ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಏನಿರುತ್ತೆ.? ಏನಿರೋಲ್ಲ...?
ಎರಡನೇ ಹಂತದ ಲಾಕ್ಡೌನ್ ಪೂರ್ಣಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಿಸಿದೆ. ಮೇ 17ರ ವರೆಗೆ ಈ ಲಾಕ್ ಡೌನ್ ಮುಂದುವರಿಯಲಿದ್ದು, ರೆಡ್ ಜೋನ್ ವಲಯದಲ್ಲಿ ಇದು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿದೆ. ಹಾಗಾದ್ರೆ ಏನಿರುತ್ತೆ ? ಏನು ಇರೋಲ್ಲ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ನವದೆಹಲಿ, (ಮೇ.01): ಲಾಕ್‌ಡೌನ್ ಮತ್ತೆ ಎರಡು ವಾರ ವಿಸ್ತರಣೆ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಮೇ.4ರಿಂದ 17ರ ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯ ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು ಮೂರು ಝೋನ್ ಗಳಾಗಿ ವಿಂಗಡಿಸಿದೆ. ಆರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಕೆಲ ಸಡಿಲಿಕೆಗಳನ್ನು ನೀಡಿದ್ದು ರೆಡ್ ಜೋನ್ ನಲ್ಲಿ ಎಂದಿನಂತೆ ಲಾಕ್ ಡೌನ್ ಮಾರ್ಗಸೂಚಿ ಆದೇಶ ಮುಂದುವರೆಯಲಿದೆ.
ಲಾಕ್‌ಡೌನ್ ವಿಸ್ತರಣೆ: ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಘೋಷಣೆ, ಎಷ್ಟು ದಿನ?
ಕೆಂಪು ಮತ್ತು ಕಿತ್ತಳೆ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಜನರ ಸಂಚಾರವನ್ನು ತುರ್ತು ವೈದ್ಯಕೀಯ ಸಂದರ್ಭ ಹಾಗೂ ಅಗತ್ಯ ವಸ್ತುಗಳ ಸಾಗಾಣಿಕೆ ಹೊರತುಪಡಿಸಿ, ಸಂಪೂರ್ಣವಾಗಿ ನಿರ್ಭಂಧಿಸಬೇಕು. ಅಲ್ಲಿನ ಸೋಂಕು ಪರಿಸ್ಥಿತಿಯ ಮೇಲೆ ತೀರ್ವ ನಿಗಾ ವಹಿಸಿ ಸೋಂಕು ಹರಡುವುದನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ
ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್‌ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ. ಅದು ಈ ಕೆಳಗಿನಂತಿವೆ ನೋಡಿ.
* ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ.
* ಶಾಲಾ-ಕಾಲೇಜುಗಳಿಗೆ ಎಂದಿನಂತೆ ಲಾಕ್ ಡೌನ್ ಮುಗಿಯುವವರೆಗೂ ರಜೆ ಘೋಷಿಸಲಾಗಿದೆ.
* ಎಲ್ಲಾ ಆಸ್ಪತ್ರೆಯ OPD ತೆರೆಯಲು ಸೂಚನೆ
* ಸಾರಿಗೆ ಸಂಚಾರಕ್ಕೆ ನಿರ್ಬಂಧವಿದ್ದು, ವಿಮಾನ, ರೈಲುಗಳ ಸಂಚಾರವೂ ಇರುವುದಿಲ್ಲ. ಗ್ರೀನ್ ಝೋನ್ ವಲಯದಲ್ಲಿ ಈಗಾಗಲೇ ಘೋಷಿಸಲಾಗಿರುವ ವಿನಾಯಿತಿಗಳು ಮುಂದುವರಿಯುತ್ತವೆ.
* ಮೂರೂ ವಲಯಗಳಲ್ಲಿ ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದ್ದು, ಪಬ್, ಕ್ಲಬ್, ಚಿತ್ರಮಂದಿರ, ಮಾಲ್ ಗಳನ್ನು ತೆರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.
* ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಬೈಕಿನಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬಹುದಾಗಿದೆ. ಆರೆಂಜ್ ಝೋನ್ ನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
* ಮಕ್ಕಳು ಮತ್ತು ವಯೋವೃದ್ಧರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದು, ಉಳಿದವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಬರಬಹುದಾಗಿದೆ.
* ಗ್ರೀನ್ ಝೋನ್ ನಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಶೇಕಡಾ 50 ಸೀಟುಗಳನ್ನು ಮಾತ್ರ ಭರ್ತಿ ಮಾಡಬಹುದಾಗಿದೆ.