ಜಾರ್ಖಂಡ್‌ನಲ್ಲಿ ವಿದೇಶಿ ಮಹಿಳೆಯ ಮೇಲೆ ರೇಪ್‌ ಆದ ಘಟನೆಯ ಬಳಿಕ ಎಕ್ಸ್‌ನಲ್ಲಿ Whats wrong with India ಟ್ರೆಂಡ್‌ ಆಗುತ್ತಿದೆ, ಭಾರತದ ಕುರಿತಾಗಿ ಕೆಟ್ಟದಾಗಿ ಬಿಂಬಿಸುವ ಪೋಸ್ಟ್‌ಗಳನ್ನು ನಹಾಕಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಅದೇ ರೀತಿಯಲ್ಲೇ ಉತ್ತರ ನೀಡಿದೆ.

ನವದೆಹಲಿ (ಮಾ.13): ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಹೊಸದೇನಲ್ಲ. ಆದರೆ, ಕೆಲ ದಿನಗಳಿಂದ ಎಕ್ಸ್‌ನಲ್ಲಿ ವಾಟ್ಸ್‌ ರಾಂಗ್‌ ವಿತ್‌ ಇಂಡಿಯಾ ಎನ್ನುವ ಹೆಸರಿನಲ್ಲಿ ಭಾರತದ ಬಗ್ಗೆ ಕೆಟ್ಟದಾಗಿ ಬಿಂಬಿಸುವಂಥ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಸ್ಪೇನ್‌ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು ಟ್ರೆಂಡ್‌ ವೈರಲ್‌ ಆಗುತ್ತಿದೆ. ವಾಟ್ಸ್‌ ರಾಂಗ್‌ ವಿತ್‌ ಇಂಡಿಯಾ ಟ್ರೆಂಡ್‌ಗೆ ಭಾರತೀಯರು ಕೂಡ ತಿರುಗೇಟು ನೀಡಿದ್ದಾರೆ. ಇನ್ನು ಈ ಟ್ರೆಂಡ್‌ಗೆ ಟ್ವೀಟ್‌ ಮಾಡಿರುವ ಕೇಂದ್ರ ಸರ್ಕಾರದ ಮೈ ಗವ್‌ ಇಂಡಿಯಾ ಟ್ವಿಟರ್‌ ಹ್ಯಾಂಡಲ್‌, ಚಂದ್ರಯಾನ ಹಾಗೂ ಭಾರತದ ಕುರಿತಾಗಿ ಐಎಂಎಫ್‌ ಹೇಳಿರುವ ಅಂಶಗಳನ್ನು ಇರಿಸಿಕೊಂಡು ತಿರುಗೇಟು ನೀಡಿದೆ. ಮಂಗಳವಾರ ಈ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಲಾಗಿತ್ತು. ಭಾರತದಲ್ಲಿ ಇರುವ ಬಯಲು ಮಲವಿಸರ್ಜನೆ, ಪ್ರಾಣಿಗಳ ಮೇಲೆ ಅತ್ಯಾಚಾರ ಮಾಡುವ ಜನರು ಎನ್ನುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಇನ್ನು ಭಾರತೀಯರು ಇದಕ್ಕೇನು ಕಮ್ಮಿ ಎನ್ನುವಂತೆ ವಿದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು, ಚಿತ್ರವಿಚಿತ್ರ ಘಟನೆಗಳು, ಶೂಟೌಟ್‌ಗಳ ಕುರಿತಾಗಿ ಪೋಸ್ಟ್‌ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

ಒಬ್ಬ ವ್ಯಕ್ತಿ ವಾಟ್ಸ್‌ ರಾಂಗ್‌ ವಿತ್‌ ಇಂಡಿಯಾ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಭಾರತದ ರಸ್ತೆಗಳು ಡ್ರಗ್‌ ವ್ಯಸನಿಗಳಿಂದಲೇ ತುಂಬಿರುತ್ತವೆ ಎಂದು ಬರೆದುದ್ದು, ಅದಕ್ಕೆ ಕುಚೋದ್ಯ ಎನ್ನುವಂತೆ ಅಮೆರಿಕದ ರಸ್ತೆಗಳಲ್ಲಿ ಡ್ರಗ್‌ ವ್ಯಸನಿಗಳು ಮುಕ್ತವಾಗಿ ತಿರುಗಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

ಮಂಗಳವಾರ ಈ ಟ್ರೆಂಡ್‌ ಉತ್ತುಂಗಕ್ಕೆ ಹೋಗಲು ಕಾರಣವಾಗಿದ್ದು, ಈ ಹ್ಯಾಶ್‌ಟ್ಯಾಗ್‌ನಲ್ಲಿ ಕೇಂದ್ರ ಸರ್ಕಾರದ ಹ್ಯಾಂಡಲ್‌ ಮಾಡಿರುವ ಪೋಸ್ಟ್‌. ವಾಟ್ಸ್‌ ರಾಂಗ್‌ ವಿತ್‌ ಇಂಡಿಯಾ ಎನ್ನುವ ಟ್ಯಾಗ್‌ನಲ್ಲಿಯೇ ಮೈ ಗವ್‌ ಇಂಡಿಯಾ (@mygovIndia) ಟ್ಯಾಗ್‌, ದೇಶದ ಸಾಧನೆಗಳ ಕುರಿತಾದ ಪೋಸ್ಟ್‌ ಮಾಡಿತ್ತು.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ, ಭಾರತ ಕಡುಬಡತನವನ್ನು ಹೆಚ್ಚೂಕಡಿಮೆ ನಿರ್ನಾಮ ಮಾಡಿದೆ ಎನ್ನುವ ಶ್ಲಾಘನೆಯ ಮಾಧ್ಯಮ ಸುದ್ದಿಯನ್ನು ಪೋಸ್ಟ್‌ ಮಾಡಿದೆ. ಅದರೊಂದಿಗೆ ಚಂದ್ರಯಾನದ ವೇಳೆ ಚಂದ್ರನ ದಕ್ಷಿಣದ ತುದಿಯನ್ನು ತಲುಪಿದ ವಿಶ್ವದ ಮೊಟ್ಟಮೊದಲ ದೇಶ ಎನ್ನುವ ಹೆಮ್ಮೆಯನ್ನು ಪೋಸ್ಟ್‌ ಮಾಡಿದೆ. ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಐಎಂಎಫ್‌ ಶ್ಲಾಘನೆಯನ್ನು ಪೋಸ್ಟ್‌ ಮಾಡಿದೆ. ಅದರೊಂದಿಗೆ ದೇಶದ ಡಿಜಿಟಲ್‌ ಯಶಸ್ಸಿನ ಕುರಿತಾಗಿ ಈ ಟ್ರೆಂಡ್‌ನಲ್ಲಿ ವಿಚಾರ ದಾಖಲಿಸಿದೆ.

ಈ ಹುಡುಗಿ ಬಂಗಾರ ಕೇಳ್ಲಿ, ದುಬಾರಿ ಬ್ಯಾಗ್ ಕೇಳ್ಲಿ ಗಪ್ ಚುಪ್ಪಾಗಿ ಎಲ್ಲ ಕೊಡಿಸ್ತಾರೆ ಹುಡುಗ್ರು!

ಮಂಗಳವಾರದ ವೇಳೆ ಈ ಟ್ರೆಂಡ್‌ ಎಕ್ಸ್‌ನಲ್ಲಿ ಅಂದಾಜು 3 ಲಕ್ಷ ಟ್ವೀಟ್‌ಅನ್ನು ದಾಟಿತ್ತು. ಇನ್ನು ದೇಶದ ಪ್ರಗತಿಯನ್ನು ಬಿಂಬಿಸುವಂಥ ಭಾರತದ ನಾಗರೀಕರು ಪೋಸ್ಟ್‌ ಮಾಡಿರುವ ಟ್ವೀಟ್‌ಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಲಕ್ಷಗಟ್ಟಲೆ ಲೈಕ್ಸ್‌ ಬಂದಿವೆ. 

50 ವರ್ಷದಿಂದ ಕುಡಿದಿಲ್ಲ ನೀರು, ಬರೀ ಕೋಕೇ ಜೀವ ಜಲವಂತೆ ಇವ್ನಿಗೆ, ಹೇಗ್ ಬದುಕಿದ ಅಂತಿದ್ದಾರೆ ನೆಟ್ಟಿಗರು!