ಪೌರತ್ವ ತಿದ್ದುಪಡಿ ಕಾಯ್ದೆ-2019ರ ಬಗ್ಗೆ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯ ಕಿಚ್ಚು ಈಶಾನ್ಯ ರಾಜ್ಯಗಳು ಮಾತ್ರವಲ್ಲದೆ ದೆಹಲಿ, ಪಂಜಾಬ್‌ ಸೇರಿದಂತೆ ದೇಶಾದ್ಯಂತ ವ್ಯಾಪಿಸಿದೆ. ಆದರೆ ಈ ಕಾಯ್ದೆಯ ನಿಜ ಅಂಶಗಳೇನು, ಅದು ನಿಜಕ್ಕೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತದೆಯೇ ಎಂಬ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಆ ಎಲ್ಲ ಗೊಂದಲಗಳಿಗೆ ಉತ್ತರ ಇಲ್ಲಿದೆ.

1. ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ ಏನು?

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎಂದರೆ ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಷ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಕಿರುಕುಳ ಅನುಭವಿಸಿ, ಬದುಕಲಾಗದೆ 31 ಡಿಸೆಂಬರ್‌ 2014ಕ್ಕಿಂತ ಮುಂಚೆ ಭಾರತದೊಳಗೆ ಓಡಿಬಂದ ಹಿಂದೂ, ಜೈನ, ಭೌದ್ಧ, ಕ್ರಿಶ್ಚಿಯನ್‌, ಪಾರ್ಸಿ ಮತ್ತು ಸಿಖ್ಖರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಿ ಅವರಿಗೆ ಭಾರತದ ಪೌರತ್ವ ನೀಡುವುದು.

2. ಮೂರೇ ಮೂರು ದೇಶಗಳ ಅಕ್ರಮ ವಲಸಿಗರಿಗೆ ಮಾತ್ರ ಪೌರತ್ವ ನೀಡುತ್ತಿರುವುದೇಕೆ?

ಪಾಕಿಸ್ತಾನ, ಬಾಂಗ್ಲಾ ದೇಶ ಮತ್ತು ಅಷ್ಘಾನಿಸ್ತಾನದಲ್ಲಿ ಹಿಂದು, ಸಿಖ್‌, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದ ಅಲ್ಪಸಂಖ್ಯಾತರು ವ್ಯವಸ್ಥಿತವಾಗಿ ಕಿರುಕುಳಕ್ಕೆ ಒಳಪಟ್ಟಿದ್ದಕ್ಕೆ ದಾಖಲೆಗಳಿವೆ. ವಿಶೇಷವಾಗಿ ಪಾಕಿಸ್ತಾನದಲ್ಲಿ ದೀರ್ಘಕಾಲಿಕ ಕಿರುಕುಳದ ಇತಿಹಾಸವೇ ಇದೆ. ಇತ್ತೀಚೆಗಿನ ವಿಶ್ವಸಂಸ್ಥೆಯ ವರದಿ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಮೂರು ದಿನ ನಿಷೇಧಾಜ್ಞೆ: ಏನೇನ್ ಇರುತ್ತೆ..? ಏನೇನ್ ಇರಲ್ಲ?

3.ಹೊಸ ತಿದ್ದುಪಡಿ ಕಾಯ್ದೆಯು ಮೂರು ದೇಶಗಳ ಮುಸ್ಲಿಮೇತರರಿಗೆ ಹೇಗೆ ಸಹಾಯಕ?

ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರು ಇಲ್ಲಿನ ಪೌರತ್ವ ಪಡೆಯಲು ಮೊದಲಿನಂತೆ 11 ವರ್ಷ ಕಾಯದೆ ಈಗಾಗಲೇ 5 ವರ್ಷ ನೆಲೆಸಿದ್ದರೆ ಭಾರತದ ಪೌರತ್ವ ಪಡೆಯಬಹುದು.

4. ಈ ಕಾಯ್ದೆಯು ಭಾರತೀಯರ (ಹಿಂದು, ಮುಸ್ಲಿಂ ಅಥವಾ ಬೇರೆ ಧರ್ಮ) ಮೇಲೆ ಪ್ರಭಾವ ಬೀರುತ್ತಾ?

ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯರ ಹಕ್ಕನ್ನು ಯಾವುದೇ ರೀತಿಯಲ್ಲೂ ಕಸಿದುಕೊಳ್ಳುವುದಿಲ್ಲ.

5. ಡಿಸೆಂಬರ್‌ 2014ರ ನಂತರ ಬಂದ ಅಕ್ರಮ ವಲಸಿಗರನ್ನು ತಕ್ಷಣವೇ ಗಡಿಪಾರು ಮಾಡಲಾಗುತ್ತದೆಯೇ?

ಇಲ್ಲ. ಅವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. 1955ರ ಮೂಲ ಕಾಯ್ದೆಯಲ್ಲಿ ಇರುವಂತೆ ನೈಸರ್ಗಿಕ ದೇಶೀಕರಣದ ಮೂಲದ ಇಲ್ಲಿನ ಪೌರತ್ವ ಪಡೆಯಬಹುದು.

ಬೆಂಗಳೂರಲ್ಲೂ 3 ದಿನ ನಿಷೇಧಾಜ್ಞೆ

6. ಪಾಕಿಸ್ತಾನ, ಅಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಈಗಾಗಲೇ ವಲಸೆ ಬಂದ ಮುಸ್ಲಿಮರು ಭಾರತದ ಪೌರತ್ವ ಪಡೆಯಲು ಸಾಧ್ಯವೇ ಇಲ್ಲವೇ?

ಇದೆ. ಅವರು ಮೊದಲಿನಂತೆಯೇ 11 ವರ್ಷ ಕಾದು, ನೈಸರ್ಗಿಕ ದೇಶೀಕರಣದ ಮೂಲಕ ಭಾರತದ ಪೌರತ್ವ ಪಡೆಯಬಹುದು.

7.ಶ್ರೀಲಂಕಾದಲ್ಲಿ ತಮಿಳರೂ ಕಿರುಕುಳ ಅನುಭವಿಸಿದ್ದರಲ್ಲ. ಅವರನ್ನೇಕೆ ಪರಿಗಣಿಸಿಲ್ಲ?

ಶ್ರೀಲಂಕಾದಲ್ಲಿ ಯುದ್ಧ ಮುಗಿದು ದಶಕವಾಗುತ್ತಾ ಬಂತು. ಇನ್ನು, ಶ್ರೀಲಂಕಾದಲ್ಲಿ ಧಾರ್ಮಿಕ ನೆಲೆಗಟ್ಟಿನ ಆಧಾರದ ಮೇಲೆ ಕಿರುಕುಳ ನಡೆದಿಲ್ಲ. ಜನಾಂಗೀಯ ದ್ವೇಷವಿದ್ದಿರಬಹುದು. ಅಲ್ಲದೆ ಅಲ್ಲಿನ ಅಂತರ್ಯುದ್ಧ ಮುಗಿದ ನಂತರ ಶ್ರೀಲಂಕನ್ನರು ತಮಿಳರ ಸಾಂಸ್ಥಿಕ ತಾರತಮ್ಯವನ್ನು ವ್ಯವಸ್ಥಿತವಾಗಿ ಕೊನೆಗೊಳಿಸಿದ್ದಾರೆ.

8.ವಿಶ್ವಸಂಸ್ಥೆಯ ನಿಯಮಾವಳಿಗಳ ಪ್ರಕಾರ ಭಾರತಕ್ಕೆ ನಿರಾಶ್ರಿತರನ್ನು ನೋಡಿಕೊಳ್ಳುವ ಹೊಣೆ ಅಥವಾ ಬಾಧ್ಯತೆಯಿದೆಯೇ?

ಇದೆ. ಭಾರತ ಈ ಹೊಣೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನೇನೂ ಮಾಡುತ್ತಿಲ್ಲ. ಆದರೆ ಇಲ್ಲಿಗೆ ಅಕ್ರಮವಾಗಿ ವಲಸೆ ಬಂದ ನಿರಾಶ್ರಿತರಿಗೆ ಪೌರತ್ವ ನೀಡುವ ಯಾವ ಬಾಧ್ಯತೆಯೂ ಭಾರತಕ್ಕಿಲ್ಲ. ನೈಸರ್ಗಿಕ ದೇಶೀಕರಣಕ್ಕೆ ಪ್ರತಿಯೊಂದು ದೇಶವೂ ತನ್ನದೇ ಆದ ನಿಯಮ ಹೊಂದಿದೆ. ಈ ಕಾನೂನಿನಡಿಯಲ್ಲಿ ಭಾರತ ಯಾವುದೇ ನಿರಾಶ್ರಿತರನ್ನು ಮರಳಿ ಅವರ ಮೂಲ ದೇಶಕ್ಕೆ ವಾಪಸ್‌ ಕಳುಹಿಸುವುದಿಲ್ಲ. ಆ ದೇಶದಲ್ಲಿನ ಪರಿಸ್ಥಿತಿಗಳು ಸುಧಾರಿಸಿದಾಗ ಒಂದಲ್ಲಾ ಒಂದು ದಿನ ಅವರು ತಮ್ಮ ತಾಯ್ನಾಡಿಗೆ ಮರಳುತ್ತಾರೆ ಎಂಬ ನಿರೀಕ್ಷೆಯೊಂದಿಗೆ ವಿಶ್ವಸಂಸ್ಥೆ ನಿಯಮಗಳ ಅಡಿಯಲ್ಲಿ ಅವರ ಆತಿಥ್ಯ ವಹಿಸುತ್ತದೆ. ಆದರೆ ಈ 3 ದೇಶಗಳ ಅಲ್ಪಸಂಖ್ಯಾತರ ವಿಷಯದಲ್ಲಿ, ಆ ದೇಶಗಳ ಕಿರುಕುಳದ ವಾತಾವರಣವು ಎಂದಿಗೂ ಸುಧಾರಿಸುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ

9. ಅಷ್ಘಾನಿಸ್ತಾನದ ಬಲೂಚಿಗಳು, ಪಾಕಿಸ್ತಾನದ ಅಹ್ಮದಿಯಾಗಳು ಮತ್ತು ಮ್ಯಾನ್ಮಾರ್‌ನ ರೋಹಿಂಗ್ಯಾಗಳನ್ನು ಈ ಕಾಯ್ದೆಯಡಿ ಏಕೆ ಪರಿಗಣಿಸಿಲ್ಲ?

ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅವರನ್ನೂ ಪರಿಗಣಿಸಿ ಪೌರತ್ವ ನೀಡಲು ಅವಕಾಶವಿದೆ. ಆದರೆ, ಈ ಕಾಯ್ದೆಯಡಿ ಅವರಿಗೆ ಪೌರತ್ವ ಲಭಿಸುವುದಿಲ್ಲ.

11.ಎಷ್ಟುಜನ ಮುಸ್ಲಿಮೇತರರಿಗೆ ಹೊಸ ಕಾಯ್ದೆಯಡಿ ಭಾರತದ ಪೌರತ್ವ ಲಭಿಸಲಿದೆ?

ಬಾಂಗ್ಲಾ, ಪಾಕಿಸ್ತಾನ ಮತ್ತು ಅಷ್ಘಾನಿಸ್ತಾದಿಂದ ಬಂದ ಮುಸ್ಲಿಮೇತರರು ಎಷ್ಟುಜನರಿದ್ದಾರೆ ಎಂಬ ಬಗ್ಗೆ ಅಧಿಕೃತ ದಾಖಲೆಗಳಿಲ್ಲ. ಆದರೆ ಗುಪ್ತಚರ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ 6 ಧರ್ಮಗಳ 31,313 ವಲಸಿಗರು ದೀರ್ಘಕಾಲಿಕ ವೀಸಾ ಪಡೆದು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹಿಂದುಗಳು 25,447, ಸಿಖ್ಖರು 5,807, ಕ್ರಿಶ್ಚಿಯನ್ನರು 55, ಬೌದ್ಧರು 2 ಮತ್ತು ಪಾರ್ಸಿಗಳು 2.

12.ಈಶಾನ್ಯ ಭಾರತದಲ್ಲಿ ಕಾಯ್ದೆಗೆ ವಿರೋಧ ಏಕೆ?

ಅಕ್ರಮ ವಲಸಿಗರಿಗೆ ಭಾರತದ ಕಾಯಂ ಪೌರತ್ವ ನೀಡುವುದರಿಂದ ತಮ್ಮ ನೆಲದಲ್ಲಿ ತಾವೇ ಅಲ್ಪಸಂಖ್ಯಾತರಾಗಬಹುದು, ವಲಸಿಗರು ತಮ್ಮ ಭೂಮಿ, ಅವಕಾಶ ಮತ್ತು ಹಕ್ಕುಗಳನ್ನು ಕಿತ್ತುಕೊಳ್ಳಬಹುದು, ಜನಸಂಖ್ಯೆ ಹೆಚ್ಚಬಹುದು, ಅದು ತಮ್ಮ ಸ್ಥಳೀಯ, ಭಾಷೆ ಮತ್ತು ಸಂಸ್ಕೃತಿಯ ಪರಿಣಾಮ ಬೀರುತ್ತದೆ ಎಂಬುದು ಈಶಾನ್ಯ ರಾಜ್ಯದ ಜನರ ಆತಂಕ.

10. ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು ಯಾವುವು? ಅವುಗಳ ವಿರೋಧಕ್ಕೆ ಕಾರಣ ಏನು?

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮತ ಹಾಕಿವೆ. ಆದರೆ ಈ ಕಾಯ್ದೆ ವಿರೋಧಿಸಿ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಅವುಗಳಲ್ಲಿ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಿಪಿಐ(ಎಂ) ಮತ್ತಿತರ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದರಿಂದ ತಿದ್ದುಪಡಿ ಕಾಯ್ದೆಯು ಸಂವಿಧಾನದ ಸಮಾನತೆ ಹಕ್ಕು ಮತ್ತು ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದು ಅವುಗಳ ವಾದ.

11. ಎಲ್ಲಿಲ್ಲಿ ಈ ಕಾಯ್ದೆ ಅನ್ವಯವಾಗುವುದಿಲ್ಲ?

ಬುಡಕಟ್ಟು ಜನಾಂಗಗಳು ವಾಸವಿರುವ ಸಂವಿಧಾನದ 6ನೇ ಪರಿಚ್ಛೇದ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗುವುದಿಲ್ಲ. ಹಾಗೆಯೇ ಇನ್ನರ್‌ ಲೈನ್‌ ಪರ್ಮಿಟ್‌ ವ್ಯವಸ್ಥೆ ಹೊಂದಿರುವ ಅರುಣಾಚಲ ಪ್ರದೇಶ, ಮಿಜೋರಂ ಮತ್ತು ನಾಗಾಲ್ಯಾಂಡ್‌, ಮಣಿಪುರಕ್ಕೂ ಇದು ಅನ್ವಯಿಸುವುದಿಲ್ಲ. ಅಸ್ಸಾಂ, ಮತ್ತು ತ್ರಿಪುರದ ಕೆಲ ಭಾಗಗಳು ಮಾತ್ರ 6ನೇ ಪರಿಚ್ಛೇದದ ವ್ಯಾಪ್ತಿಗೆ ಒಳಪಡುತ್ತವೆ. ಮೆಘಾಲಯವು ಪೂರ್ಣವಾಗಿ ಈ ಪರಿಚ್ಛೇದದ ವ್ಯಾಪ್ತಿಗೊಳಪಡುತ್ತದೆ.

10. ಬೇರೆ ದೇಶಗಳ ವಲಸಿಗರು ಭಾರತದ ಪೌರತ್ವ ಪಡೆಯುವುದು ಹೇಗೆ?

ಪೌರತ್ವ ಕಾಯ್ದೆ-1955ರ ಪ್ರಕಾರ ವಲಸಿಗರು ಭಾರತದ ಪೌರತ್ವ ಪಡೆಯಲು ನಿರ್ದಿಷ್ಟದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸುವ ದಿನದಿಂದ ಹಿಂದೆ 12 ತಿಂಗಳು ಭಾರತದಲ್ಲಿ ನಿರಂತರವಾಗಿ ನೆಲೆಸಿರಬೇಕು. ಹಾಗೂ ಕಳೆದ 14 ವರ್ಷಗಳಲ್ಲಿ ಕನಿಷ್ಠ 11 ವರ್ಷ ಭಾರತದಲ್ಲಿ ಕಡ್ಡಾಯವಾಗಿ ನೆಲೆಸಿರಬೇಕು. ಹೊಸ ತಿದ್ದುಪಡಿ ಕಾಯ್ದೆಯಲ್ಲಿ 6 ಧರ್ಮಗಳ ವಲಸಿಗರಿಗೆ ಇದರಲ್ಲಿ ವಿನಾಯ್ತಿ ನೀಡಿ, 11 ವರ್ಷದ ಬದಲಿಗೆ ಕೇವಲ 5 ವರ್ಷ ನೆಲೆಸಿದ್ದರೆ ಭಾರತದ ಪೌರತ್ವ ನೀಡಲಾಗುತ್ತದೆ ಎಂದಿದೆ.