ರಾಜ್ಯದಲ್ಲಿ ಮೂರು ದಿನ ನಿಷೇಧಾಜ್ಞೆ: ಏನೇನ್ ಇರುತ್ತೆ..? ಏನೇನ್ ಇರಲ್ಲ?

ಪೌರತ್ವದ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ| ಬೆಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲೂ ಮೂರು ದಿನ 144 ಜಾರಿ| ಡಿ. 19ರ ಬೆಳಗ್ಗೆಯಿಂದ ಡಿ. 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ| ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣು| ಕಲಬುರಗಿ ಹೊರತು ಪಡಿಸಿ, ರಾಜ್ಯದ ಶಾಲಾ ಕಾಲೇಜ್ಗಳಿಗಿಲ್ಲ ರಜೆ

Protest Against Citizenship Act Section 144 Imposed On Karnataka List Of Availabilities And Unavailabilities

ಬೆಂಗಳೂರು[ಡಿ.19]: ಪೌರತ್ವ ಕಾಯ್ದೆ ವಿರೋಧಿಸಿ ದೇಶದ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ಕಿಚ್ಚು ರಾಜ್ಯಕ್ಕೂ ಹಬ್ಬಿದ್ದು, ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಆರಂಭವಾಗಿದೆ. ಹೀಗಿರುವಾಗ ಮುಂಜಾಗೃತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳು ಮುಂದಿನ ಮೂರು ದಿನ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 

ಡಿ. 19ರ ಬೆಳಗ್ಗೆಯಿಂದ ಡಿ. 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಜನ ಸಾಮಾನ್ಯರು ಗೊಂದಲಕ್ಕೀಡಾಗಿದ್ದಾರೆ. ಸಂಚಾರಿ ವ್ಯವಸ್ಥೆ ಇರುತ್ತಾ? ಶಾಲಾ ಕಾಲೇಕುಗಳ ಕತೆ ಏನು? ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ ಎಂಬಿತ್ಯಾದಿ ಸವಾಲುಗಳು ಎದ್ದಿವೆ. ಹೀಗಿರುವಾಗ ಮುಂದಿನ ಮೂರು ದಿನ ಯಾವೆಲ್ಲಾ ವ್ಯವಸ್ಥೆಗಳಿರುತ್ತೆ? ಯಾವುದೆಲ್ಲಾ ಇರುವುದಿಲ್ಲ? ಇಲ್ಲಿದೆ ವಿವರ

"

ಏನೇನ್ ಇರುತ್ತೆ..? ಏನೇನ್ ಇರೋಲ್ಲ?

- ರಾಜ್ಯದ ಶಾಲಾ ಕಾಲೇಜ್ಗಳಿಗಿಲ್ಲ ರಜೆ

- ಎಂದಿನಂತೆ ಓಡಾಡಲಿವೆ ಬಸ್, ರೈಲು, ಬಿಎಂಟಿಸಿ, ಮೆಟ್ರೋ 

- ಅಂಗಡಿ, ಮುಂಗಟ್ಟುಗಳು ಓಪನ್

- ಮಾರುಕಟ್ಟೆ, ಮದ್ಯದಂಗಡಿಗಳಿಗಿಲ್ಲ ನಿಷೇಧಾಜ್ಞೆ ಬಿಸಿ

- ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ 

- ಮಾಲ್, ಥಿಯೇಟರ್ ಎಂದಿನಂತೆ ಓಪನ್

- ಖಾಸಗಿ ಕಾರ್ಯಕ್ರಮ (ಮದುವೆ, ಇತರೆ)ಗಳಿಗೆ ಅವಕಾಶ

ಪೊಲೀಸರ ನಿಬಂಧನೆಗಳೇನು..? 

- ಸಾರ್ವಜನಿಕೆ ಮೆರವಣಿಗೆ, ಅನುಮತಿಯಿಲ್ಲದ ಧರಣಿಗೆ ನಿಷಿದ್ಧ

- ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ

- ಶಸ್ತ್ರ, ಬಡಿಗೆ ಖಡ್ಗ, ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ

- ಪಟಾಕಿ, ಸ್ಫೋಟಕ ವಸ್ತುಗಳು ನಿಷಿದ್ಧ

- ಬಸ್ಗಳ ಮೇಲೆ ಕಲ್ಲು ತೂರಿದ್ರೆ ಪಕ್ಕಾ ಕ್ರಮ

- ಕಾಯ್ದೆ ವಿರುದ್ಧ ಘೋಷಣೆ ಕೂಗುವಂತಿಲ್ಲ, ಧರಣಿ ಮಾಡುವಂತಿಲ್ಲ 

ನಾಳೆ [ಗುರುವಾರ] ಕರ್ನಾಟಕದೆಲ್ಲೆಡೆ 144 ಸೆಕ್ಷನ್ ಜಾರಿ: ನೋ ಅವಾಜ್..ನೋ ಸೌಂಡ್

Latest Videos
Follow Us:
Download App:
  • android
  • ios