಾರಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನ ಗೌರವ ವಂದನೆ ಸ್ವೀಕರಿಸಲಿದ್ದಾರೆ.
 

When will the Republic Day parade start what will be special where to see know everything san

ನವದೆಹಲಿ (ಜ.25): ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 26 ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವದಲ್ಲಿ ರಾಷ್ಟ್ರವನ್ನು ಕರ್ತವ್ಯಪಥದಿಂದ ಮುನ್ನಡೆಸಲಿದ್ದಾರೆ. ಈ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್‌ ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪರಾಕ್ರಮ್‌ ದಿವಸ್‌ ಆಚರಣೆಯೊಂದಿಗೆ ಗಣರಾಜ್ಯೋತ್ಸವದ ಪ್ರಕ್ರಿಯೆಗಳು ಆರಂಭವಾಗಿದ್ದವು. ಹುತಾತ್ಮರ ದಿನವನ್ನಾಗಿ ಆಚರಿಸಲಾಗುವ ಜನವರಿ 30 ರಂದು ಈ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.

ಗಣರಾಜ್ಯೋತ್ಸವ ಪರೇಡ್ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ದೇಶದ ಸೇನಾ ಶಕ್ತಿಯೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಯ ವಿಶಿಷ್ಟ ಸಂಯೋಜನೆಯನ್ನು ಮೆರವಣಿಗೆಯಲ್ಲಿ ಕಾಣಬಹುದು. ಈ ಬಾರಿಯ ಮೆರವಣಿಗೆಯು ದೇಶದ ಬೆಳೆಯುತ್ತಿರುವ ಸ್ಥಳೀಯ ಸಾಮರ್ಥ್ಯಗಳು, ಮಹಿಳಾ ಶಕ್ತಿ ಮತ್ತು 'ನವ ಭಾರತ' ಉದಯವಾಗಿರುವುದನ್ನು ಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ಪರೇಡ್ ಸಮಾರಂಭ ಆರಂಭವಾಗಲಿದೆ. ಪ್ರಧಾನಿ ಮೋದಿ ಅವರು ದೇಶದ ಜನರ ಪರವಾಗಿ ಪುಷ್ಪಗಳನ್ನು ಅರ್ಪಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಂತರ, ಪ್ರಧಾನಮಂತ್ರಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವಂದನಾ ವೇದಿಕೆಗೆ ಆಗಮಿಸಲಿದ್ದಾರೆ.

ಪರೇಡ್‌ ಬಳಿಕ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಪಡೆಗಳ ಹೊರತಾಗಿ, ಈಜಿಪ್ಟ್ ಸೈನ್ಯ ತುಕಡಿ ಕೂಡ ಪರೇಡ್‌ನಲ್ಲಿ ಭಾಗವಹಿಸುತ್ತವೆ. 17 ರಾಜ್ಯಗಳ 23 ಟ್ಯಾಬ್ಲೋಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಈ ಸ್ತಬ್ದಚಿತ್ರಗಳಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಮತ್ತು ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ತೋರಿಸಲಾಗುತ್ತದೆ. ಕರ್ನಾಟಕ ಕೂಡ ನಾರಿಶಕ್ತಿ ಬಿಂಬಿಸುವ ಸ್ತಬ್ದಚಿತ್ರವನ್ನು ಪ್ರದರ್ಶನ ಮಾಡಲಿದೆ.

ಮೊದಲ ಬಾರಿಗೆ, ಸ್ವದೇಶಿ ಗನ್ ಮೂಲಕ ಸೆಲ್ಯೂಟ್: ಸಂಪ್ರದಾಯದಂತೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ ಇದರ ನಂತರ 21 ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆ ನಡೆಯಲಿದೆ. ಮೊದಲ ಬಾರಿಗೆ, 105 ಎಂಎಂ ಭಾರತೀಯ ಫೀಲ್ಡ್ ಗನ್‌ಗಳಿಂದ 21-ಗನ್ ಸೆಲ್ಯೂಟ್ ಅನ್ನು ಹಾರಿಸಲಾಗುತ್ತದೆ. ಇಲ್ಲಿಯವರೆಗೂ ಬ್ರಿಟಿಷ್‌ ನಿರ್ಮಿತ 25-ಪೌಂಡರ್ ಗನ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಇದು ರಕ್ಷಣಾ ವಲಯದಲ್ಲಿ ದೇಶದ ಬೆಳೆಯುತ್ತಿರುವ 'ಸ್ವಾವಲಂಬನೆ'ಯನ್ನು ಪ್ರತಿಬಿಂಬಿಸುತ್ತದೆ. ಅದರ ನಂತರ, 105 ಹೆಲಿಕಾಪ್ಟರ್ ಘಟಕದ ನಾಲ್ಕು Mi-17 1V/V5 ಹೆಲಿಕಾಪ್ಟರ್‌ಗಳು ಕರ್ತವ್ಯಪಥದಲ್ಲಿರುವ ಪ್ರೇಕ್ಷಕರ ಮೇಲೆ ಪುಷ್ಪವೃಷ್ಟಿ ಮಾಡುತ್ತವೆ. ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪರೇಡ್ ಆರಂಭವಾಗಲಿದೆ.

Republic Day: ಟೈಗರ್‌ ಕ್ಯಾಟ್‌ ಮಿಸೈಲ್‌, ರಫೇಲ್‌, ಪ್ರಚಂಡ.. ಗಣರಾಜ್ಯೋತ್ಸವದಲ್ಲಿರಲಿದೆ ಭಾರತದ ಸೇನಾಶಕ್ತಿ!

ದೂರದರ್ಶನದಲ್ಲಿ ನೇರಪ್ರಸಾರ: ದೂರದರ್ಶನದಲ್ಲಿ ಗಣರಾಜ್ಯೋತ್ಸವ ಪರೇಡ್‌ ನೇರಪ್ರಸಾರ ಆಗಲಿದೆ. ಟಿವಿ, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಕೂಡ ಗಣರಾಜ್ಯೋತ್ಸವ ಪರೇಡ್‌ನ ನೇರಪ್ರಸಾರವನ್ನು ವೀಕ್ಷಿಸಬಹುದು. ಬೆಳಗ್ಗೆ 9.15 ರಿಂದಲೇ ದೂರದರ್ಶನದ ಟಿವಿ ಹಾಗೂ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮದ ಕಾರ್ಯಕ್ರಮಗಳು ಆರಂಭವಾಗಲಿದೆ.  ಮೆರವಣಿಗೆಯನ್ನು ಪ್ರಸಾರ ಭಾರತಿಯ ಯೂಟ್ಯೂಬ್ ಚಾನೆಲ್‌ನಲ್ಲಿಯೂ ವೀಕ್ಷಿಸಬಹುದು. ಇದಲ್ಲದೆ, ಆಲ್ ಇಂಡಿಯಾ ರೇಡಿಯೊದ ಆನ್‌ಲೈನ್ ವೇದಿಕೆಯಲ್ಲೂ ಮೆರವಣಿಗೆಯ ವಿವರಗಳನ್ನು ಕೇಳಬಹುದು.

Republic Day: 170 ಬಿಲಿಯನ್‌ ಡಾಲರ್‌ ಸಾಲದಲ್ಲಿರುವ ಈಜಿಪ್ಟ್‌ ದೇಶದ ಅಧ್ಯಕ್ಷರನ್ನು ಭಾರತ ಅತಿಥಿಯಾಗಿ ಆಹ್ವಾನಿಸಿದ್ದೇಕೆ?

ಡಿಜಿಟಲ್‌ ಆಹ್ವಾನ ಪತ್ರಿಕೆ: ಈ ಬಾರಿ ಗಣರಾಜ್ಯೋತ್ಸವ ಪರೇಡ್‌ಗೆ ಅತಿಥಿಗಳು ಮತ್ತು ವೀಕ್ಷಕರಿಗೆ ಭೌತಿಕ ಆಮಂತ್ರಣ ಪತ್ರದ ಬದಲಿಗೆ ಇ-ಆಮಂತ್ರಣವನ್ನು ನೀಡಲಾಗಿದೆ. ಇದಕ್ಕಾಗಿ www.amantran.mod.gov.in ಅನ್ನು ಪ್ರಾರಂಭಿಸಲಾಗಿತ್ತು. ಈ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಮಾರಾಟ, ಪ್ರವೇಶ ಕಾರ್ಡ್‌ಗಳು, ಆಮಂತ್ರಣ ಪತ್ರಗಳು ಮತ್ತು ಕಾರ್ ಪಾರ್ಕಿಂಗ್ ಲೇಬಲ್‌ಗಳನ್ನು ನೀಡಲಾಗುತ್ತದೆ.

Latest Videos
Follow Us:
Download App:
  • android
  • ios