ಇಡೀ ವಿಶ್ವದಲ್ಲೇ ಅತೀ ಹೆಚ್ಚು ಸ್ನಾನ ಮಾಡೋದು ಯಾವ ದೇಶದವರು?
ಸಾಮಾನ್ಯವಾಗಿ ಸ್ನಾನ ಸ್ವಚ್ಛತೆಯ ವಿಚಾರದ ಬಗ್ಗೆ ಹೇಳುವುದಾದರೆ ಚಳಿ ಪ್ರದೇಶದ ಜನ ಕಡಿಮೆ ಸ್ನಾನ ಮಾಡಿದರೆ ಸದಾ ಬೆವರುವ ಕರಾವಳಿಯ ಜನ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ನಾನ ಮಾಡುತ್ತಾರೆ. ಹಾಗಿದ್ದರೆ ಪ್ರಪಂಚದಲ್ಲೇ ದಿನಕ್ಕೆ ಅತೀ ಹೆಚ್ಚು ಭಾರಿ ಸ್ನಾನ ಯಾರು ಮಾಡ್ತಾರೆ ಎಂಬ ಕುತೂಹಲ ಅನೇಕರಲ್ಲಿ ಇರಬಹುದು. ಇದಕ್ಕೀಗ ಉತ್ತರ ಸಿಕ್ಕಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಒಂದು ಸಂಸ್ಕೃತಿ, ಆಚಾರ ವಿಚಾರ, ಭಾಷೆ, ಸಂಪ್ರದಾಯಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿನ ಹವಾಮಾನ, ವಾತಾವರಣಕ್ಕೆ ಹೊಂದಿಕೆಯಾಗುವಂತೆ ಆ ಪ್ರದೇಶದ ಜನರ ಸಂಸ್ಕೃತಿ ಆಚಾರ ವಿಚಾರಗಳಿರುತ್ತವೆ. ಉದಾಹರಣೆಗೆ ಒಂದೇ ಭಾಷೆಯನ್ನು ಜನ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ರಾಜ್ಯ ಒಂದೇ ಆದರೂ ಕನ್ನಡವೆಂಬ ಭಾಷೆಯಲ್ಲೇ ಎಷ್ಟೊಂದು ವಿಧಗಳಿವೆ ನೋಡಿ, ಮಂಗಳೂರು ಕನ್ನಡ, ಉತ್ತರ ಕರ್ನಾಟಕದ ಜನ ಮಾತನಾಡುವ ಕನ್ನಡ, ಮಂಡ್ಯ ಕನ್ನಡ ಬೆಂಗಳೂರು ಕನ್ನಡ ಹೀಗೆ ಒಂದೊಂದು ಕನ್ನಡವೂ ವಿಭಿನ್ನ ಹಾಗೆಯೇ ಮನುಷ್ಯರ ಆಚಾರ ವಿಚಾರಗಳು. ಸಾಮಾನ್ಯವಾಗಿ ಸ್ನಾನ ಸ್ವಚ್ಛತೆಯ ವಿಚಾರದ ಬಗ್ಗೆ ಹೇಳುವುದಾದರೆ ಚಳಿ ಪ್ರದೇಶದ ಜನ ಕಡಿಮೆ ಸ್ನಾನ ಮಾಡಿದರೆ ಸದಾ ಬೆವರುವ ಕರಾವಳಿಯ ಜನ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ನಾನ ಮಾಡುತ್ತಾರೆ. ಹಾಗಿದ್ದರೆ ಪ್ರಪಂಚದಲ್ಲೇ ದಿನಕ್ಕೆ ಅತೀ ಹೆಚ್ಚು ಭಾರಿ ಸ್ನಾನ ಯಾರು ಮಾಡ್ತಾರೆ ಎಂಬ ಕುತೂಹಲ ಅನೇಕರಲ್ಲಿ ಇರಬಹುದು. ಇದಕ್ಕೀಗ ಉತ್ತರ ಸಿಕ್ಕಿದೆ.
ಹಾಗಂತ ಈ ಪಟ್ಟಿಯಲ್ಲಿ ಭಾರತವಂತೂ ಮೊದಲ ಸ್ಥಾನದಲ್ಲಿಲ್ಲ ಎಂಬುದು ಅಚ್ಚರಿ ಎನಿಸಿದರು ನಿಜ. ಅಂದಹಾಗೆ ಬ್ರೆಜಿಲ್‌ನ ಜನ ದಿನಕ್ಕೆ ಅತೀ ಹೆಚ್ಚು ಬಾರಿ ಸ್ನಾನ ಮಾಡ್ತಾರಂತೆ. ಅಲ್ಲಿನ ಬೆಚ್ಚನೆಯ ವಾತಾವರಣವೂ ಜನ ಮತ್ತೆ ಮತ್ತೆ ಸ್ನಾನ ಮಾಡುವಂತೆ ಪ್ರೇರೆಪಿಸುತ್ತದೆಯಂತೆ. ಹಾಗೆಯೇ ಇಲ್ಲಿ ದಿನಕ್ಕೆ ಎರಡು ಮೂರು ಬಾರಿ ಸ್ನಾನ ಮಾಡುವುದು ಸಾಮಾನ್ಯ ವಿಚಾರವೆನಿಸಿದೆ. ಜನ ಬಿಸಿಲಿನ ವಾತಾವರಣದಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ಇದು ಸುಲಭ ವಿಧಾನವೂ ಆಗಿರುವುದರಿಂದ ಜನ ಹೆಚ್ಚಾಗಿ ಸ್ನಾನದ ಮೊರೆ ಹೋಗ್ತಿದ್ದಾರೆ.
ಬಿಸಿ ಮತ್ತು ಆರ್ದತ್ರೆಯ ಉಷ್ಣವಲಯದ ಹವಾಮಾನದಿಂದಾಗಿ, ಬ್ರೆಜಿಲ್‌ನಲ್ಲಿ, 'ಬಾನ್ಹೋ' ಅಥವಾ ಶವರ್ (ಸ್ನಾನ) ಪಾಲಿಸಲೇಬೇಕಾದ ಆಚರಣೆಯಾಗಿದೆ. ಆಗಾಗ ಸ್ನಾನ ಮಾಡುವುದು ಬ್ರೆಜಿಲಿಯನ್ ಜನರಿಗೆ ರೂಢಿಯಾಗಿದ್ದು, ಕೆಲವೊಮ್ಮೆ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿದರು ಅಚ್ಚರಿ ಏನಿಲ್ಲ. ಹಾಗೆಯೇ ಬ್ರೆಜಿಲಿಯನ್ನರು ಸ್ವಚ್ಛತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಅವರು ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ, ತಮ್ಮ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾರೆ ಮತ್ತು ದಿನಕ್ಕೆ ಹತ್ತು ಬಾರಿ ಹಲ್ಲುಜ್ಜುತ್ತಾರಂತೆ. ಹೆಚ್ಚಿನ ಬ್ರೆಜಿಲಿಯನ್ನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾರೆ, ಮತ್ತು ಬಿಸಿಯಾದ, ಆರ್ದ್ರ ಬೇಸಿಗೆಯಲ್ಲಿ, ಕೆಲವರು ದಿನಕ್ಕೆ ಐದು ಬಾರಿಯೂ ಸ್ನಾನ ಮಾಡಬಹುದು. ಕಾಂತಾರ್ ವರ್ಲ್ಡ್ ಪ್ಯಾನೆಲ್ ಪ್ರಕಾರ, ಬ್ರೆಜಿಲ್ ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ಸ್ನಾನ ಮಾಡುವ ದೇಶಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸರಾಸರಿ ಬ್ರೆಜಿಲಿಯನ್ ಓರ್ವ ವಾರಕ್ಕೆ 14 ಬಾರಿ ಸ್ನಾನ ಮಾಡುತ್ತಾರೆ. ಅಂದರೆ ದಿನಕ್ಕೆ ಎರಡು ಬಾರಿ ಸ್ನಾನ. ಆದರೆ ಜಾಗತಿಕ ಸರಾಸರಿಯಲ್ಲಿ ವಾರಕ್ಕೆ ಐದು ಬಾರಿ ಸ್ನಾನ ಮಾಡುವವರು ಹೆಚ್ಚಾಗಿರುವುದರಿಂದ ಬ್ರೇಜಿಲಿಯನ್ನರು ಯಾವುದೇ ದೇಶಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಸ್ನಾನ ಮಾಡುತ್ತಾರೆ ಎಂದು ತಿಳಿದು ಬಂದಿದೆ.