ಸ್ನಾನ ಮಾಡುವಾಗ ದೇಹದ ಈ ಅಂಗದ ಮೇಲೆ ಮೊದಲು ನೀರು ಹಾಕಿ!
ಸ್ನಾನ ಮಾಡುವಾಗ ದೇಹದ ಯಾವ ಭಾಗಕ್ಕೆ ಮೊದಲು ನೀರು ಹಾಕಬೇಕು ಎಂಬುದನ್ನು ಖ್ಯಾತ ಸ್ವಾಮೀಜಿಗಳಾದ ಪ್ರೇಮಾನಂದ ಜಿ ಮಹಾರಾಜರು ತಿಳಿಸಿದ್ದಾರೆ.
ಬಹುತೇಕರು ಚಳಿಗಾಲದಲ್ಲಿ ಸ್ನಾನ ಮಾಡಲು ಹಿಂದೇಟು ಹಾಕುತ್ತಾರೆ. ಸ್ನಾನ ಮಾಡಿದ ಬಳಿಕ ಬಿಸಿಲಿಗೆ ಬಂದು ಜನರು ನಿಲ್ಲುತ್ತಾರೆ. ಚಳಿ ಅಂತ ಎಂಟರಿಂದ ಹತ್ತು ಲೋಟ ನೀರನ್ನು ದೇಹದ ಮೇಲೆ ಹಾಕಿಕೊಂಡು ಹೊರಗೆ ಬರುತ್ತಾರೆ. ಪ್ರತಿದಿನ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಹಾನಿಕಾರಕ. ಆದರೆ ತಣ್ಣೀರು ಸ್ನಾನ ಆರಂಭದಲ್ಲಿ ಕಷ್ಟವಾಗಬಹುದು. ಆದ್ರೆ ಇದೇ ಅಭ್ಯಾಸವಾದ್ರೆ ಯಾವುದೇ ಚಳಿಯಾಗಲ್ಲ. ನೀರು ಬಿಸಿ ಅಥವಾ ತಂಪಾಗಿರಲಿ, ಸ್ನಾನ ಮಾಡಲು ಕೆಲ ಸರಿಯಾದ ಕ್ರಮಗಳಿವೆ. ಖ್ಯಾತ ಸ್ವಾಮೀಜಿಗಳಾಗಿರುವ ಪ್ರೇಮಾನಂದ ಜಿ ಮಹಾರಾಜರು ಸ್ನಾನದ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಹೇಳಿದ್ದಾರೆ.
ಸ್ನಾನವು ದೇಹಕ್ಕೆ ಹೊಸತನವನ್ನು ನೀಡೋದರ ಜೊತೆಗೆ ದೇಹದ ಶಕ್ತಿಯನ್ನು ಸಮತೋಲದಲ್ಲಿಡಲು ಸಹಾಯ ಮಾಡುತ್ತದೆ ಎಂದು ಪ್ರೇಮಾನಂದ ಜಿ ಮಹಾರಾಜ್ ಹೇಳುತ್ತಾರೆ. ಇದೇ ವೇಳೆ ಸ್ನಾನಕ್ಕೆ ತೆರಳಿದಾಗ ದೇಹದ ಯಾವುದೇ ಭಾಗಕ್ಕೆ ನೀರು ತಾಗಿಸಬೇಕು ಮತ್ತು ಯಾಕೆ? ಸ್ನಾನ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಎಂಬುದರ ಬಗ್ಗೆಯೂ ಪ್ರೇಮಾನಂದ ಜಿ ಮಹಾರಾಜ್ ತಿಳಿಸಿದ್ದಾರೆ.
ಪ್ರೇಮಾನಂದ ಜಿ ಮಹಾರಾಜರ ಪ್ರಕಾರ, ಚಳಿಗಾಲದಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡಬೇಕು. ಇದರಿಂದ ದೇಹಕ್ಕೆ ಹೆಚ್ಚು ಆರೋಗ್ಯಕರ ಲಾಭಗಳು ಲಭ್ಯವಾಗುತ್ತವೆ. ಸ್ನಾನಕ್ಕೆ ತೆರಳಿದಾಗ ಮೊದಲು ನಾಭಿಗೆ (ಹೊಕ್ಕಳು) ನೀರು ತಾಗಿಸಬೇಕು. ನಂತರ ಸ್ನಾನ ಮಾಡಬೇಕು. ಈ ರೀತಿ ಮಾಡೋದರಿಂದ ಸಕಾರಾತ್ಮಕ ಪ್ರಭಾವ ನಿಮ್ಮ ಮೇಲಿರುತ್ತದೆ. ವಿಶೇಷವಾಗಿ ಬ್ರಹ್ಮಚರ್ಯ ಜೀವನ ನಡೆಸುವವರು ಈ ರೀತಿಯಾಗಿ ಮಾಡಬೇಕು ಎಂದು ಪ್ರೇಮಾನಂದ ಜಿ ಮಹಾರಾಜರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಇಡೀ ವಿಶ್ವದಲ್ಲೇ ಅತೀ ಹೆಚ್ಚು ಸ್ನಾನ ಮಾಡೋದು ಯಾವ ದೇಶದವರು?
ಸಾಬೂನಿನ ಬದಲಾಗಿ ಇದನ್ನು ಬಳಸಿ
ಸ್ನಾನ ಮಾಡುವಾದ ಶಾಂಪೂ ಅಥವಾ ಸಾಬೂನು ಬಳಕೆ ಮಾಡಬಾರದು. ಈ ಎರಡರ ಬದಲಾಗಿ ಮಣ್ಣು ಬಳಸಬೇಕೆಂದು ಪ್ರೇಮಾನಂದ ಜಿ ಮಹಾರಾಜರು ಹೇಳುತ್ತಾರೆ. ಎಣ್ಣೆ ಸ್ನಾನ ಮಾಡಿದಾಗ ದೇಹಕ್ಕೆ ಅಂಟಿಕೊಂಡಿರುವ ಜಿಡ್ಡು ಹೋಗಲಾಡಿಸಲು ಶಾಂಪೂ, ಸಾಬೂನು ಬದಲಾಗಿ ಮಣ್ಣು ಬಳಸಿದ್ರೆ ಉತ್ತಮ ಎಂದು ಪ್ರೇಮಾನಂದ ಜಿ ಮಹಾರಾಜ್ ಸಲಹೆ ನೀಡುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: ಚಳಿಗಾಲ ಅಂತ ಸುಡು ಬಿಸಿನೀರಿನಲ್ಲಿ ಸ್ನಾನ ಮಾಡ್ತೀರಾ? ಆ ಆಸಕ್ತಿಯೇ ಹೊರಟುಹೋದೀತು ಹುಷಾರ್!